ಕರ್ನಾಟಕ

karnataka

ETV Bharat / technology

ಕಳೆದುಕೊಂಡ ಮೊಬೈಲ್​ ಅನ್ನು ನೀವೇ ಬ್ಲಾಕ್​ ಮಾಡಬಹುದು; ಇಲ್ಲಿದೆ ಅದರ ಪೋರ್ಟಲ್​ - sanchar saathi - SANCHAR SAATHI

ನಿಮ್ಮ ಫೋನ್ ಕಳೆದುಹೋಗಿದೆಯೇ? ಯಾರೋ ಕಳ್ಳತನ ಮಾಡಿರುವ ಶಂಕೆಯೇ? ಚಿಂತಿಸಬೇಡಿ. ಸಂಚಾರ್ ಸಾಥಿ ಪೋರ್ಟಲ್​ ಸಹಾಯದಿಂದ ನಿಮ್ಮ ಕಳೆದುಹೋದ ಫೋನ್ ಅನ್ನು ನೀವು ಟ್ರ್ಯಾಕ್ ಮಾಡಬಹುದು. ಅಗತ್ಯ ಬಿದ್ದರೆ ನೀವೇ ಅದನ್ನು ಬ್ಲಾಕ್​ ಮಾಡಬಹುದು. ಅದು ಹೇಗೆಂಬುದು ಇಲ್ಲಿ ತಿಳಿಯೋಣ.

ಮೊಬೈಲ್​ ಬ್ಲಾಕ್​ ಮಾಡಲು ಹೀಗೆ ಮಾಡಿ
ಮೊಬೈಲ್​ ಬ್ಲಾಕ್​ ಮಾಡಲು ಹೀಗೆ ಮಾಡಿ

By ETV Bharat Karnataka Team

Published : Apr 21, 2024, 6:21 PM IST

ಮೊಬೈಲ್ ಫೋನ್‌ಗಳು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಇವುಗಳಲ್ಲಿ ನಾವು ನಮ್ಮ ಸಂಪರ್ಕ ಸಂಖ್ಯೆಗಳನ್ನು ಮಾತ್ರವಲ್ಲದೆ ಅತ್ಯಂತ ಸೂಕ್ಷ್ಮ ಮಾಹಿತಿಯನ್ನೂ (ಡೇಟಾ) ಅಡಕ ಮಾಡಿರುತ್ತೇವೆ. ಇಂತಿಪ್ಪ, ನಮ್ಮ ಮೊಬೈಲ್ ಅನ್ನು ಯಾರಾದರೂ ಕದ್ದರೆ ಅಥವಾ ನಾವು ಅದನ್ನು ಕಳೆದುಕೊಂಡರೆ ನೀರಿನಿಂದ ತೆಗೆದ ಮೀನಿನಂತೆ ಒದ್ದಾಡುತ್ತೇವೆ. ಅದರಲ್ಲಿರುವ ಮಾಹಿತಿ ಸೋರಿಕೆಯಾಗುವ ಭಯ ಒಂದೆಡೆ. ಇಂತಹ ಸಮಸ್ಯೆಗೆ ಪರಿಹಾರ ನೀಡುತ್ತೆ 'ಸಂಚಾರ ಸಾಥಿ'. ಇದನ್ನು ಬಳಸಿಕೊಂಡು ನಮ್ಮಲ್ಲಿರದ ಮೊಬೈಲ್​ ಅನ್ನು ನಿಯಂತ್ರಿಸಬಹುದು.

ಸಿಇಐಆರ್​:ನಿಮ್ಮ ಫೋನ್ ಕಳೆದುಹೋದಾಗ ತಕ್ಷಣವೇ ಸಂಚಾರ ಸಾಥಿ ಪೋರ್ಟಲ್​ನಲ್ಲಿ ಐಎಂಇಐ ಮತ್ತು ಇತರ ವಿವರಗಳನ್ನು ನೀಡಬೇಕು. ಕೇಂದ್ರೀಯ ಸಲಕರಣೆಗಳ ಗುರುತಿನ ನೋಂದಣಿ (CEIR) ಮೂಲಕ ತಕ್ಷಣವೇ ನಿಮ್ಮ ಮೊಬೈಲ್​ ಅನ್ನು ಬ್ಲಾಕ್​ ಮಾಡಬಹುದು. ಅಷ್ಟೇ ಅಲ್ಲ, ಫೋನ್ ರಿಕವರಿ ಆಗಿದ್ದರೆ ಅದನ್ನು ಅನ್ ಲಾಕ್ ಮಾಡಿ ಬಳಸಬಹುದು. ಇದುವರೆಗೆ ದೇಶಾದ್ಯಂತ 15,43,666 ಕಳೆದುಹೋದ ಫೋನ್‌ಗಳನ್ನು ಈ ಪೋರ್ಟಲ್​ ಬಳಸಿ ಬ್ಲಾಕ್​ ಮಾಡಲಾಗಿದೆ. ಅವುಗಳಲ್ಲಿ 8,47,140 ಫೋನ್‌ಗಳನ್ನು ಮರಳಿ ಪಡೆಯಲಾಗಿದೆ.

ಸೈಬರ್ ಅಪರಾಧಿಗಳಿಗೆ ಚೆಕ್​ಮೇಟ್​:ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿವೆ. ಸೈಬರ್ ವಂಚಕರು ಲಿಂಕ್‌ಗಳ ಮೂಲಕ ಮಾಲ್‌ವೇರ್ ಕಳುಹಿಸುವುದು, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಫೋನ್ ಕರೆ ಮಾಡುವುದು, ಒಟಿಪಿಗಳನ್ನು ತಿಳಿದುಕೊಂಡು ಅನೇಕ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇವೆಲ್ಲವುಗಳ ಮೂಲ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್‌ಗಳು. ಅದಕ್ಕಾಗಿಯೇ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರ ಭಾಗವಾಗಿ ದೂರಸಂಪರ್ಕ ಇಲಾಖೆಯು ‘ಸಂಚಾರ ಸಾಥಿ’ ಎಂಬ ಪೋರ್ಟಲ್ ಆರಂಭಿಸಿದೆ. ಸಮಸ್ಯೆಗೆ ಒಳಗಾದವರು https://sancharsaathi.gov.in ಪೋರ್ಟಲ್‌ಗೆ ಲಾಗಿನ್​ ಆಗಿ ಸೆಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇಲ್ಲಿ ನೀಡಲಾದ ಅಂಶಗಳನ್ನು ತಿಳಿದುಕೊಂಡು ಅಪರಾಧಿಗಳ ಬಲೆಯಿಂದ ತಪ್ಪಿಸಿಕೊಳ್ಳಬಹುದು.

ಕರೆಗಳು, ಎಸ್‌ಎಂಎಸ್, ವಾಟ್ಸ್‌ಆ್ಯಪ್ ಮೂಲಕ ಸೈಬರ್ ವಂಚನೆ ನಡೆಯುತ್ತಿರುವ ಬಗ್ಗೆ ‘ಚಕ್ಷು’ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು. ಬ್ಯಾಂಕ್ ಖಾತೆ, ವಾಲೆಟ್, ಸಿಮ್, ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ, ಕೆವೈಸಿ ಅಪ್‌ಡೇಟ್, ಅವಧಿ ಮುಗಿಯುವುದು, ನಿಷ್ಕ್ರಿಯಗೊಳಿಸುವಿಕೆ, ನಕಲಿ ಅಧಿಕಾರಿಗಳ ಸೋಗು, ಲೈಂಗಿಕ ಕಿರುಕುಳದಂತಹ ವಂಚನೆಗಳ ಬಗ್ಗೆ ಈ ಪೋರ್ಟಲ್​ನಲ್ಲಿ ದೂರು ಸಲ್ಲಿಸಬಹುದು.

ಕಾಳಸಂತೆಯಲ್ಲಿ ಮೊಬೈಲ್​ ಖರೀದಿ ಬೇಡ:ಕಡಿಮೆ ಬೆಲೆಗೆ ಕಾಳಸಂತೆಯಲ್ಲಿ ಸೆಕೆಂಡ್​​ಹ್ಯಾಂಡ್​ ಮೊಬೈಲ್​ ಸಿಗುತ್ತದೆ ಎಂದು ಖರೀದಿಸುವ ಮುನ್ನ ಎಚ್ಚರಿಕೆ ಇರಲಿ. ಖರೀದಿಸುವಾಗ ಅದನ್ನು ನೋ ಯುವರ್​ ಮೊಬೈಲ್​ (ಕೆವೈಎಂ) ಪರಿಶೀಲಿಸಿ. ಅಂದರೆ, ಫೋನ್​ ಬೇರೊಬ್ಬರದೇ ಅಲ್ಲವೇ ಎಂಬುದು ಇಲ್ಲಿ ತಿಳಿಯುತ್ತದೆ. ಐಎಂಇಐ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು. ಫೋನ್‌ನಲ್ಲಿ *#06# ಅನ್ನು ಡಯಲ್ ಮಾಡಿದರೆ IMEI ಸಂಖ್ಯೆ ಬರುತ್ತದೆ. ಅದನ್ನು ಪೋರ್ಟಲ್‌ನಲ್ಲಿ ನಮೂದಿಸಿದಾಗ, ಫೋನ್ ಬ್ಲಾಕ್​ ಲಿಸ್ಟ್​​, ನಕಲು, ಈಗಾಗಲೇ ಬಳಕೆಯಲ್ಲಿದೆ ಎಂದು ತೋರಿಸಿದರೆ, ಅದನ್ನು ಖರೀದಿಸದಿಸಬೇಡಿ.

ಸೈಬರ್ ಕ್ರಿಮಿನಲ್​ಗಳು ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ, ಅಂತಹ ಅಪರಾಧಗಳನ್ನು ಪರಿಶೀಲಿಸಲು ಡಿವಿಟಿ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (Tafcap) ನಲ್ಲಿ ಚೆಕ್​ ಮಾಡಿ. ಇದರಲ್ಲಿ ನಮಗೆ ತಿಳಿಯದೇ ಯಾರೋ ನಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಬಳಸುತ್ತಿದ್ದಾರಾ? ಇಲ್ಲವೇ ಎಂಬುದು ತಿಳಿಯುತ್ತದೆ.

ಪೋರ್ಟಲ್​ನಲ್ಲಿ Tafcap ಆಯ್ಕೆ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಮುಂದುವರಿಯಲು OTP ಬರುತ್ತದೆ. ಅದನ್ನು ನಮೂದಿಸಿ ಲಾಗಿನ್ ಮಾಡಿದರೆ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್​ಗಳಿವೆ ಎಂಬುದು ಗೊತ್ತಾಗುತ್ತದೆ. ಅಲ್ಲಿ ನೀವು ಬಳಸದ ಸಿಮ್ ಕಾರ್ಡ್‌ಗಳಿದ್ದರೆ, ಅವುಗಳ ವಿರುದ್ಧ ದೂರು ನೀಡಬಹುದು. ಜೊತೆಗೆ ಅವುಗಳನ್ನು ಬ್ಲಾಕ್​ ಕೂಡ ಮಾಡಬಹುದು. ಈ ಪೋರ್ಟಲ್​ನಿಂದ ಇದುವರೆಗೆ ದೇಶಾದ್ಯಂತ 65,23,541 ದೂರುಗಳು ಬಂದಿವೆ. ಅದರಲ್ಲಿ 55,57,507 ಪ್ರಕರಣಗಳನ್ನು ಭೇದಿಸಲಾಗಿದೆ.

REQUIN:ವಿದೇಶದಿಂದ ಕರೆ ಮಾಡಿ ವಂಚಿಸುವ ಪ್ರಕರಣಗಳು ಈಗೀಗ ಹೆಚ್ಚುತ್ತಿವೆ. ವಾಸ್ತವವಾಗಿ ವಂಚಕರು ವಿದೇಶದಿಂದ ಕರೆ ಮಾಡುತ್ತಿದ್ದರೂ, ಸಂಖ್ಯೆಯು ಭಾರತದ ಕೋಡ್‌ ಅನ್ನೇ ಹೊಂದಿರುತ್ತದೆ. ಇದು ವಿದೇಶಿ ಕರೆಯೇ ಎಂಬುದನ್ನು ತಿಳಿಯಲು ಭಾಷೆಯನ್ನು ಆಲಿಸಬೇಕು. ಇಂತಹ ಮೋಸದ ಕರೆಗಳನ್ನು 'ರಿಪೋರ್ಟ್ ಇನ್‌ಕಮಿಂಗ್ ಇಂಟರ್‌ನ್ಯಾಶನಲ್ ಕಾಲ್ ವಿತ್ ಇಂಡಿಯನ್ ನಂಬರ್ (REQUIN) ನಲ್ಲಿ ನಮೂದಿಸಿ ದೂರು ನೀಡಬಹುದು. ಇವುಗಳ ಮೇಲೆ DVOT ನಿಗಾ ವಹಿಸುತ್ತದೆ.

ಇದನ್ನೂ ಓದಿ:ಸರ್ಜನ್​ಗಳಿಗೆ ರೋಬೊಟ್​ ತಂತ್ರಜ್ಞಾನದ ತರಬೇತಿ ಅಗತ್ಯ: ತಜ್ಞರ ಅಭಿಪ್ರಾಯ - ROBOTICS SURGEONS

ABOUT THE AUTHOR

...view details