Citroen-C5 Aircross: ಸಿಟ್ರೊಯೆನ್ ಇಂಡಿಯಾದ ಜನವರಿ 2025ರ ಮಾರಾಟದ ದತ್ತಾಂಶ ಹೊರಬಿದ್ದಿದೆ. ದೇಶದಲ್ಲಿ ಕಂಪೆನಿಯ ಕಾರು ಮಾರಾಟದ ಅಂಕಿಅಂಶಗಳು ತೀವ್ರವಾಗಿ ಹದಗೆಟ್ಟಿವೆ. ಸಿಟ್ರೊಯೆನ್ ಒಟ್ಟು 5 ಮಾದರಿಗಳನ್ನಷ್ಟೇ ಮಾರಾಟ ಮಾಡಿದೆ. ಇದರಲ್ಲಿ ಗರಿಷ್ಠ 242 ಯುನಿಟ್ C3 ಮಾರಾಟವಾಗಿವೆ. ಆದರೆ ಸಿ5 ಏರ್‌ಕ್ರಾಸ್ ಕಾರು ಜನವರಿ ತಿಂಗಳಲ್ಲಿ ಒಂದೇ ಒಂದೂ ಕೂಡಾ ಮಾರಾಟವಾಗದೇ ತಟಸ್ಥವಾಗಿದೆ.
ಕಳೆದ 6 ತಿಂಗಳಲ್ಲಿ ಈ ಕಾರು ಒಂದು ಯೂನಿಟ್ ಕೂಡಾ ಮಾರಾಟವಾಗದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಡಿಸೆಂಬರ್ 2024ರಲ್ಲಿ ಕೇವಲ ಒಂದೇ ಯುನಿಟ್ ಮಾತ್ರ ಮಾರಾಟವಾಗಿತ್ತು. ಕಳೆದ 6 ತಿಂಗಳಲ್ಲಿ ಕೇವಲ 7 ಯುನಿಟ್‌ಗಳು ಮಾತ್ರ ಮಾರಾಟವಾಗಿರುವುದು ಕಂಪೆನಿಗೆ ಬೇಸರದ ಸಂಗತಿಯಾಗಿದೆ.
ಕಾರಿನ ವಿಶೇಷತೆಗಳು:ಈ ಕಾರು 1997cc, DW10FC 4-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. 177 PS ಪವರ್ ಮತ್ತು 400 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ. 52.5 ಲೀಟರ್ ಫ್ಯೂಯಲ್ ಟ್ಯಾಂಕ್ ಇದೆ. 17.5 ಕಿಮೀ/ಲೀ ಮೈಲೇಜ್ ನೀಡುತ್ತದೆ. ಆಯಾಮಗಳ ಬಗ್ಗೆ ಹೇಳುವುದಾದರೆ, ಇದರ ಉದ್ದ 4500mm, ಅಗಲ 1969mm ಮತ್ತು ಎತ್ತರ 1710mm. ಇದರ ವೀಲ್‌ಬೇಸ್ 2730 ಮಿ.ಮೀ ಇದೆ.
ಈ ಕಾರು LED ವಿಷನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED ಡೇಟೈಮ್ ರನ್ನಿಂಗ್ ಲ್ಯಾಂಪ್ಸ್, 3D LED ರಿಯರ್ ಲ್ಯಾಂಪ್ಸ್ ಮತ್ತು ORVM ಗಳಲ್ಲಿ LED ಟರ್ನ್ ಇಂಡಿಕೇಟರ್‌ಗಳನ್ನು ಪಡೆಯುತ್ತದೆ. ಇದು 31.24 ಸೆಂ.ಮೀ ಕಸ್ಟಮೈಸ್ ಮಾಡಬಹುದಾದ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಮಧ್ಯದಲ್ಲಿ 25.4 ಸೆಂ.ಮೀ ಕೆಪ್ಯಾಸಿಟಿವ್ ಟಚ್ ಸ್ಕ್ರೀನ್ ಇದ್ದು, ಇದು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುತ್ತದೆ.
ಸಿಟ್ರೊಯೆನ್ ಸಿ5 ಏರ್‌ಕ್ರಾಸ್ ಮಾರಾಟ ವರದಿ | |
ತಿಂಗಳು | ಯುನಿಟ್ |
ಆಗಸ್ಟ್ 2024 | 1 |
ಸೆಪ್ಟಂಬರ್ 2024 | 1 |
ಅಕ್ಟೋಬರ್ 2024 | 4 |
ನವೆಂಬರ್ 2024 | 0 |
ಡಿಸೆಂಬರ್ 2024 | 1 |
ಜನವರಿ 2025 | 0 |