ಕರ್ನಾಟಕ

karnataka

ETV Bharat / technology

ಹೆಚ್ಚಾಗುತ್ತಿದೆಯಂತೆ ದಿನದ ಅವಧಿ!!: ಭೂಮಿ ತಿರುಗುವಿಕೆ ಕುರಿತು ಅಚ್ಚರಿ ಮಾಹಿತಿ ನೀಡಿದ ವಿಜ್ಞಾನಿಗಳು - the length of the day on Earth - THE LENGTH OF THE DAY ON EARTH

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಂಶೋಧಕರು ಭೂಮಿ ಮೇಲಿನ ದಿನದ ಅವಧಿ ಕೆಲವು ಸೆಕೆಂಡ್​ಗಳ ಕಾಲ ಹೆಚ್ಚಾಗುತ್ತಿದೆ ಎಂದಿದ್ದಾರೆ. ಈ ವಿಚಾರ ಈಗ ಭಾರಿ ಅಚ್ಚರಿಗೆ ಕಾರಣವಾಗಿದೆ.

the-length-of-the-day-on-earth-is-increasing-by-a-few-leap-seconds
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

By ETV Bharat Karnataka Team

Published : Jun 15, 2024, 2:27 PM IST

ನವದೆಹಲಿ:ಇದೀಗ ಭೂಮಿಯಲ್ಲಿ ದಿನದ ಅವಧಿ ಹೆಚ್ಚಾದಂತೆ ಭಾಸವಾಗುತ್ತಿದೆ ಎಂದು ನಿಮಗೆ ಅನ್ನಿಸುತ್ತಿದ್ದರೆ, ಹೌದು ಭೂಮಿಯಲ್ಲಿ ದಿನದ ಅವಧಿ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಅಮೆರಿಕದಲ್ಲಿನ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಂಶೋಧಕರು ಈ ಬಗ್ಗೆ ತಿಳಿಸಿದ್ದಾರೆ. ಭೂಮಿಯ ಕೇಂದ್ರ ಭಾಗ (ಕೋರ್ ಅಥವಾ ಭೂ ಗರ್ಭ​) ತಿರುಗುವಿಕೆಯ ವೇಗ ಕಡಿಮೆ ಮಾಡುತ್ತಿದೆ. ಇದರಿಂದಾಗಿ ಭೂಮಿ ಮೇಲಿನ ದಿನದ ಅವಧಿ ಕೆಲವು ಸೆಕೆಂಡ್​ಗಳ ಕಾಲ ಹೆಚ್ಚಾಗಿದೆ ಎಂದಿದ್ದಾರೆ.

ಭೂ ಕಂಪನದ ದತ್ತಾಂಶದ ಮೇಲೆ ಈ ಅಧ್ಯಯನ ನಡೆಸಲಾಗಿದೆ. 2010ರಲ್ಲಿ ಭೂಗರ್ಭದ ಒಳಭಾಗ ನಿಧಾನವಾಗಿರುವುದು ಕಂಡು ಬಂದಿತು. ಇದೀಗ ಈ ಭೂಗರ್ಭದ ಒಳಭಾಗ ಉಲ್ಟಾ ತಿರುಗುತ್ತಿದೆ. ಇದರಿಂದಾಗಿ ಬಾಹ್ಯಕಾಲದಲ್ಲಿ ಭೂಮಿಯ ತಿರುಗುವಿಕೆ ಮೇಲೆ ಪರಿಣಾಮ ಬೀರಿದೆ. ಈ ವ್ಯತ್ಯಾಸವನ್ನು ಗಮನಿಸುವುದು ಬಹಳ ಕಷ್ಟ ಎಂದಿದ್ದಾರೆ ವಿಜ್ಞಾನಿಗಳು. ಭೂಮಿ ಎಲ್ಲಾ ಸಮಯದಲ್ಲಿ ಒಂದೇ ವೇಗದಲ್ಲಿ ತಿರುಗುವುದಿಲ್ಲ. 1972ರಿಂದ ಭೂಮಿಯ ದಿನದ ಉದ್ದದ ಆಧಾರದ ಮೇಲೆ ಪ್ರತಿ ಕೆಲವು ವರ್ಷಗಳಿಗೊಮ್ಮ ಒಂದು ದೀರ್ಘ ಸೆಕೆಂಡ್​ ದರದ ಮೇಲೆ ಈ ಲೆಕ್ಕವನ್ನು ಸೇರಿಸಲಾಗುತ್ತಿದೆ.

ನಾಲ್ಕು ರಚನೆಗಳನ್ನು ಹೊಂದಿರುವ ಭೂಮಿ: ಭೂಮಿ ಅನೇಕ ಪದರಗಳಿಂದ ಕೂಡಿದ್ದು, ಭೂಮಿಯ ಮೇಲ್ಬಾಗ ಗಡಸಾಗಿದ್ದು ಇದು ಶೀಲಾಗೋಳ ಚಿಪ್ಪು ಹೊಂದಿದೆ. ಅದರ ಕೆಳಗೆ ಕವಚವಿದೆ. ಇದರ ಕೆಳಗೆ ಅಂದರೆ ಮಧ್ಯಭಾಗದಲ್ಲಿ ಭೂಮಿಯ ಕೇಂದ್ರ ಭಾಗವಾಗಿದ್ದು, ಇದನ್ನು ಭೂ ಗರ್ಭ ಎನ್ನುತ್ತೇವೆ. ಇದನ್ನು ಎರಡು ವಿಧವಾಗಿ ಮಾಡಲಾಗಿದೆ. ಒಂದು ಭೂಗರ್ಭದ ಹೊರಭಾಗ ಮತ್ತೊಂದು ಭೂ ಗರ್ಭದ ಒಳಭಾಗ. ಇವರೆರಡು ಸೇರಿದಾಗ ಕವಚದಲ್ಲಿ ಗುರುತ್ವಾಕರ್ಷಣೆ ಹೆಚ್ಚುತ್ತದೆ. ಇದು ಭೂರ್ಗದ ಒಳಗಿನ ಭಾಗದಲ್ಲಿ ತಿರುಗುವಿಕೆ ವೇಗದ ಮೇಲೆ ಪರಿಣಾಮ ಬೀರುತ್ತದೆ.

ಕವಚಕ್ಕೆ ಹೋಲಿಕೆ ಮಾಡಿದಾಗ ಭೂಗರ್ಭದ ಒಳ ಭಾಗದ ತಿರುಗುವಿಕೆ ನಿಧಾನವಾಗಿದೆ ಎಂಬುದನ್ನು ಇದೀಗ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಪತ್ತೆಯಾಗಿರುವ ಅಂಶ ಎಂದರೆ, ಅದು ಗಡಿಯಾರ ವಿರುದ್ಧ ದಿಕ್ಕಿನ ಚಲನೆಯನ್ನು ಹೊಂದಿದೆ. ಭೂಮಿಯ ಮೇಲ್ಭಾಗ ತಿರುವಿಕೆ ವೇಗವಾಗಿದ್ದು, ಭೂರ್ಗದ ಒಳಗಾದ ಸುತ್ತುವಿಕೆ ನಿಧಾನವಾಗಿದೆ. ಪರಿಣಾಮವಾಗಿ, ಮೊದಲಿಗಿಂತ ಕೆಲವು ದೀರ್ಘ ಸೆಕೆಂಡ್‌ಗಳನ್ನು ದಿನದ ಉದ್ದಕ್ಕೆ ಸೇರಿಸಬೇಕಾಗುತ್ತದೆ. ಈಗಾಗಲೇ ಹವಾಮಾನ ಬದಲಾವಣೆಯಿಂದಾಗಿ ಗ್ರೀನ್​ ಲ್ಯಾಂಡ್​ ಮತ್ತು ಅಂಟಾರ್ಟಿಕ್​​ನಲ್ಲಿರುವ ಹಿಮ ವೇಗವಾಗಿ ಕರಗುತ್ತಿದೆ. ಇದರಿಂದ ಭೂಮಿಯ ತಿರುಗುವಿಕೆ ವೇಗವನ್ನು ಕಡಿಮೆ ಮಾಡುತ್ತಿದೆ. ಇದರಿಂದ ಕೂಡ ದಿನದ ಉದ್ದ ಹೆಚ್ಚಾಗಿದೆ. ಇದಕ್ಕೆ ಭೂರ್ಗದ ಒಳಭಾಗ ಕೂಡ ಸೇರ್ಪಡನೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಸೂರ್ಯನ ಬೆಳಕು ಭೂಮಿಗೆ ತಲುಪುವ ಸಮಯ 8 ನಿಮಿಷವಲ್ಲ: ಹಾಗಾದರೆ ಮತ್ತೆಷ್ಟು?

ABOUT THE AUTHOR

...view details