ಕರ್ನಾಟಕ

karnataka

ETV Bharat / technology

ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲುದಾರಿಕೆ: ಹೊಸ ಆವಿಷ್ಕಾರಗಳಿಗೆ ಭಾರತ- ಅಮೆರಿಕ ಪರಸ್ಪರ ಒಪ್ಪಿಗೆ - India US space exploration

ಬಾಹ್ಯಾಕಾಶ ಪರಿಶೋಧನೆಯ ದಿಕ್ಕಿನಲ್ಲಿ ಎರಡು ದೇಶಗಳ ನಡುವಿನ ಒಪ್ಪಂದವು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಏಕೆಂದರೆ ಭಾರತವು ಭಾರತೀಯ ಅಂತರಿಕ್ಷಾ ನಿಲ್ದಾಣ ಎಂಬ ಹೆಸರಿನ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಯೋಜಿಸಿದೆ. ಈ ನಿಲ್ದಾಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ವಹಿಸುತ್ತದೆ. ಬಾಹ್ಯಾಕಾಶ ನಿಲ್ದಾಣವು 2035 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ, NASA 2031ರ ವೇಳೆಗೆ ತನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಗಿಗೊಳಿಸಲು ಯೋಜಿಸಿದೆ.

JOHNSON SPACE CENTER  INDIA US SPACE EXPLORATION  NASA  ISRO
ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲುದಾರಿಕೆ, ಹೊಸ ಆವಿಷ್ಕಾರಗಳಿಗೆ ಭಾರತ- ಅಮೆರಿಕ ಮಹತ್ವದ ಒಪ್ಪಂದ (IANS)

By ETV Bharat Karnataka Team

Published : Jun 18, 2024, 12:03 PM IST

ನವದೆಹಲಿ:ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲುದಾರಿಕೆ ಹಾಗೂ ಹೊಸ ಆವಿಷ್ಕಾರಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಭಾರತ - ಅಮೆರಿಕ ಒಪ್ಪಂದ ಮಾಡಿಕೊಂಡಿವೆ. ಬಾಹ್ಯಾಕಾಶ ಪಾಲುದಾರಿಕೆ ಮತ್ತು ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ಮಧ್ಯೆ ನಡೆದ ಮಹತ್ವದ ಮಾತುಕತೆಯಲ್ಲಿ, ಮಾನವ ಬಾಹ್ಯಾಕಾಶ ಯಾನ ಸಹಕಾರಕ್ಕಾಗಿ ಕಾರ್ಯತಂತ್ರದ ಚೌಕಟ್ಟಿನ ಅಡಿ ಕೆಲಸ ಮಾಡಲು ಉಭಯ ದೇಶಗಳು ಪರಸ್ಪರ ಒಪ್ಪಿಕೊಂಡಿವೆ.

ISRO ಗಗನಯಾತ್ರಿಗಳಿಗೆ ನಾಸಾದಲ್ಲಿ ಸುಧಾರಿತ ತರಬೇತಿ:ISRO ಗಗನಯಾತ್ರಿಗಳು NASA ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಸುಧಾರಿತ ತರಬೇತಿ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ NASA ಮತ್ತು ISRO ಗಗನಯಾತ್ರಿಗಳ ನಡುವಿನ ಮೊದಲ ಜಂಟಿ ಸಂಶೋಧನಗಳು ಹಾಗೂ ತರಬೇತಿ ನಡೆಯಲಿದೆ. ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್ ಸುಲ್ಲಿವಾನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವಿನ ಐಸಿಇಟಿ ಸಂವಾದದ ನಂತರ ಸೋಮವಾರ ಅಮೆರಿಕ ಮತ್ತು ಭಾರತ ಜಿಂಟಿಯಾಗಿ ಫ್ಯಾಕ್ಟ್ ಶೀಟ್ ಅನ್ನು ಹೊರಡಿಸಲಾಗಿದೆ.

ಬಾಹ್ಯಾಕಾಶದಲ್ಲಿ ಪರಸ್ಪರ ಕಾರ್ಯನಿರ್ವಹಿಸಲು, ಮಾನವ ಬಾಹ್ಯಾಕಾಶ ಯಾನ ಸಹಕಾರಕ್ಕಾಗಿ ಕಾರ್ಯತಂತ್ರ ರೂಪಿಸುವುದು ಮತ್ತು NASA ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ISRO ಗಗನಯಾತ್ರಿಗಳಿಗೆ ಸುಧಾರಿತ ತರಬೇತಿಯನ್ನು ಪ್ರಾರಂಭಿಸುವತ್ತ ಕಾರ್ಯನಿರ್ವಹಿಸಲಾಗುವುದು ಎಂದು ಫ್ಯಾಕ್ಟ್ ಶೀಟ್​ನಲ್ಲಿ ತಿಳಿಸಲಾಗಿದೆ.

ಇಬ್ಬರು ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡುವಲ್ಲಿ ನಾಸಾ ಕೈಜೋಡಿಸಲಿದೆ. ಅವರಲ್ಲಿ ಒಬ್ಬರು ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಹಾರಲಿದ್ದಾರೆ. ಇಸ್ರೋ ನಾಲ್ವರು ಗಗನಯಾತ್ರಿಗಳನ್ನು ತರಬೇತಿಗಾಗಿ ಆಯ್ಕೆ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಈ ಹಿಂದೆ ಹೇಳಿದ್ದರು.

ಭಾರತೀಯ ಬಾಹ್ಯಾಕಾಶ ನಿಲ್ದಾಣ 2035ರೊಳಗೆ ಪೂರ್ಣ: ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಭಾರತ ನಿರ್ಮಿಸುತ್ತದೆ. ಈ ನಿಲ್ದಾಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ವಹಿಸುತ್ತದೆ. ನಿಲ್ದಾಣವು 2035 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. NASA 2031 ರ ವೇಳೆಗೆ ISS ಅನ್ನು ನಿಷ್ಕ್ರಿಯಗೊಳಿಸಲು ಯೋಜಿಸಿದೆ.

ಭಾರತೀಯ ಬಾಹ್ಯಾಕಾಶ ನಿಲ್ದಾಣವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗಿಂತ ಚಿಕ್ಕದಾಗಿರುತ್ತದೆ. ಇದು 20 ಟನ್‌ಗಳಷ್ಟು (ISS - 450 ಟನ್‌ಗಳು ಮತ್ತು ಚೈನೀಸ್ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ - 100 ಟನ್‌ಗಳು) ದ್ರವ್ಯರಾಶಿಯನ್ನು ಹೊಂದಿರುತ್ತದೆ. ಮತ್ತು ಇದನ್ನು ಮೈಕ್ರೋಗ್ರಾವಿಟಿ ಪ್ರಯೋಗಗಳಿಗೆ ಬಳಸಲಾಗುತ್ತದೆ. ಇದು ಸುಮಾರು 400 ಕಿಮೀ ಎತ್ತರದಲ್ಲಿ ಭೂಮಿಯನ್ನು ಸುತ್ತುತ್ತದೆ.

ಲೂನಾರ್ ಗೇಟ್‌ವೇ ಕಾರ್ಯಕ್ರಮ:''ಎರಡು ಕಡೆಯವರು ಲೂನಾರ್ ಗೇಟ್‌ವೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶಗಳನ್ನು ಅನ್ವೇಷಿಸುತ್ತಿದ್ದಾರೆ. ಲೂನಾರ್ ಗೇಟ್‌ವೇ ಕಾರ್ಯಕ್ರಮದಲ್ಲಿ ಭಾರತದ ಭಾಗವಹಿಸುವಿಕೆಗೆ ಅವಕಾಶಗಳನ್ನು ಅನ್ವೇಷಿಸುವುದು. ಮತ್ತು ಇತರ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಸಹಯೋಗಕ್ಕಾಗಿ ಜಂಟಿ ಕಾರ್ಯಗಳ ಬಗ್ಗೆ ಕೆಲಸ ಮಾಡುತ್ತದೆ" ಎಂದು ಐಸಿಇಟಿ ಸಂವಾದದ ನಂತರ ಅಮೆರಿಕ ಮತ್ತು ಭಾರತ ನೀಡಿದ ಫ್ಯಾಕ್ಟ್ ಶೀಟ್​ನಲ್ಲಿ ತಿಳಿಸಲಾಗಿದೆ.

ಮಾನವ ಬಾಹ್ಯಾಕಾಶ ಪರಿಶೋಧನೆ:ಲೂನಾರ್ ಗೇಟ್‌ವೇ ಮಾನವ ಬಾಹ್ಯಾಕಾಶ ಪರಿಶೋಧನೆಯಲ್ಲಿ ಗಮನಾರ್ಹವಾಗಿ ಪ್ರತಿನಿಧಿಸುತ್ತದೆ. ಚಂದ್ರನ ಮೇಲ್ಮೈ ಕಾರ್ಯಾಚರಣೆಗಳು, ವೈಜ್ಞಾನಿಕ ಸಂಶೋಧನೆಗಳು ಮತ್ತು ಭವಿಷ್ಯದ ಆಳವಾದ ಬಾಹ್ಯಾಕಾಶ ಪ್ರಯತ್ನಗಳಿಗೆ ಅಮೆರಿಕ ನೇತೃತ್ವದಲ್ಲಿ ತಯಾರಿಗಾಗಿ ಬಹುಮುಖ ವೇದಿಕೆಯನ್ನು ಒದಗಿಸುತ್ತದೆ.

ಆರ್ಟೆಮಿಸ್, ಚಂದ್ರನ ಮೇಲೆ ದೀರ್ಘಾವಧಿಯ ನೆಲೆಯನ್ನು ಸ್ಥಾಪಿಸಲು ಉದ್ದೇಶಿಸಿದೆ (ಆರ್ಟೆಮಿಸ್ ಬೇಸ್), ಮತ್ತು ಲೂನಾರ್​ ಗೇಟ್‌ವೇ ಚಂದ್ರನನ್ನು ಸುತ್ತುವ ಬಹುಪಯೋಗಿ ಕಾರ್ಯನಿರ್ವಹಿಸುತ್ತದೆ. ಗೇಟ್‌ವೇ ಒಂದು ಬಹುರಾಷ್ಟ್ರೀಯ ಯೋಜನೆಯಾಗಿದ್ದು, ನಾಲ್ಕು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪಾಲುದಾರ ಸಂಸ್ಥೆಗಳನ್ನು ಒಳಗೊಂಡಿರುತ್ತದೆ.

NASA, ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA), ಜಪಾನ್‌ನ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA), ಮತ್ತು ಕೆನಡಿಯನ್ ಸ್ಪೇಸ್ ಏಜೆನ್ಸಿ (CSA) ಸಂಸ್ಥೆಗಳು ಸೇರಿವೆ. ಗೇಟ್‌ವೇ ನಿಲ್ದಾಣವು ಪ್ರಸ್ತುತ ಭೂಮಿಯ ಕಕ್ಷೆಯಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಹೋಲುತ್ತದೆ. ಆದರೆ, ಗೇಟ್‌ವೇ ಚಂದ್ರನನ್ನು ಸುತ್ತುತ್ತದೆ. ಗೇಟ್‌ವೇ ಭೂಮಿಯ ಕಕ್ಷೆ ಅಥವಾ LEO ದ ಹೊರಗೆ ಅಸ್ತಿತ್ವದಲ್ಲಿದ್ದ ಮೊದಲ ಬಾಹ್ಯಾಕಾಶ ನಿಲ್ದಾಣವಾಗಿದೆ.

ಸಿಂಥೆಟಿಕ್ ಅಪರ್ಚರ್ ರಾಡಾರ್ ಉಡಾವಣೆಗೆ ಸಿದ್ಧತೆ:ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ಉಡಾವಣೆ ಮಾಡಲು ತಯಾರಿ ನಡೆಸುತ್ತಿವೆ ಎಂದು ಫ್ಯಾಕ್ಟ್ ಶೀಟ್ ಹೇಳಿದ್ದು, ಇದು ಜಂಟಿಯಾಗಿ ಅಭಿವೃದ್ಧಿಪಡಿಸಿದ ಉಪಗ್ರಹವಾಗಿದೆ. ಇದರಿಂದ ಹವಾಮಾನ ಬದಲಾವಣೆ ಮತ್ತು ಇತರ ಜಾಗತಿಕ ಸವಾಲುಗಳು ಎದುರಿಸಲು ಸಹಕಾರಿಯಾಗುತ್ತದೆ.

ಪ್ರತಿ 12 ದಿನಗಳಿಗೊಮ್ಮೆ ಭೂಮಿಯ ಮೇಲ್ಮೈ ಸಮೀಕ್ಷೆ:NISAR ಡ್ಯುಯಲ್ ಫ್ರೀಕ್ವೆನ್ಸಿಗಳನ್ನು ಬಳಸಿದ ಮೊದಲ ರಾಡಾರ್ ಇಮೇಜಿಂಗ್ ಉಪಗ್ರಹವಾಗಿದೆ. ಮಿಷನ್ ಪ್ರತಿ 12 ದಿನಗಳಿಗೊಮ್ಮೆ ಭೂಮಿಯ ಎಲ್ಲಾ ಭೂ ಪ್ರದೇಶ ಮತ್ತು ಮಂಜುಗಡ್ಡೆಯಿಂದ ಆವೃತವಾದ ಮೇಲ್ಮೈಗಳನ್ನು ಸಮೀಕ್ಷೆ ಮಾಡುತ್ತದೆ. ಇದು ಮೂರು ವರ್ಷಗಳ ಅವಧಿಯವರೆಗೆ ಕಾರ್ಯನಿರ್ವಹಿಸಲಿದೆ. NISAR ಉಪಗ್ರಹದ ಮುಖ್ಯ ಗುರಿ ಪರಿಸರ ವ್ಯವಸ್ಥೆಯ ಅಡಚಣೆಗಳು, ಮಂಜುಗಡ್ಡೆಯ ಕುಸಿತ, ಹಾಗೆಯೇ ಭೂಕಂಪಗಳು, ಜ್ವಾಲಾಮುಖಿಗಳು ಮತ್ತು ಭೂಕುಸಿತಗಳು ಸೇರಿದಂತೆ ಗ್ರಹದ ಅತ್ಯಂತ ಸಂಕೀರ್ಣವಾದ ನೈಸರ್ಗಿಕ ಪ್ರಕ್ರಿಯೆಗಳನ್ನು ವೀಕ್ಷಿಸಲು ಪೂರಕವಾಗಿದೆ.

ಇದನ್ನೂ ಓದಿ:ಸೆಮಿಕಂಡಕ್ಟರ್ಸ್​, ನಿರ್ಣಾಯಕ ಖನಿಜಗಳ ಮೇಲೆ ಸಹಕಾರ ಹೆಚ್ಚಿಸಲು ಭಾರತ - ಅಮೆರಿಕ ಮಧ್ಯೆ ಒಪ್ಪಂದ - India US Agreement

ABOUT THE AUTHOR

...view details