ಕರ್ನಾಟಕ

karnataka

ETV Bharat / technology

ಶೀಘ್ರವೇ ದೇಶದ ಮಾರುಕಟ್ಟೆಗೆ ಎಐ ಪರ್ಸನಲ್ ಅಸಿಸ್ಟೆಂಟ್ ಹೊಂದಿರುವ ರಿಯಲ್​ಮಿ ವಾಚ್​ ಎಸ್​2: ಏನು ವಿಶೇಷ ಅಂತೀರಾ? - Realme Watch S2 - REALME WATCH S2

ಜು.30 ಭಾರತದಲ್ಲಿ ನಡೆಯಲಿರುವ ಈವೆಂಟ್​ನಲ್ಲಿ ರಿಯಲ್‌ಮಿ 13 ಪ್ರೊ 5 ಜಿ ಸರಣಿ ಫೋನ್​ ಜೊತೆಗೆ ರಿಯಲ್ ಮಿ ವಾಚ್​ ಎಸ್​2 ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ರಿಯಲ್​ಮಿ ವಾಚ್​ ಎಸ್​2
ರಿಯಲ್​ಮಿ ವಾಚ್​ ಎಸ್​2 (ANI)

By ANI

Published : Jul 16, 2024, 6:24 PM IST

ವಾಷಿಂಗ್ಟನ್(ಅಮೆರಿಕ): ಚೀನಾದ ಟೆಕ್ ಕಂಪನಿ ರಿಯಲ್​ಮಿ ತನ್ನ ಹೊಸ ಸ್ಮಾರ್ಟ್ ವಾಚ್ ರಿಯಲ್ ಮಿ ವಾಚ್​ ಎಸ್​2 ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಜುಲೈ 30 ರಂದು ಭಾರತದಲ್ಲಿ ನಡೆಯಲಿರುವ ಈವೆಂಟ್​ನಲ್ಲಿ ರಿಯಲ್ ಮಿ 13 ಪ್ರೊ ಸರಣಿಯ ಸ್ಮಾರ್ಟ್​ಫೋನ್​ ಜೊತೆಗೆ ರಿಯಲ್ ಮಿ ವಾಚ್ ಎಸ್ 2 ಬಿಡುಗಡೆ ಮಾಡಲಿದ್ದೇವೆ ಎಂದು ಕಂಪನಿಯು ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಪ್ರಕಟಿಸಿದೆ.

ಜಿಎಸ್​ಎಂ ಅರೆನಾ ಪ್ರಕಾರ, ಈ ಸ್ಮಾರ್ಟ್ ವಾಚ್ ಚಾಟ್‌ ಜಿಪಿಟಿಯಿಂದ ಚಾಲಿತವಾಗಿರುವ ಎಐ ಪರ್ಸನಲ್ ಅಸಿಸ್ಟೆಂಟ್ ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕಂಪನಿಯ ಇತರ ವೈಶಿಷ್ಟ್ಯಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಬ್ರ್ಯಾಂಡ್ ಪರ್ಸನಲ್ ಅಸಿಸ್ಟೆಂಟ್ ಇದರಲ್ಲಿನ ಪ್ರಮುಖ ಹೈಲೈಟ್ ಆಗಿದೆ ಎಂದು ತಿಳಿದು ಬಂದಿದೆ.

ಚಾಟ್​ ಜಿಪಿಟಿಯೂ ಇದರಲ್ಲಿ ಉಂಟು:ಚಾಟ್ ಜಿಪಿಟಿ ತಂತ್ರಜ್ಞಾನದೊಂದಿಗೆ ನವೀನ ವೈಶಿಷ್ಟ್ಯಗಳು ಇರುವುದರಿಂದಾಗಿ ಬಳಕೆದಾರರು ಸ್ಮಾರ್ಟ್ ವಾಚ್​ನಿಂದ ಉತ್ತಮ ಕಾರ್ಯಕ್ಷಮತೆ ಮತ್ತು ಯೂಸರ್ ಫ್ರೆಂಡ್ಲಿ ಅನುಭವವನ್ನು ನಿರೀಕ್ಷಿಸಬಹುದು. ಈ ವಾಚ್​ ಟೆಕ್ ಉತ್ಸಾಹಿಗಳು ಮತ್ತು ವಾಚ್​ ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ಅನ್ವೇಷಿಸಲು ಉತ್ಸುಕರಾಗಿರುವ ಗ್ರಾಹಕರಿಗೆ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಭಾರತದಲ್ಲಿ ರಿಯಲ್‌ಮಿಯ ರಿಯಲ್‌ಮಿ 13 ಪ್ರೊ 5 ಜಿ ಸರಣಿ ಫೋನ್​ ಮತ್ತು ರಾಯಲ್ ವೈಲೆಟ್ ಬಣ್ಣದ ರಿಯಲ್‌ಮಿ ಬಡ್ಸ್ ಏರ್ 6 ಲಾಂಚ್ ಇತ್ತೀಚಿಗೆ ಬಿಡುಗಡೆಯಾಗಿದ್ದವು.​ ಈಗ Realme 13 Pro ಸರಣಿಯ ​ರಿಯಲ್​ಮಿ 13 ಪ್ರೊ ಮತ್ತು ರಿಯಲ್​ಮಿ 13 ಪ್ರೊ + ಎಂಬ ಎರಡು ವೇರಿಯಂಟ್​ಗಳು ಜು.30ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ಎರಡೂ ಫೋನ್ ಗಳು ಎಐ ವೈಶಿಷ್ಟ್ಯಗಳೊಂದಿಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ-ಕ್ಲಿಯರ್ ಕ್ಯಾಮೆರಾ ಹೊಂದಿದೆ. ಇನ್ನು ಬಳಸಲಾದ ಪ್ರೊಸೆಸರ್ ಹಾಗೂ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಎಲ್ಲಾ ಮಾಹಿತಿ Realme ವೆಬ್‌ಸೈಟ್‌ನಲ್ಲಿ ಶೀಘ್ರವೇ ಸಿಗಲಿದೆ ಎಂದು ತಿಳಿಸಿದೆ.

ರಿಯಲ್ ಮಿ ಬಡ್ಸ್ ಏರ್ 6 ರಾಯಲ್ ವೈಲೆಟ್ ನಿನ್ನೆಯಷ್ಟೆ ಬಿಡುಗಡೆಯಾಗಿತ್ತು. ಇಯರ್ ಬಡ್​ಗಳು ಕಪ್ಪು ಮತ್ತು ಬಿಳಿ ಬಣ್ಣದ ವೇರಿಯಂಟ್ ಗಳಲ್ಲಿ ಲಭ್ಯವಿದೆ. ಇವು ಬಳಕೆದಾರರಿಗೆ ಸ್ಟೈಲಿಶ್ ಆಯ್ಕೆಯಾಗಿದೆ.

ಇದನ್ನೂ ಓದಿ:15 ಸಾವಿರದೊಳಗೆ ಅತ್ಯುತ್ತಮ ಫೀಚರ್​ನ ಬೆಸ್ಟ್​ ಮೊಬೈಲ್​ಗೆ ಹುಡುಕಾಡುತ್ತಿದ್ದೀರಾ?: ಇಲ್ಲಿದೆ ನೋಡಿ 10 ಬೆಸ್ಟ್​ ಆಯ್ಕೆಗಳು - BEST MOBILE PHONES UNDER 15000

ABOUT THE AUTHOR

...view details