ಪ್ಯಾರಿಸ್(ಫ್ರೆಂಚ್):ವಿವಾದಾತ್ಮಕ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ಗೆ ಸಂಬಂಧಿಸಿದ ಆಪಾದಿತ ಅಪರಾಧಗಳ ಮೇಲೆ ಶನಿವಾರ ಬಂಧನಕ್ಕೊಳಗಾದ ರಷ್ಯಾದ ಸಂಸ್ಥಾಪಕ ಮತ್ತು ಟೆಲಿಗ್ರಾಮ್‌ನ ಮುಖ್ಯಸ್ಥ ಪಾವೆಲ್ ಡುರೊವ್ ಅವರ ಬಂಧನವನ್ನು ಫ್ರೆಂಚ್ ಅಧಿಕಾರಿಗಳು ಸೋಮವಾರ ವಿಸ್ತರಿಸಿದ್ದಾರೆ ಎಂದು ಪ್ರಕರಣದ ಮೂಲವೊಂದು ಅಧಿಕೃತ ಮಾಧ್ಯಮ ಸಂಸ್ಥೆಗೆ ತಿಳಿಸಿದೆ.
39 ವರ್ಷದ ಪಾವೆಲ್ ಡುರೊವ್ ಅವರನ್ನು ವಂಚನೆ, ಮಾದಕವಸ್ತು ಕಳ್ಳಸಾಗಣೆ, ಸೈಬರ್ ಬುಲ್ಲಿಂಗ್, ಸಂಘಟಿತ ಅಪರಾಧ ಹಾಗೂ ಭಯೋತ್ಪಾದನೆಯನ್ನು ಉತ್ತೇಜಿಸುವುದು ಸೇರಿದಂತೆ ಎಲ್ಲಾ ಆಪಾದಿತ ಅಪರಾಧಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಇದರ ಮಧ್ಯೆ 900 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ನಲ್ಲಿ ಕ್ರಿಮಿನಲ್ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪವನ್ನು ಕಂಪನಿಯು ತಳ್ಳಿಹಾಕಿದೆ.