Eclipses In 2025: 2025 ರಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರನ ಚಲನೆಯು ಎರಡು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರ ಗ್ರಹಣಗಳ ರೋಚಕ ದೃಶ್ಯಗಳನ್ನು ಜಗತ್ತಿಗೆ ತೋರಿಸಲಿದೆ. ಮುಂದಿನ ವರ್ಷದಲ್ಲಿ ಅಂದರೆ 2025ರಲ್ಲಿ ಸೂರ್ಯ ಮತ್ತು ಚಂದ್ರರನ್ನು ಒಳಗೊಂಡ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಇದರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ಸೇರಿವೆ. ಮಾಹಿತಿಗಳ ಪ್ರಕಾರ, 2025 ರ ಮಾರ್ಚ್ 14 ರಿಂದ ಗ್ರಹಣಗಳು ಪ್ರಾರಂಭವಾಗುತ್ತವೆ. ಕೊನೆಯ ಗ್ರಹಣ ಸೆಪ್ಟೆಂಬರ್ 21 ರಂದು ಸಂಭವಿಸಲಿದೆ.
ಭಾರತದಲ್ಲಿ ಗೋಚರಿಸಲಿದೆ ಒಂದೇ ಒಂದು ಗ್ರಹಣ: ಮಾರ್ಚ್ 14, 2025 ರಂದು ಸಂಪೂರ್ಣ ಚಂದ್ರಗ್ರಹಣ ಇರುತ್ತದೆ ಮತ್ತು ಅದೇ ತಿಂಗಳಲ್ಲಿ ಸೂರ್ಯಗ್ರಹಣವೂ ಇದೆ. ಈ ಎರಡೂ ಗ್ರಹಣಗಳು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅವುಗಳ ಸೂತಕದ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಆದರೆ, ನಾಲ್ಕು ಗ್ರಹಣಗಳಲ್ಲಿ ಭಾರತದಲ್ಲಿ ಕೇವಲ ಒಂದು ಚಂದ್ರಗ್ರಹಣವು ಗೋಚರಿಸುತ್ತದೆ. ಅದರ ಸೂತಕದ ಅವಧಿಯು ಸಹ ಮಾನ್ಯವಾಗಿರುತ್ತದೆ.
ಸೂರ್ಯ ಮತ್ತು ಚಂದ್ರ ಗ್ರಹಣ ಗೋಚರಿಸುವುದೆಲ್ಲಿ?:2025 ರ ಮೊದಲ ಗ್ರಹಣವು ಚಂದ್ರಗ್ರಹಣವಾಗಿದೆ. ಈ ಚಂದ್ರಗ್ರಹಣವು ಅಮೆರಿಕ, ಪಶ್ಚಿಮ ಯುರೋಪ್, ಪಶ್ಚಿಮ ಆಫ್ರಿಕಾ ಮತ್ತು ಉತ್ತರ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಗೋಚರಿಸಲಿದೆ. ವರ್ಷದ ಮೊದಲ ಸೂರ್ಯಗ್ರಹಣ ಮತ್ತು ವರ್ಷದ ಎರಡನೇ ಗ್ರಹಣವು 29 ಮಾರ್ಚ್ 2025 ರಂದು ನಡೆಯಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ. ಈ ಗ್ರಹಣವು ಉತ್ತರ ಅಮೆರಿಕ, ಗ್ರೀನ್ಲ್ಯಾಂಡ್ , ಐಸ್ಲ್ಯಾಂಡ್, ಉತ್ತರ ಅಟ್ಲಾಂಟಿಕ್ ಸಾಗರ, ಸಂಪೂರ್ಣ ಯುರೋಪ್ ಮತ್ತು ವಾಯುವ್ಯ ರಷ್ಯಾದಲ್ಲಿ ಗೋಚರಿಸುತ್ತದೆ. ವರ್ಷದ ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 7-8 ರಂದು ನಡೆಯಲಿದೆ. ಈ ಸಂಪೂರ್ಣ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆ.
ಈ ಚಂದ್ರಗ್ರಹಣವನ್ನು ಅಂಟಾರ್ಕ್ಟಿಕಾ, ಪಶ್ಚಿಮ ಪೆಸಿಫಿಕ್ ಸಾಗರ, ಆಸ್ಟ್ರೇಲಿಯಾ, ಏಷ್ಯಾ, ಹಿಂದೂ ಮಹಾಸಾಗರ ಮತ್ತು ಯುರೋಪ್‌ನಲ್ಲಿಯೂ ಕಾಣಬಹುದು. ವರ್ಷದ ಕೊನೆಯ ಸೂರ್ಯಗ್ರಹಣವು ಸೆಪ್ಟೆಂಬರ್ 21-22 ರಂದು ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಈ ಗ್ರಹಣವು ನ್ಯೂಜಿಲೆಂಡ್, ಪೂರ್ವ ಮೆಲನೇಷಿಯಾ, ದಕ್ಷಿಣ ಪಾಲಿನೇಷ್ಯಾ ಮತ್ತು ಪಶ್ಚಿಮ ಅಂಟಾರ್ಕ್ಟಿಕಾದಲ್ಲಿ ಗೋಚರಿಸುತ್ತದೆ.
ಓದಿ:ಬಿಳಿ, ಕೆಂಪು, ಗುಲಾಬಿ ಆಯ್ತು ಈಗ ಕಾಣಲಿದೆ ಬ್ಲ್ಯಾಕ್ ಮೂನ್: ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನೀವು ರೆಡಿನಾ?