ನವದೆಹಲಿ:ಭಾರತದ ಸ್ಥಳೀಯ ಸ್ಮಾರ್ಟ್ ಫೋನ್ ಕಂಪನಿ ಲಾವಾ ಶುಕ್ರವಾರ 128 ಜಿಬಿ ಸ್ಟೋರೇಜ್ ಮತ್ತು 6.5 ಇಂಚಿನ ಎಚ್ಡಿ+ ಪಂಚ್ ಹೋಲ್ ಡಿಸ್ ಪ್ಲೇ ಹೊಂದಿರುವ ಹೊಸ ಸ್ಮಾರ್ಟ್ ಫೋನ್ - ಒ 2 (O2) ಅನ್ನು ಬಿಡುಗಡೆ ಮಾಡಿದೆ. ಲಾವಾ ಒ2 ಮಾರ್ಚ್ 27 ರಿಂದ ಅಮೆಜಾನ್ ಮತ್ತು ಲಾವಾ ಇ-ಸ್ಟೋರ್ನಲ್ಲಿ ಮೆಜೆಸ್ಟಿಕ್ ಪರ್ಪಲ್, ಇಂಪೀರಿಯಲ್ ಗ್ರೀನ್ ಮತ್ತು ರಾಯಲ್ ಗೋಲ್ಡ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ 7,999 ರೂ.ಗಳ ಆರಂಭಿಕ ಬೆಲೆಯಲ್ಲಿ ಸಿಗಲಿದೆ.
"ಗ್ರಾಹಕರ ಬೇಡಿಕೆಗಳು ನಿರಂತರವಾಗಿ ಬದಲಾಗುತ್ತಿವೆ. ವಿಶೇಷವಾಗಿ ಯುವ ಪೀಳಿಗೆಯು ತಮ್ಮ ಸ್ಮಾರ್ಟ್ ಫೋನ್ಗಳ ಶೈಲಿ ಮತ್ತು ಕಾರ್ಯಕ್ಷಮತೆ ಎರಡರಲ್ಲಿಯೂ ಅತ್ಯುತ್ತಮವಾಗಿರಬೇಕು ಎಂದು ಬಯಸುತ್ತಾರೆ" ಎಂದು ಲಾವಾ ಇಂಟರ್ ನ್ಯಾಷನಲ್ ಲಿಮಿಟೆಡ್ನ ಉತ್ಪನ್ನ ಮುಖ್ಯಸ್ಥ ಸುಮಿತ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಇತ್ತೀಚಿನ ಗ್ಲಾಸ್ ಬ್ಯಾಕ್ ವಿನ್ಯಾಸದಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಸ್ಟಾಕ್ ಆಂಡ್ರಾಯ್ಡ್ 13 ನೊಂದಿಗೆ ಆರಾಮದಾಯಕ ಬಳಕೆಯ ಅನುಭವ ನೀಡುವ ಮೂಲಕ ಲಾವಾ ಒ2 ಈ ನಿರೀಕ್ಷೆಗಳನ್ನು ಪೂರೈಸುತ್ತದೆ. ಈ ಫೋನ್ಗೆ ಆಂಡ್ರಾಯ್ಡ್ 14 ಅಪ್ಡೇಟ್ ಅನ್ನು ಖಾತರಿಯಾಗಿ ನೀಡಲಾಗುವುದು ಹಾಗೂ 2 ವರ್ಷಗಳ ಕಾಲ ಸೆಕ್ಯೂರಿಟಿ ಅಪ್ಡೇಟ್ಸ್ ಗಳನ್ನು ಕೂಡ ನೀಡಲಾಗುವುದು" ಎಂದು ಅವರು ಹೇಳಿದರು.