Recharge Plan:ಈಗಾಗಲೇ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಬಹುತೇಕ ಜನರ ವಾರ್ಷಿಕ ಯೋಜನೆಯ ಅವಧಿಯ ಮುಕ್ತಾಯವೂ ಸಮೀಪಗೊಳ್ಳುತ್ತಿದೆ. ಹೀಗಾಗಿ ಮುಂಬರುವ ವಾರ್ಷಿಕ ರೀಚಾರ್ಜ್ ಯೋಜನೆಗಳಿಗೆ ಯಾವುದು ಉತ್ತಮ ಮತ್ತು ಈ ವಾರ್ಷಿಕ ರೀಚಾರ್ಜ್ ಯೋಜನೆಗಳ ಕುರಿತು ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಯಾವರೀತಿ ಆಫರ್ ನೀಡುತ್ತಿವೆ ಎಂಬುದರ ವಿವರ ಇಲ್ಲಿದೆ..
ಅಗ್ಗದ ರೀಚಾರ್ಜ್ ಯೋಜನೆಗಳನ್ನು ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ನೀಡುತ್ತಿವೆ. ಇವು ವಾರ್ಷಿಕ ರೀಚಾರ್ಜ್ ಯೋಜನೆಗಳಾಗಿದ್ದು, ಅದರ ವಿವರಗಳು ಕೆಳಗೆ ನೀಡಲಾಗಿದೆ.
ಜಿಯೋ ರೀಚಾರ್ಜ್ ಪ್ಲಾನ್:ಜಿಯೋ 336 ಮತ್ತು 365 ದಿನಗಳ ಮಾನ್ಯತೆಯೊಂದಿಗೆ ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. 336 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯ ಬೆಲೆ 895 ರೂಪಾಯಿ. ಈ ಯೋಜನೆಯಲ್ಲಿ ಒಟ್ಟು 24 GB ಹೈ ಸ್ಪೀಡ್ ಡೇಟಾ ಲಭ್ಯವಿದೆ. ಅಲ್ಲದೆ, ನೀವು ಅನಿಯಮಿತ ಕರೆ, ಪ್ರತಿ 28 ದಿನಗಳಿಗೊಮ್ಮೆ 50 SMS, Jio TV, Jio ಸಿನಿಮಾ ಮತ್ತು Jio ಕ್ಲೌಡ್‌ಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ.