KIA Syros Booking: ಕಿಯಾ ಇಂಡಿಯಾ ಇತ್ತೀಚೆಗೆ ಹೊಸ ಕಾರು ಕಿಯಾ ಸಿರೋಸ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿ ಈ SUV ಬೆಲೆಯನ್ನು ಫೆಬ್ರವರಿ 1ರಂದು ಬಹಿರಂಗಪಡಿಸಲಿದೆ. ಪ್ರಸ್ತುತ, ಕಂಪನಿಯು ಈ ಕಾರಿನ ಬುಕಿಂಗ್ ಅನ್ನು ಶುಕ್ರವಾರ, ಜನವರಿ 3 ಅಂದ್ರೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭಿಸಿದೆ. ನೀವು ಈ ಕಾರನ್ನು ಖರೀದಿಸಲು ಬಯಸಿದರೆ ನೀವು ಬುಕಿಂಗ್ ಮೊತ್ತವಾಗಿ 25,000 ರೂ. ಪಾವತಿಸಬೇಕಾಗುತ್ತದೆ. ಈ SUV ಶುಕ್ರವಾರದಿಂದಲೇ Kia ಡೀಲರ್‌ಶಿಪ್‌ಗಳನ್ನು ತಲುಪಲಿದೆ.
ಬೆಲೆ ಯಾವಾಗ ಬಹಿರಂಗ?:ಕಿಯಾ ಸಿರೋಸ್ ಬಿಡುಗಡೆಯೊಂದಿಗೆ ಅದರ ಬೆಲೆ ಕೂಡ ಬಹಿರಂಗಗೊಳ್ಳುತ್ತದೆ. ಈ ಬಗ್ಗೆ ವಾಹನ ತಯಾರಕರು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಕಿಯಾ ಕಾರನ್ನು ರೂ 10 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಕಿಯಾ ಸೋನೆಟ್‌ಗೆ ಹೋಲಿಸಿದರೆ, ಈ ಕಾರು ಸುಮಾರು 1 ಲಕ್ಷ ರೂಪಾಯಿಗಳಷ್ಟು ದುಬಾರಿಯಾಗಬಹುದು. ಫೆಬ್ರವರಿ ಎರಡನೇ ವಾರದಲ್ಲಿ ಕಂಪನಿಯು ಈ ಕಾರಿನ ವಿತರಣೆಯನ್ನು ಪ್ರಾರಂಭಿಸಬಹುದು. ಕಿಯಾ ಸಿರೋಸ್ ಅನ್ನು ಜನವರಿ 17 ರಂದು ಇಂಡಿಯಾ ಮೊಬಿಲಿಟಿ ಶೋನಲ್ಲಿ ಪ್ರಸ್ತುತಪಡಿಸಬಹುದು.
ಕಿಯಾ ಸಿರೋಸ್ ಪವರ್‌ಟ್ರೇನ್:ಹೊಸ ಕಿಯಾ ಸಿರೋಸ್ ಅನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಮತ್ತು 6 ಟ್ರಿಮ್‌ಗಳಲ್ಲಿ ಪರಿಚಯಿಸಲಾಗಿದೆ. ಈ ವಾಹನವು 1.0-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ, ಇದು 120 hp ಪವರ್ ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಿಯಾ ಕಾರು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ. ಎರಡನೆಯ ಆಯ್ಕೆಯು 1.5-ಲೀಟರ್ ಡೀಸೆಲ್ ಎಂಜಿನ್ ಆಗಿರುತ್ತದೆ. ಇದು 116 hp ಪವರ್ ಮತ್ತು 250 Nm ಟಾರ್ಕ್ ಅನ್ನು ಒದಗಿಸುತ್ತದೆ.