iPhone Home Screen Customise: Apple ನ iOS 18 ಅಪ್ಡೇಟ್ ನಿಮ್ಮ iPhone ನ ಸ್ಕ್ರೀನ್ನ ವೈಯಕ್ತೀಕರಿಸಲು ಪ್ರಬಲವಾದ ಹೊಸ ಆಯ್ಕೆಗಳನ್ನು ಪರಿಚಯಿಸುತ್ತದೆ. ಬಳಕೆದಾರರು ಈಗ ಸುಲಭವಾಗಿ ವಿಜೆಟ್‌ಗಳನ್ನು ಮರು ಗಾತ್ರಗೊಳಿಸಬಹುದು, ಅಪ್ಲಿಕೇಶನ್ ಐಕಾನ್ ಬಣ್ಣಗಳನ್ನು ಬದಲಾಯಿಸಬಹುದು, ಸ್ಕ್ರೀನ್ ಮೇಲೆ ಎಲ್ಲಿಯಾದರೂ ಐಕಾನ್‌ಗಳನ್ನು ಮುಕ್ತವಾಗಿ ಜೋಡಿಸಬಹುದು, ಈ ಕಸ್ಟಮೈಸ್ ವೈಶಿಷ್ಟ್ಯಗಳು ಐಫೋನ್ ಮಾಲೀಕರಿಗೆ ತಮ್ಮ ಸಾಧನದ ಆಕರ್ಷಕ ನೋಟ ಮತ್ತು ಅನುಭವದ ಮೇಲೆ ಅಭೂತಪೂರ್ವ ನಿಯಂತ್ರಣ ನೀಡುತ್ತವೆ.
iOS 18 ನಲ್ಲಿ ಮೇನ್ ಸ್ಕ್ರೀನ್ ಅನುಕೂಲದ ಆಯ್ಕೆಗಳು:
- ವಿಜೆಟ್ ಅನ್ನು ಮರುಗಾತ್ರಗೊಳಿಸಬಹುದು
- ಅಪ್ಲಿಕೇಶನ್ ಐಕಾನ್ ಬಣ್ಣಗಳು ಮತ್ತು ಥೀಮ್‌ಗಳನ್ನು ಬದಲಾಯಿಸಬಹುದು
- ಉತ್ತಮ ನೋಟಕ್ಕಾಗಿ ಅಪ್ಲಿಕೇಶನ್ ಲೇಬಲ್‌ಗಳನ್ನು ತೆಗೆದುಹಾಕಬಹುದು
- ಮೇನ್ ಸ್ಕ್ರೀನ್ ಹಿನ್ನೆಲೆ ಬಣ್ಣವನ್ನು ಸಹ ನೀವು ಬದಲಾಯಿಸಬಹುದಾಗಿದೆ
ವಿಜೆಟ್‌ಗಳನ್ನು ಸೇರಿಸುವುದು ಮತ್ತು ಮರುಗಾತ್ರಗೊಳಿಸುವುದು ಹೇಗೆ?:
- ಅಪ್ಲಿಕೇಶನ್ ಐಕಾನ್ ದೀರ್ಘವಾಗಿ ಒತ್ತಿರಿ
- ಪಾಪ್-ಅಪ್ ಮೆನುವಿನಿಂದ ವಿಜೆಟ್ ಗಾತ್ರವನ್ನು ಆಯ್ಕೆಮಾಡಿ
- ವಿಜೆಟ್ ಅನ್ನು ನೀವು ಬಯಸಿದ ಸ್ಥಳಕ್ಕೆ ಎಳೆಯಿರಿ
- ಬಳಿಕ ನೀವು ಅನದನು ಮರುಗಾತ್ರಗೊಳಿಸಲು ವಿಜೆಟ್ ದೀರ್ಘವಾಗಿ ಒತ್ತಿ ಮತ್ತು ಹೊಸ ಗಾತ್ರವನ್ನು ಆಯ್ಕೆಮಾಡಿ
ಅಪ್ಲಿಕೇಶನ್ ಐಕಾನ್ ಬಣ್ಣವನ್ನು ಬದಲಾಯಿಸಿ
- ಮೇನ್ ಸ್ಕ್ರೀನ್ ಬ್ಯಾಕ್ಗ್ರೌಂಡ್ ಅನ್ನು ದೀರ್ಘವಾಗಿ ಒತ್ತಿರಿ
- ಮೇಲಿನ ಎಡ ಮೂಲೆಯಲ್ಲಿ "ಎಡಿಟ್" ಮೇಲೆ ಟ್ಯಾಪ್ ಮಾಡಿ
- "ಕಸ್ಟಮೈಸ್" ಆಯ್ಕೆಮಾಡಿ
- "ಟಿಂಟೆಡ್" ಆಯ್ಕೆಮಾಡಿ ಮತ್ತು ಬಣ್ಣ ಪಿಕ್ಕರ್ ಅಥವಾ ಸ್ಲೈಡರ್‌ಗಳನ್ನು ಬಳಸಿ
ಅಪ್ಲಿಕೇಶನ್ ಐಕಾನ್‌ಗಳನ್ನು ಮುಕ್ತವಾಗಿ ಜೋಡಿಸಿ
- ಅಪ್ಲಿಕೇಶನ್ ಐಕಾನ್ ದೀರ್ಘವಾಗಿ ಒತ್ತಿ ಹಿಡಿದುಕೊಳ್ಳಿ
- ಬಳಿಕ ಐಕಾನ್ ಅನ್ನು ಸ್ಕ್ರೀನ್ ಮೇಲೆ ಎಲ್ಲಿಬೇಕಾದ್ರೂ ಡ್ರ್ಯಾಗ್ ಮಾಡಿ
ಅಪ್ಲಿಕೇಶನ್ ಲೇಬಲ್‌ಗಳನ್ನು ತೆಗೆದುಹಾಕಿ
ಮೇನ್ ಸ್ಕ್ರೀನ್ ಬ್ಯಾಕ್ಗ್ರೌಂಡ್ ಅನ್ನು ದೀರ್ಘವಾಗಿ ಒತ್ತಿರಿ