ಕರ್ನಾಟಕ

karnataka

ETV Bharat / technology

ಇಸ್ರೋದ NVS-02 ಉಪಗ್ರಹ ಕಾರ್ಯಾಚರಣೆಗೆ ಹಿನ್ನಡೆ: ಥ್ರಸ್ಟರ್‌ ಸಮಸ್ಯೆಯಿಂದ ನಿಗದಿತ ಕಕ್ಷೆಗೆ ಸೇರಿಸಲು ವಿಫಲ - ISRO NVS 02 SATELLITE SETBACK

ಇಸ್ರೋದ NVS-02 ಉಪಗ್ರಹವು ಥ್ರಸ್ಟರ್ ಸಮಸ್ಯೆಗಳಿಂದಾಗಿ ಅದರ ವಿನ್ಯಾಸಗೊಳಿಸಿದ ಕಕ್ಷೆಯನ್ನು ತಲುಪಲು ವಿಫಲವಾಗಿದೆ. ಆದರೆ, ಪರ್ಯಾಯ ನ್ಯಾವಿಗೇಷನ್ ತಂತ್ರಗಳನ್ನು ಬಳಕೆ ಮಾಡಿಕೊಳ್ಳುವ ಯತ್ನ ಮುಂದುವರೆದಿದೆ.

ಇಸ್ರೋದ NVS-02 ಉಪಗ್ರಹ ಉಡ್ಡಯನಕ್ಕೆ ಹಿನ್ನಡೆ: ಥ್ರಸ್ಟರ್‌ ಸಮಸ್ಯೆಯಿಂದ ವಿಫಲ
ISRO's NVS-02 Satellite Suffers Setback, Thrusters Fail To Fire (PTI)

By ETV Bharat Karnataka Team

Published : Feb 3, 2025, 8:07 AM IST

ನವದೆಹಲಿ: ಬಾಹ್ಯಾಕಾಶ ನೌಕೆಯಲ್ಲಿದ್ದ ಥ್ರಸ್ಟರ್‌ಗಳಿಗೆ ದಹನ ಕ್ರಿಯೆಗೆ ಬೇಕಾದ ಸಂಪರ್ಕ ಸಾಧ್ಯವಾಗದೇ ಇರುವುದರಿಂದ ಸುಗಮ ಕಾರ್ಯನಿರ್ವಹಣೆ ವಿಫಲಗೊಂಡಿದೆ. ಈ ವಿಫಲತೆ ನಂತರ ಎನ್‌ವಿಎಸ್-02 ಉಪಗ್ರಹವನ್ನು ಅಪೇಕ್ಷಿತ ಕಕ್ಷೆಯಲ್ಲಿ ಇರಿಸುವ ಇಸ್ರೋದ ಪ್ರಯತ್ನಗಳಿಗೆ ಹಿನ್ನಡೆ ಆಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಭಾನುವಾರ ತಿಳಿಸಿದೆ.

ಭಾರತದ ಸ್ವಂತ ಬಾಹ್ಯಾಕಾಶ ಆಧಾರಿತ ಸಂಚರಣೆ ವ್ಯವಸ್ಥೆಗೆ ನಿರ್ಣಾಯಕವಾದ NVS-02 ಉಪಗ್ರಹವನ್ನು ಜನವರಿ 29 ರಂದು GSLV-Mk 2 ರಾಕೆಟ್‌ ನಿಂದ ಉಡ್ಡಯನ ಮಾಡಲಾಗಿತ್ತು. ಇದು ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಇಸ್ರೋದ 100 ನೇ ಉಡಾವಣೆಯಾಗಿತ್ತು.

ನಿಗದಿತ ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸಲು ಥ್ರಸ್ಟರ್‌ಗಳನ್ನು ಸಕ್ರಿಯೆಗೊಳಿಸಲು ಬೇಕಾದ ಆಕ್ಸಿಡೈಸರ್ ಒಪ್ಪಿಕೊಳ್ಳುವ ಕವಾಟಗಳು ತೆರೆಯದ ಕಾರಣ ಉಪಗ್ರಹ ಗೊತ್ತುಪಡಿಸಿದ ಕಕ್ಷೆಯಲ್ಲಿರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಲಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಇತರ ಮಾರ್ಗಗಳ ಹುಡುಕಾಟದಲ್ಲಿ ಇಸ್ರೋ:ಉಪಗ್ರಹವು ನ್ಯಾವಿಗೇಷನ್ ಸಿಸ್ಟಮ್‌ಗೆ ಸೂಕ್ತವಲ್ಲದ ದೀರ್ಘವೃತ್ತದ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ನಲ್ಲಿ ಭೂಮಿ ಸುತ್ತ ಸುತ್ತುತ್ತಿದೆ. ಉಪಗ್ರಹ ವ್ಯವಸ್ಥೆಗಳು ಆರೋಗ್ಯಕರವಾಗಿದ್ದು, ಉಪಗ್ರಹವು ಪ್ರಸ್ತುತ ದೀರ್ಘವೃತ್ತದ ಕಕ್ಷೆಯಲ್ಲಿದೆ. ದೀರ್ಘವೃತ್ತದ ಕಕ್ಷೆಯಲ್ಲಿ ನ್ಯಾವಿಗೇಷನ್‌ಗಾಗಿ ಉಪಗ್ರಹವನ್ನು ಬಳಸಿಕೊಳ್ಳುವ ಪರ್ಯಾಯ ಮಿಷನ್ ತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ಇದೇ ವೇಳೆ ಇಸ್ರೋ ಹೇಳಿದೆ.

GSLV ರಾಕೆಟ್ ಉಪಗ್ರಹವನ್ನು GTO ನಲ್ಲಿ ಇರಿಸಿದ ನಂತರ, ಉಪಗ್ರಹದಲ್ಲಿ ಸೌರ ಫಲಕಗಳನ್ನು ಯಶಸ್ವಿಯಾಗಿ ನಿಯೋಜಿಸಲಾಯಿತು ಮತ್ತು ನಾಮಮಾತ್ರಕ್ಕೆ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಭೂಮಿಯಿಂದ ಸಂವಹನ ಸ್ಥಾಪಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಎಲ್ಲಾ ಹಂತಗಳು ದೋಷರಹಿತವಾಗಿ ಕಾರ್ಯನಿರ್ವಹಿಸಿದ್ದರಿಂದ ಜಿಎಸ್‌ಎಲ್‌ವಿಯಲ್ಲಿನ ಉಡಾವಣೆ ಯಶಸ್ವಿಯಾಗಿದೆ ಎಂದೂ ತನ್ನ ಹೇಳಿಕೆಯಲ್ಲಿ ಇಸ್ರೋ ಸ್ಪಷ್ಟಪಡಿಸಿದೆ.

ಇದನ್ನು ಓದಿ:ನಿಮ್ಮ ಲ್ಯಾಪ್​ಟಾಪ್​ ಸ್ಲೋ ಚಾರ್ಜ್​ ಆಗುತ್ತಿದೆಯೇ? ಈ ಐದು ಟಿಪ್ಸ್​ ಪಾಲಿಸಿ ನೋಡಿ

ಇದನ್ನು ಓದಿ:9ನೇ ಬಾರಿ ಬಾಹ್ಯಾಕಾಶ ನಡೆಗೆ ಕೈಗೊಂಡ ಸುನೀತಾ ವಿಲಿಯಮ್ಸ್​ ​: ಇಲ್ಲಿದೆ ಲೈವ್​ ಸ್ಟ್ರೀಮಿಂಗ್​

ABOUT THE AUTHOR

...view details