ಕರ್ನಾಟಕ

karnataka

ETV Bharat / technology

ಶೀಘ್ರವೇ ಬರಲಿದೆ 500 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್, ಭರ್ಜರಿ ತಯಾರಿ ನಡೆಸುತ್ತಿದೆ ಸ್ಯಾಮ್‌ಸಂಗ್ - 500MP CAMERA FOR SAMSUNG GALAXY

500MP Camera For Samsung Galaxy: ಸ್ಯಾಮ್‌ಸಂಗ್ ಐಫೋನ್ 18ಗಾಗಿ ವೇರಿಯಬಲ್ ಅಪರ್ಚರ್ ಮತ್ತು ಅದರ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗಾಗಿ 500 ಎಂಪಿ ಕ್ಯಾಮೆರಾದೊಂದಿಗೆ ಮೂರು-ಇಮೇಜ್ ಲೇಯರ್ಡ್ ಸೆನ್ಸಾರ್​ ಅನ್ನು ತಯಾರಿಸುತ್ತಿದೆ.

GALAXY SMARTPHONES  THREE IMAGE LAYERED SENSOR  IPHONE 18
ಶೀಘ್ರವೇ ಬರಲಿದೆ 500 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ (Photo Credit: Samsung)

By ETV Bharat Tech Team

Published : Jan 3, 2025, 2:11 PM IST

500MP camera for Samsung Galaxy: ನೀವು ಅನೇಕ ಹ್ಯಾಂಡ್‌ಸೆಟ್‌ಗಳಲ್ಲಿ 200 Megapixel ಕ್ಯಾಮೆರಾ ಸೆನ್ಸಾರ್​ ನೋಡಿರಬೇಕು. ಇದು ಮಾತ್ರವಲ್ಲ ಸ್ಯಾಮ್​ಸಂಗ್​ ತನ್ನ ಪ್ರಮುಖ ಫೋನ್ ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​ ಸೀರಿಸ್​ ಅಲ್ಟ್ರಾ ರೂಪಾಂತರದಲ್ಲಿ 200MP ಕ್ಯಾಮೆರಾವನ್ನು ಬಳಸುತ್ತಿದೆ. ಸ್ಯಾಮ್‌ಸಂಗ್ 500MP ಕ್ಯಾಮೆರಾ ಸೆನ್ಸಾರ್​ ಅನ್ನು ಸಿದ್ಧಪಡಿಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.

ಸ್ಯಾಮ್‌ಸಂಗ್ ತನ್ನ ಪ್ರೊಫೈಲ್‌ನಲ್ಲಿ ಅನೇಕ ಉತ್ಪನ್ನಗಳನ್ನು ಹೊಂದಿದೆ ಮತ್ತು ಕ್ಯಾಮೆರಾ ಸೆನ್ಸಾರ್​ಗಳನ್ನು ಸಹ ಉತ್ಪಾದಿಸುತ್ತದೆ. ಕಂಪನಿಯು ಈಗ 500MP ಕ್ಯಾಮೆರಾ ಸೆನ್ಸಾರ್​ ಅನ್ನು ಸಿದ್ಧಪಡಿಸುತ್ತಿದೆ ಎಂದು ಇತ್ತೀಚಿನ ವರದಿಗಳು ಬಹಿರಂಗಪಡಿಸಿವೆ. ಆದರೂ Samsung Galaxy S25 Ultra ನಲ್ಲಿ 200MP ಕ್ಯಾಮೆರಾವನ್ನು ಬಳಸಲಾಗುವುದು ಎಂದು ಕಂಪನಿಯು ಈಗಾಗಲೇ ಹೇಳಿದೆ.

ಟಿಪ್‌ಸ್ಟರ್ ಪ್ರಕಾರ, ಸ್ಯಾಮ್‌ಸಂಗ್ 500MP ಕ್ಯಾಮೆರಾ ಸೆನ್ಸಾರ್​ ಅನ್ನು ಸಿದ್ಧಪಡಿಸುತ್ತದೆ ಎಂದು ಹೇಳಲಾಗಿದೆ. ಇದನ್ನು ಭವಿಷ್ಯದಲ್ಲಿ ಗ್ಯಾಲಕ್ಸಿ ಸಾಧನಗಳಲ್ಲಿ ಸ್ಥಾಪಿಸಲಾಗುವುದು. ಅಲ್ಲದೆ PD-TR-ಲಾಜಿಕ್ ಕಾನ್ಫಿಗರೇಶನ್‌ನಲ್ಲಿ ಮೂರು ಲೇಯರ್ ಸ್ಟ್ಯಾಕ್ ಮಾಡಿದ ಇಮೇಜ್ ಸೆನ್ಸಾರ್‌ನಲ್ಲಿ ಕಂಪನಿಯು ಆಪಲ್‌ನೊಂದಿಗೆ ಕೆಲಸ ಮಾಡುತ್ತಿದೆ.

ಸೋನಿಯಿಂದ ಸ್ಯಾಮ್ಸಂಗ್ ಕಠಿಣ ಸ್ಪರ್ಧೆ: CMOS ಇಮೇಜ್ ಸೆನ್ಸರ್ (CIS) ಅನ್ನು ಸೋನಿ ಆಪಲ್‌ಗೆ ಒದಗಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಸ್ಯಾಮ್‌ಸಂಗ್ ಈಗ ಆಪಲ್‌ನ ಮೊದಲ ಆಯ್ಕೆಯಾಗಲು ಬಯಸಿದೆ. ಟಿಪ್‌ಸ್ಟರ್‌ನ ಪ್ರಕಾರ, ಸ್ಯಾಮ್‌ಸಂಗ್‌ನ ಥ್ರೀ-ಲೆಯರ್​ ಸ್ಕ್ರಾಂಬಲ್ಡ್ ಸೆನ್ಸಾರ್​ ಸೋನಿಯ ಸೆನ್ಸಾರ್​ಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ.

ಸ್ಯಾಮ್‌ಸಂಗ್‌ನ ಕ್ಯಾಮೆರಾವನ್ನು iPhone 18 ನಲ್ಲಿ ಬಳಸಬಹುದೇ?: ಕಳೆದ ವರ್ಷ ಜುಲೈನಲ್ಲಿ ಆಪಲ್ ತನ್ನ ಮುಂಬರುವ ಉತ್ಪನ್ನಕ್ಕಾಗಿ ಸೋನಿ ಕ್ಯಾಮೆರಾ ಸೆನ್ಸಾರ್ ಬದಲಿಗೆ ಸ್ಯಾಮ್‌ಸಂಗ್‌ನ ಕ್ಯಾಮೆರಾ ಸೆನ್ಸಾರ್​ ಅನ್ನು ಬಳಸುತ್ತದೆ ಎಂದು ಆಪಲ್ ವಿಶ್ಲೇಷಕ ಮಿಂಗ್ ಚಿ ಕುವೊ ಹೇಳಿದ್ದರು.

2026ರಲ್ಲಿ ಐಫೋನ್ 18: Apple iPhone 18 ಅನ್ನು 2026 ರಲ್ಲಿ ಬಿಡುಗಡೆ ಮಾಡಲಾಗುವುದು. 2026 ರಲ್ಲಿ ಹೊಸ ಕ್ಯಾಮೆರಾ ಸೆನ್ಸಾರ್​ ಬದಲಾವಣೆಯನ್ನು ನೀವು ನೋಡಬಹುದು. ಇದು ಅಪ್​ಡೇಟ್ಡ್​ 48MP ಕ್ಯಾಮೆರಾ ಆಗಿರಬಹುದು.

ತಯಾರಿ ನಡೆಸುತ್ತಿದೆ ಸ್ಯಾಮ್​ಸಂಗ್:ಮಾಧ್ಯಮ ವರದಿಗಳ ಪ್ರಕಾರ, 500MP ಕ್ಯಾಮೆರಾವನ್ನು ಸ್ಯಾಮ್‌ಸಂಗ್ ಹ್ಯಾಂಡ್‌ಸೆಟ್‌ಗಳಲ್ಲಿ ಮಾತ್ರ ಬಳಸಬಹುದು. ಆದರೂ ಈ ಸೆನ್ಸಾರ್​ ಬಗ್ಗೆ ಇಲ್ಲಿಯವರೆಗೆ ಸ್ಯಾಮ್‌ಸಂಗ್ ವಿವರ ನೀಡಿಲ್ಲ.

ಸ್ಯಾಮ್‌ಸಂಗ್ ತನ್ನ ಪ್ರಮುಖ ಸರಣಿಯನ್ನು ಪ್ರತಿವರ್ಷ ಜನವರಿಯಲ್ಲಿ ಬಿಡುಗಡೆ ಮಾಡುತ್ತದೆ. ಕಳೆದ ವರ್ಷ ಕಂಪನಿಯು Samsung Galaxy S24 ಸರಣಿಯನ್ನು ಪರಿಚಯಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಈ ಜನವರಿಯಲ್ಲಿಯೇ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ ಅನ್ನು ಆಯೋಜಿಸಲಿದೆ. ಆದರೂ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.

ಇದನ್ನೂ ಓದಿ:ಮಕರ ಸಂಕ್ರಾಂತಿಯಿಂದ ಬಿಎಸ್ಎಲ್​ಎನ್​ 3ಜಿ ಸೇವೆ ಬಂದ್​: ಎಲ್ಲಿ? ಏಕೆ ಗೊತ್ತೇ?

ABOUT THE AUTHOR

...view details