ಹೈದರಾಬಾದ್: ನಾನ್ಸಿಕ್ಟ್ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸುಲಭ. ಅದನ್ನು ಶುಚಿ ಮಾಡುವುದು ಕೂಡ ಅಷ್ಟೇ ಸರಳ. ಇದೇ ಕಾರಣಕ್ಕೆ ಇಂದು ಬಹುತೇಕರ ಮನೆಯಲ್ಲಿ ಈ ಪಾತ್ರೆಗಳಿಗೆ ಪ್ರಾಶಸ್ತ್ಯ ಇದೆ. ಆದರೆ, ಇದರ ಬಳಕೆ ಮಾಡುವವರಿಗೆ ಎಚ್ಚರವಹಿಸುವುದು ಅವಶ್ಯವಾಗಿದೆ. ಈ ಸಂಬಂಧ ಐಸಿಎಂಆರ್ ಕೂಡ ಎಚ್ಚರಿಕೆ ಸೂಚನೆ ನೀಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ರೀತಿಯ ನಾನ್ ಸ್ಟಿಕ್ ಪಾತ್ರೆಗಳನ್ನು ದೀರ್ಘಾವಧಿಗಳ ಕಾಲ ಬಳಕೆ ಮಾಡದಂತೆ ಸೂಚಿಸಿದ್ದಾರೆ. ಕಾರಣ ಇದರಿಂದ ಮಾಡಿದ ಅಡುಗೆ ಸೇವನೆ ಮಾಡುವುದು ಗಂಭೀರ ಆರೋಗ್ಯ ಸಮಸ್ಯೆ ಅಪಾಯ ಎದುರಿಸುತ್ತದೆ. ಹಾಗಾದರೆ, ಆರೋಗ್ಯದ ದೃಷ್ಟಿಯಿಂದ ಯಾವ ಪಾತ್ರೆಯಲ್ಲಿ ಅಡುಗೆ ಉಪಯೋಗ. ನಾನ್ ಸ್ಟಿಕ್ ಪಾತ್ರೆಗಳು ಯಾಕೆ ಅಪಾಯ ಎಂಬ ಕುರಿತು ಐಸಿಎಂಆರ್ ಮಾಹಿತಿ ಇಲ್ಲಿದೆ.
ನಾನ್ ಸ್ಟಿಕ್ ಪಾತ್ರೆಗಳ ನಿರ್ಮಾಣದಲ್ಲಿ ಪಾಲಿ ಟೆಟ್ರಾಪ್ಲೊರೊ ಎಥಿಲೆನೆ (ಪಿಟಿಎಫ್ಇ) ಎಂಬ ರಾಸಾಯನಿಕ ಬಳಕೆ ಮಾಡಲಾಗುವುದು. ಇದನ್ನು ಟೆಫ್ಲೊನ್ ಎಂದು ಕೂಡ ಕರೆಯಲಾಗುತ್ತದೆ. ಈ ಟೆಫ್ಲೊನ್ ಎಂಬುದು ಸಿಂಥೆಟಿಕ್ ರಾಸಾಯನಿಕವೂ ಇಂಗಾಲ ಮತ್ತು ಫ್ಲೋರಿನ್ ಪರಮಾಣುಗಳನ್ನು ಹೊಂದಿರುತ್ತದೆ. ತಜ್ಞರು ಹೇಳುವಂತೆ ಈ ನಾನ್ ಸ್ಟಿಕ್ ಪಾತ್ರೆಯ ತಳದಲ್ಲಿ ಈ ರಾಸಾಯನಿಕ ಸುರಿಯಲಾಗಿರುತ್ತದೆ. ಐಸಿಎಂಆರ್ ಹೇಳುವಂತೆ, ನಾನ್ ಸ್ಟಿಕ್ ಪಾತ್ರೆಯಲ್ಲಿ ಸಣ್ಣ ಸ್ಕ್ರಾಚ್ ಕೂಡ ಈ ಹಾನಿಕಾರಕ ರಾಸಾಯನಿಕ ಬಿಡುಗಡೆ ಆಗಿ, ಆಹಾರದೊಂದಿಗೆ ಸೇರುತ್ತದೆ. ನಾನ್ ಸ್ಟಿಕ್ ಪಾತ್ರೆಗಳಲ್ಲಿ ಉಂಟಾಗುವ ಒಂದು ಸ್ಕ್ರಾಚ್ನಿಂದ 9,100 ಮೈಕ್ರೋಪ್ಲಾಸ್ಟಿಕ್ ಕಣಗಳು ಬಿಡುಗಡೆಯಾಗುತ್ತದೆ.