ಕರ್ನಾಟಕ

karnataka

ETV Bharat / technology

ಇಸ್ರೋದ 'ಪುಷ್ಪಕ್‌' ವಿಮಾನ ಲ್ಯಾಂಡಿಂಗ್ ಯಶಸ್ವಿ; ಚಳ್ಳಕೆರೆಯಲ್ಲಿ ಪ್ರಯೋಗ - Pushpak

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಇಂದು ಸ್ವದೇಶಿ ಗಗನ ನೌಕೆ 'ಪುಷ್ಪಕ್' ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಈ ಮೂಲಕ ಇಸ್ರೋ ಮತ್ತೊಂದು ಮೈಲುಗಲ್ಲು ಸಾಧಿಸಿತು.

ISRO MILESTONE  INDIGENOUS SPACECRAFT PUSHPAK
ಚಳ್ಳಕೆರೆಯಿಂದ ಸ್ವದೇಶಿ ಗಗನ ನೌಕೆ ಪುಷ್ಪಕ್ ಲ್ಯಾಂಡಿಂಗ್ ಯಶಸ್ವಿ: ಮತ್ತೊಂದು ಮೈಲುಗಲ್ಲು ಸಾಧಿಸಿದ ಇಸ್ರೋ

By ETV Bharat Karnataka Team

Published : Mar 22, 2024, 10:07 AM IST

Updated : Mar 22, 2024, 3:49 PM IST

ನವದೆಹಲಿ/ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಚಿತ್ರದುರ್ಗ ಸಮೀಪದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ಎಟಿಆರ್) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) 'ಪುಷ್ಪಕ್' ಅನ್ನು ಉಡಾಯಿಸಿ, ನಂತರ ಯಶಸ್ವಿಯಾಗಿ ಲ್ಯಾಂಡಿಂಗ್​ ಮಾಡುವ ಮೂಲಕ ಹೊಸ ಇತಿಹಾಸ ಬರೆಯಿತು.

ಇಸ್ರೋ ಅಧಿಕೃತ ಹೇಳಿಕೆ: ಆರ್‌ಎಲ್‌ವಿಯನ್ನು ಬೆಳಿಗ್ಗೆ 7 ಗಂಟೆಗೆ ಚಳ್ಳಕೆರೆ ರನ್ ವೇಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದೆ. ಇಸ್ರೋ ಈ ಹಿಂದಿನ ಕಾರ್ಯಾಚರಣೆಗಳನ್ನು 2016 ಹಾಗೂ 2023ರ ಏಪ್ರಿಲ್‌ನಲ್ಲಿ ಯಶಸ್ವಿಯಾಗಿ ನಡೆಸಿತ್ತು. ರಾಮಾಯಣದಲ್ಲಿ ಬರುವ ಪೌರಾಣಿಕ ಬಾಹ್ಯಾಕಾಶ ನೌಕೆಯಂತೆಯೇ (ಆರ್‌ಎಲ್‌ವಿ) ಪುಷ್ಪಕ್​ ಎಂಬ ಹೆಸರನ್ನಿಡಲಾಗಿದೆ.

ಸಂಪೂರ್ಣ ಮರುಬಳಕೆಯ ಉಡಾವಣಾ ವಾಹನ: ಉಡಾವಣಾ ವಾಹನ 'ಪುಷ್ಪಕ್' ಅನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯಲಾಯಿತು. ನಂತರ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಸರಿಯಾಗಿಸಿದ ಬಳಿಕ ಉಡಾವಣೆ ಮಾಡಲಾಗಿದೆ. ಈ ಯೋಜನೆಯು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದ ಪ್ರವೇಶವನ್ನು ಸಕ್ರಿಯಗೊಳಿಸಲು ಸಂಪೂರ್ಣ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕಾಗಿ ಪೂರಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳ ಭಾಗ'' ಎಂದು ಇಸ್ರೋ ಹೇಳಿದೆ.

ಉದ್ದೇಶವೇನು?: "ಬಾಹ್ಯಾಕಾಶ ಪ್ರವೇಶವನ್ನು ಅತ್ಯಂತ ಕೈಗೆಟುಕುವಂತೆ ಮಾಡುವಲ್ಲಿ ಇದು ಭಾರತದ ದಿಟ್ಟ ಹೆಜ್ಜೆ. ಕಕ್ಷೆಯಲ್ಲಿನ ಉಪಗ್ರಹಗಳಿಗೆ ಇಂಧನ ತುಂಬುವುದು, ನವೀಕರಣಕ್ಕಾಗಿ ಕಕ್ಷೆಯಿಂದ ಉಪಗ್ರಹಗಳನ್ನು ಹಿಂಪಡೆಯುವುದನ್ನು ಈ ವಾಹನದ ಮೂಲಕ ಮಡಬಹುದು. ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡಲು ಇದು ಅನುಕೂಲಕಾರಿ" ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ:5ಜಿ ಡೇಟಾ ಬಳಕೆ 4ಜಿಗಿಂತ 4 ಪಟ್ಟು ವೇಗದಲ್ಲಿ ಹೆಚ್ಚಳ: ವರದಿ

Last Updated : Mar 22, 2024, 3:49 PM IST

ABOUT THE AUTHOR

...view details