ಕರ್ನಾಟಕ

karnataka

By ETV Bharat Tech Team

Published : 5 hours ago

ETV Bharat / technology

ವೋಡಾಫೋನ್​-ಐಡಿಯಾ ಜೊತೆ ಮತ್ತೆ ಕೈಜೋಡಿಸಿದ ನೋಕಿಯಾ - Vodafone Idea Nokia Deal

Vodafone Idea-Nokia Deal: Nokia ಮೂರು ವರ್ಷಗಳ ಕಾಲ Vodafone-Idea ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಪ್ರಕಾರ, Nokia Viಯ ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್ ಅಪ್‌ಗ್ರೇಡ್ ಮಾಡುತ್ತದೆ ಮತ್ತು 5G ಉಪಕರಣಗಳನ್ನು ಪೂರೈಸಲಿದೆ.

VODAFONE IDEA  4G AND 5G NETWORK IN INDIA  NOKIA DEAL WITH VI
ನೋಕಿಯಾ (IANS)

Vodafone Idea-Nokia Deal:Vodafone Idea Limited (VIL)ನೊಂದಿಗೆ Nokia ಮಹತ್ವದ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಂತೆ Viಯ ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್ ಅಪ್​ಗ್ರೇಡ್​ ಮತ್ತು 5G ಉಪಕರಣಗಳನ್ನು Nokia ಪೂರೈಸಲಿದೆ. VILನ 200 ದಶಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸಂಪರ್ಕ ಒದಗಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ.

Vi ಇತ್ತೀಚೆಗೆ ನೋಕಿಯಾ, ಎರಿಕ್ಸನ್ ಮತ್ತು ಸ್ಯಾಮ್‌ಸಂಗ್‌ನೊಂದಿಗೆ 30,000 ಕೋಟಿ ರೂ (USD 3.6 ಶತಕೋಟಿ) ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ನೆಟ್ವರ್ಕ್ ಉಪಕರಣಗಳನ್ನು ಸರಬರಾಜು ಮಾಡಲಾಗುತ್ತದೆ. ನೋಕಿಯಾ VILನ 4G ಮತ್ತು 5G ನೆಟ್‌ವರ್ಕ್‌ಗಳನ್ನು ನವೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Nokia ತನ್ನ 5G ಏರ್‌ಸ್ಕೇಲ್ ಪೋರ್ಟ್‌ಫೋಲಿಯೊವನ್ನು ರೀಫ್‌ಶಾರ್ಕ್ ಸಿಸ್ಟಮ್-ಆನ್-ಚಿಪ್ ತಂತ್ರಜ್ಞಾನದಿಂದ ನಡೆಸುತ್ತದೆ. ಬೇಸ್ ಸ್ಟೇಷನ್‌ಗಳು, ಬೇಸ್‌ಬ್ಯಾಂಡ್ ಘಟಕಗಳು ಮತ್ತು ಇತ್ತೀಚಿನ ಹ್ಯಾಬ್ರೋಕ್ ಮಾಸಿವ್ MIMO ರೇಡಿಯೋ ಉಪಕರಣಗಳನ್ನು ಸರಬರಾಜು ಮಾಡಲಾಗುತ್ತದೆ. ಹೆಚ್ಚುವರಿಯಾಗಿ, Nokia VILನ 4G ನೆಟ್‌ವರ್ಕ್ ಅನ್ನು ಮಲ್ಟಿಬ್ಯಾಂಡ್ ರೇಡಿಯೋಗಳು ಮತ್ತು ಬೇಸ್‌ಬ್ಯಾಂಡ್ ಉಪಕರಣಗಳೊಂದಿಗೆ ಅಪ್‌ಗ್ರೇಡ್ ಮಾಡುತ್ತದೆ. ಇದರಿಂದಾಗಿ 5G ಗೆ ಬದಲಾಯಿಸುವುದನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

ನೋಕಿಯಾದ ನೆಟ್‌ವರ್ಕ್ ಆಪ್ಟಿಮೈಸೇಶನ್ ಮತ್ತು ಆಟೋಮೇಷನ್ ಪ್ಲಾಟ್‌ಫಾರ್ಮ್, MantaRay SON ನಿಂದ VIL ಸಹ ಪ್ರಯೋಜನ ಪಡೆಯುತ್ತದೆ ಎಂದು ಕಂಪನಿ ಹೇಳಿದೆ. ನೆಟ್‌ವರ್ಕ್ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ವೇದಿಕೆಯು ಸ್ವಯಂ-ಕಾನ್ಫಿಗರಿಂಗ್ ಮಾಡ್ಯೂಲ್‌ಗಳನ್ನು ಬಳಸುತ್ತದೆ. ನೋಕಿಯಾ ಯೋಜನೆ, ನಿಯೋಜನೆ, ಏಕೀಕರಣ ಮತ್ತು ನೆಟ್‌ವರ್ಕ್ ಆಪ್ಟಿಮೈಸೇಶನ್ ಸೇವೆಗಳನ್ನು ಸಹ ಒದಗಿಸುತ್ತದೆ. ನೋಕಿಯಾ ವೊಡಾಫೋನ್-ಐಡಿಯಾ ಜೊತೆ ಪಾಲುದಾರಿಕೆಗೆ ಪ್ರವೇಶಿಸಿರುವುದು ಇದೇ ಮೊದಲಲ್ಲ. Nokia ಮತ್ತು Vi ಒಟ್ಟಿಗೆ 2G, 3G, 4G ಮತ್ತು ಈಗ 5G ನೆಟ್‌ವರ್ಕ್‌ಗಳನ್ನು ನಿಯೋಜಿಸಿರುವುದು ಗಮನಿಸಬೇಕಾದ ಅಂಶ.

ಇದನ್ನೂ ಓದಿ:ಪ್ರಪಂಚದಲ್ಲಿ ಮೊದಲ ಬಾರಿಗೆ ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಅಸೆಂಬ್ಲಿ ಆಯೋಜಿಸಲಿರುವ ಭಾರತ - India Set to Host WTSA Assembly

ABOUT THE AUTHOR

...view details