GTA 6 Release Date:ಗ್ರ್ಯಾಂಡ್ ಥೆಫ್ಟ್ ಆಟೋ ವಿಡಿಯೋ ಗೇಮ್ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಸುಮಾರು 11 ವರ್ಷಗಳ ಬಳಿಕ ಈಗ ಜಿಟಿಎ ಮತ್ತೆ ಸುದ್ದಿಗೆ ಬಂದಿದೆ. ಈ ಗೇಮ್ನ ಮುಂದಿನ ಆವೃತಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಂತಸದ ಸುದ್ದಿ ಹೊರ ಬಿದ್ದಿದೆ. ಸದ್ಯ ಈ ಗೇಮ್ನ ಮತ್ತೊಂದು ಟ್ರೈಲರ್ ಬಿಡುಗಡೆಗೆ ಸಿದ್ಧಗೊಂಡಿದೆ.
ಹೌದು, ಜಿಟಿಎ 6 ಬಿಡುಗಡೆ ದಿನಾಂಕ ಪ್ರಕಟಗೊಂಡಿದೆ. ಈ ಗೇಮ್ ಪ್ರೇಮಿಗಳ ಕಾಯುವಿಕೆ ಮುಂದಿನ ವರ್ಷ ಮುಕ್ತಾಯವಾಗಲಿದೆ. ಈ ಆಟಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಕೊನೆಯ ಆವೃತ್ತಿಯನ್ನು 2013 ರಲ್ಲಿ ಬಿಡುಗಡೆ ಮಾಡಲಾಯಿತು. ಅಂದಿನಿಂದ ಈ ಗೇಮ್ ಅಭಿಮಾನಿಗಳು ಅದರ ಹೊಸ ಆವೃತ್ತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕಂಪನಿಯು ತನ್ನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಆದರೆ ಇದು 2025 ರ ದ್ವಿತೀಯಾರ್ಧದಲ್ಲಿ ಬರಬಹುದು ಎಂದು ಹಣಕಾಸು ವರದಿಯೊಂದು ಸೂಚಿಸಿದೆ. ಈ ಬಾರಿ ಇದು PS5 ಮತ್ತು Xbox ಸೀರಿಸ್ಗಳಲ್ಲಿ ಲಭ್ಯವಿರುತ್ತದೆ
ಶೀಘ್ರವೇ ಎರಡನೇ ಟ್ರೈಲರ್ ಬಿಡುಗಡೆ:ಗೇಮ್ ಮೇಕರ್ ರಾಕ್‌ಸ್ಟಾರ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ಮೊದಲ ಟ್ರೈಲರ್ ಬಿಡುಗಡೆ ಮಾಡಿತ್ತು, ಇದರಲ್ಲಿ ಗೇಮ್‌ಪ್ಲೇ ಫೂಟೇಜ್ ಮತ್ತು ಮ್ಯಾಪ್ ವಿವರಗಳನ್ನು ಬಹಿರಂಗಪಡಿಸಲಾಯಿತು. ಇದರ ಎರಡನೇ ಟ್ರೇಲರ್ ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಇದರಲ್ಲಿ ಆಟದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಳ್ಳಲಿದೆ.