ಕರ್ನಾಟಕ

karnataka

ETV Bharat / technology

ನ್ಯೂ ಲುಕ್​, ಸೂಪರ್​ ಫೀಚರ್ಸ್​: ದೇಶಿ ಮಾರುಕಟ್ಟೆಗೆ ಬಂತು ಹೊಸ ಪಲ್ಸರ್​ - BAJAJ PULSAR RS200

Bajaj Pulsar RS200: ಬಜಾಜ್ ಆಟೋ ಹೊಸ ಪಲ್ಸರ್ ಆರ್​ಎಸ್​200 ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ್​ ಲುಕ್​, ಅದ್ಭುತ ವೈಶಿಷ್ಟ್ಯಗಳೊಂದಿಗೆ ಬಂದಿರುವ ಬೈಕ್​ನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

BAJAJ PULSAR RS200 LAUNCHED  BAJAJ PULSAR RS200 SPECIFICATIONS  2025 BAJAJ PULSAR RS200 PRICE  2025 BAJAJ PULSAR RS200
ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಪಲ್ಸರ್ (Photo Credit: Bajaj Auto)

By ETV Bharat Karnataka Team

Published : 7 hours ago

Bajaj Pulsar RS200:ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿ ಬಜಾಜ್ ಆಟೋ ತನ್ನ ಹೊಸ ಪಲ್ಸರ್ ಆರ್‌ಎಸ್ 200 ಅನ್ನು ದೇಶಿಯ ಮಾರುಕಟ್ಟೆ ಬಿಡುಗಡೆ ಮಾಡಿದೆ. ಈ ಬೈಕ್ ಮೂಲಕ ಕಂಪನಿಯು ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಹೊಸ ಪಲ್ಸರ್ RS200 ವಿನ್ಯಾಸವು ಸಂಪೂರ್ಣವಾಗಿ ಸ್ಪೋರ್ಟಿಯಾಗಿದೆ.

ಕಂಪನಿಯು ಈ ಬೈಕ್‌ನಲ್ಲಿ ಹೊಸ ಫೀಚರ್​ಗಳ ಜೊತೆ ಡಿಸೈನ್​ ಅಪ್​ಡೇಟ್​ ಮಾಡಿದೆ. ಇದರ ಲುಕ್​ಗೆ ಯವಕರು ಫಿದಾ ಆಗಲಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ನೀವು ಈ ಬೈಕನ್ನು ಗ್ಲಾಸಿ ರೇಸಿಂಗ್ ರೆಡ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ಆ್ಯಕ್ಟಿವ್ ಸ್ಯಾಟಿನ್ ಬ್ಲ್ಯಾಕ್ ಸೇರಿದಂತೆ 3 ಬಣ್ಣಗಳಲ್ಲಿ ಖರೀದಿಸಬಹುದು. ಈ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 1,84,115 ರೂ.ಗಳಾಗಿದೆ.

ಇಂಜಿನ್​ ಮತ್ತು ಪವರ್​:ನ್ಯೂ ಬಜಾಜ್ ಪಲ್ಸರ್ RS200 200cc, ಫ್ಯೂಯಲ್​-ಇಂಜೆಕ್ಟೆಡ್, ಸಿಂಗಲ್-ಸ್ಪಾರ್ಕ್, 4-ವಾಲ್ವ್ 199.5cc ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಇದು 24.5 PS ಪವರ್ ಮತ್ತು 18.7 Nm ಟಾರ್ಕ್ ಉತ್ಪಾದಿಸುತ್ತದೆ.

ಎಂಜಿನ್ 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಿದ್ಧಗೊಂಡಿದೆ. ಇದು ತನ್ನ ವಿಭಾಗದಲ್ಲಿನ ಅತ್ಯುತ್ತಮ ಎಂಜಿನ್ ಎಂದು ನಂಬಲಾಗಿದೆ. ಈ ಎಂಜಿನ್ ಎಲ್ಲಾ ಹವಾಮಾನದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಶಕ್ತಿ ಮತ್ತು ಕಾರ್ಯಕ್ಷಮತೆಯ ವಿಷಯದಲ್ಲಿ ಇದು ಅತ್ಯಂತ ಪವರ್​ಫುಲ್​ ಎಂಜಿನ್ ಆಗಿದೆ. ಉತ್ತಮ ಕಾರ್ಯಕ್ಷಮತೆಯನ್ನು ನಿರೀಕ್ಷಿಸುವ ಜನರಿಗೆ ಈ ಬೈಕ್ ಇಷ್ಟವಾಗಬಹುದು.

ಡಿಸೈನ್​ ಮತ್ತು ಫೀಚರ್ಸ್​: ಹೊಸ ಬಜಾಜ್ ಪಲ್ಸರ್ RS200 ಡಿಸೈನ್​ ವಿಷಯದಲ್ಲಿ ಸಾಕಷ್ಟು ಬೋಲ್ಡ್​ ಆಗಿ ಕಾಣುತ್ತದೆ. ಇದು ಶಾರ್ಪ್​ ಆ್ಯಂಡ್​ ಅಗ್ರೆಸಿವ್​ ಆಗಿ ಕಾಣುತ್ತದೆ. ಇದು ಸ್ಕಲ್ಪ್ಟೇಡ್​ ಫೇರಿಂಗ್, ಬೋಲ್ಡ್ ಫ್ರಂಟ್ ಪ್ರೊಫೈಲ್, ನ್ಯೂ LED ಟೈಲ್ ಲ್ಯಾಂಪ್‌ಗಳು ಮತ್ತು ಬೋಲ್ಡ್ ನೇಕೆಡ್ ರಿಯರ್​ ಸೆಕ್ಷನ್​ ಕೊಡಲಾಗಿದೆ.

ಈ ಬೈಕ್ ನ್ಯೂ ವಿಡ್ತ್​ ಟೈರ್‌ಗಳನ್ನು (140/70-17 ಹಿಂಭಾಗ ಮತ್ತು 110/70-17 ಮುಂಭಾಗ) ಮತ್ತು ಕಸ್ಟಮೈಸಬಲ್​ ರೈಡ್ ಮೋಡ್‌ಗಳನ್ನು (ರಸ್ತೆ, ಮಳೆ ಮತ್ತು ಆಫ್‌ರೋಡ್) ಸಿಗುತ್ತದೆ. ಈ ಟೈರ್‌ಗಳು ಎಲ್ಲಾ ರೀತಿಯ ರಸ್ತೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಉತ್ತಮ ಸುರಕ್ಷತೆಗಾಗಿ ಬೈಕ್‌ಗೆ ಡಿಸ್ಕ್ ಬ್ರೇಕ್‌ಗಳ ಜೊತೆಗೆ ಡ್ಯುಯಲ್-ಚಾನೆಲ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಒದಗಿಸಲಾಗಿದೆ.

ಈ ಬೈಕ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಬ್ಲೂಟೂತ್-ಎನೆಬಲ್​, ಟರ್ನ್​-ಬೈ-ಟರ್ನ್​ ನ್ಯಾವಿಗೇಷನ್, ಕಾಲ್​ ಆ್ಯಂಡ್​ ಎಸ್‌ಎಂಎಸ್ ಅಲರ್ಟ್​, ಗೇರ್ ಇಂಡಿಕೇಶನ್​ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, ಬೈಕ್‌ನಲ್ಲಿ ಅಡ್ವಾನ್ಸ್ಡ್​ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಡೇ-ಟೈಂ LED ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಈ ಬೈಕ್‌ನಲ್ಲಿ ಇಂಟಿಗ್ರೇಟೆಡ್ ರಿಯರ್ ಟೈಲ್ ಲ್ಯಾಂಪ್‌ಗಳನ್ನು ಒದಗಿಸಲಾಗಿದೆ. ಈ ಬೈಕ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರುತ್ತದೆ. ಇದು ಸುಗಮ ಗೇರ್ ಶಿಫ್ಟ್‌ಗಳು ಮತ್ತು ಉತ್ತಮ ನಿಯಂತ್ರಣವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ ಈ ಬೈಕ್​ ಡೈನಾಮಿಕ್ ರೈಡಿಂಗ್ ಅನುಭವವನ್ನು ಹೆಚ್ಚಿಸುತ್ತದೆ. ಈಗ ಈ ಬೈಕ್ ಹೆಚ್ಚು ಸುರಕ್ಷಿತವಾಗಿದೆ.

ಹೊಸ ಪಲ್ಸರ್ ಆರ್‌ಎಸ್200 ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‌ನ ಮಾರ್ಕೆಟಿಂಗ್ ಅಧ್ಯಕ್ಷ ಸುಮೀತ್ ನಾರಂಗ್, “ಪಲ್ಸರ್ ರೇಂಜ್​ ಯಾವಾಗಲೂ ಸಾಹಸ ಮತ್ತು ಸೂಕ್ಷ್ಮತೆಯ ಸಾರಾಂಶವಾಗಿದೆ. ಭಾರತದಲ್ಲಿ ಬೈಕಿಂಗ್ ಕ್ರಾಂತಿಯನ್ನು ಹುಟ್ಟುಹಾಕಿದ ಮೋಟಾರ್‌ಸೈಕಲ್‌ಗಳಂತೆ ಇದನ್ನು ಪ್ರೀತಿಸಲಾಗುತ್ತದೆ.

ಹೊಸ ಪಲ್ಸರ್ RS200 ನಲ್ಲಿ ಹಲವು ಅಡ್ವಾನ್ಸ್ಡ್​ ಫೀಚರ್​ಗಳು ಕಂಡುಬರುತ್ತವೆ. ಈಗ ಈ ಬೈಕ್ ಮೊದಲಿಗಿಂತ ಉತ್ತಮವಾಗಿದೆ. ಇದರ ಹೊರತಾಗಿ ಇತ್ತೀಚಿನ ತಂತ್ರಜ್ಞಾನದೊಂದಿಗೆ ಸ್ಪೋರ್ಟಿ ಗ್ರಾಫಿಕ್ಸ್, ಫ್ಲೋಟಿಂಗ್ ಪ್ಯಾನಲ್ ಮತ್ತು ಏರೋಡೈನಾಮಿಕ್ ಫುಲ್-ಫೇರ್ಡ್ ಸ್ಟೈಲಿಂಗ್ ಅನ್ನು ಸಹ ಸೇರಿಸಲಾಗಿದೆ. ಇದರಿಂದಾಗಿ ಇದು ಯುವಕರಿಗೆ ತುಂಬಾ ಇಷ್ಟವಾಗಲಿದೆ.

ಇದನ್ನೂ ಓದಿ:ದೂರವಿದ್ದರೂ ಹತ್ತಿರದಂತೆ ಕಾಣುವ ಆ ಚಂದಮಾಮನ ತಾಪಮಾನದ ಗುಟ್ಟೇನು?

ABOUT THE AUTHOR

...view details