Maha Kumbh Mela 2024:ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಭಕ್ತರ ಅನುಕೂಲಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕ್ರಮದಲ್ಲಿ ಜಾಗತಿಕ ಡಿಜಿಟಲ್ ದೈತ್ಯ ಗೂಗಲ್, ಮಹಾ ಕುಂಭಮೇಳ ಪ್ರದೇಶವನ್ನು ತನ್ನ ನ್ಯಾವಿಗೇಷನ್ ಸಿಸ್ಟಮ್‌ಗೆ ಇದೇ ಮೊದಲ ಬಾರಿಗೆ ಜೋಡಿಸಲು ನಿರ್ಧರಿಸಿದೆ. ಇದಕ್ಕಾಗಿ ಸೋಮವಾರ ಗೂಗಲ್ ಮತ್ತು ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ ಎಂಒಯುಗೆ ಸಹಿ ಹಾಕಿದೆ.
ಮಹಾ ಕುಂಭ ಮೇಳಕ್ಕಾಗಿ ವಿಶೇಷ ನ್ಯಾವಿಗೇಷನ್ ಸಿಸ್ಟಮ್ ಅನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ. ಇದು ಭಕ್ತರಿದೆ ವಿವಿಧ ಸ್ಥಳಗಳು, ಅಖಾಡಗಳು ಮತ್ತು ಸ್ವಾಮೀಜಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯ ಈ ತಿಂಗಳ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಶುರುವಾಗುವ ನಿರೀಕ್ಷೆಯಿದೆ.
ಗೂಗಲ್ ತಾತ್ಕಾಲಿಕ ನಗರಕ್ಕಾಗಿ ನ್ಯಾವಿಗೇಷನ್ ಅನ್ನು ರಚಿಸುತ್ತಿರುವುದು ಇದೇ ಮೊದಲು. ಇದು ಪ್ರವಾಸಿಗರಿಗೆ ಪ್ರಮುಖ ರಸ್ತೆಗಳು, ಧಾರ್ಮಿಕ ಸ್ಥಳಗಳು, ಘಾಟ್‌ಗಳು, ಅಖಾಡಗಳು ಮತ್ತು ಸ್ವಾಮೀಜಿಗಳಿರುವ ಸ್ಥಳಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತದೆ.