Lightweight Bulletproof Jackets: ದೇಶ ಹಾಗೂ ಸೈನಿಕರ ಭದ್ರತೆಗಾಗಿ DRDO ಹೊಸ ಹೊಸ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುತ್ತದೆ. ಈ ಅನುಕ್ರಮದಲ್ಲಿ, IIT ದೆಹಲಿಯ ಸಂಶೋಧಕರ ಸಹಯೋಗದೊಂದಿಗೆ ಸಂಸ್ಥೆಯು ಅಡ್ವಾನ್ಸ್ಡ್ ಬ್ಯಾಲಿಸ್ಟಿಕ್ ಫಾರ್ ಹೈ ಎನರ್ಜಿ ಡಿಫೀಟ್ (ABHED) ಎಂಬ ಹೊಸ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದೆ.
ಜಾಕೆಟ್‌ನ ರಕ್ಷಾಕವಚ ಫಲಕಗಳು ಅಗತ್ಯವಿರುವ ಎಲ್ಲ ಸಂಶೋಧನಾ ಪರೀಕ್ಷೆಗಳಲ್ಲೂ ಪಾಸ್ ಆಗಿವೆ. ಜಾಕೆಟ್ ಗರಿಷ್ಠ ಬೆದರಿಕೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 360 ಡಿಗ್ರಿ ರಕ್ಷಣೆ ಒದಗಿಸುತ್ತದೆ. ಹಾಗಾಗಿ ಇದಕ್ಕೆ 'ಅಭೇದ್ಯ' ಎಂದು ಹೆಸರಿಡಲಾಗಿದೆ.
ವಿದೇಶಿ ಜಾಕೆಟ್‌ಗಿಂತ ಕಡಿಮೆ ತೂಕ:ಡಿಆರ್‌ಡಿಒ ಇಂಡಸ್ಟ್ರಿ ಅಕಾಡೆಮಿಕ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಜಾಕೆಟ್ ಸಿದ್ಧಪಡಿಸಿದೆ. ಇದರ ಎರಡು ಆವೃತ್ತಿಗಳನ್ನು ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಸೈನಿಕರು 10.5 ಕೆಜಿ ತೂಕದ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಬಳಸುತ್ತಿದ್ದಾರೆ. ಈಗಿನ ಜಾಕೆಟ್‌ನ ತೂಕ ವಿದೇಶಿ ಜಾಕೆಟ್‌ಗಿಂತ 2.5 ಕೆಜಿ ಕಡಿಮೆ ಇದೆ.
ವೈಶಿಷ್ಟ್ಯಗಳೇನು?:ರಕ್ಷಣಾ ಸಚಿವಾಲಯದ ಪ್ರಕಾರ, ಪಾಲಿಮರ್ ಮತ್ತು ಸ್ಥಳೀಯ ಬೋರಾನ್ ಕಾರ್ಬೈಡ್ ಸೆರಾಮಿಕ್ ವಸ್ತುಗಳಿಂದ ಹಗುರ ಜಾಕೆಟ್‌ಗಳನ್ನು ತಯಾರಿಸಲಾಗುತ್ತಿದೆ. DRDO ಸಹಯೋಗದೊಂದಿಗೆ ಸರಿಯಾದ ಮಾಡೆಲಿಂಗ್ ಮತ್ತು ಸಿಮ್ಯುಲೇಶನ್ ನಡೆಸಿದ ನಂತರ ವಿವಿಧ ವಸ್ತುಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಆರ್ಮರ್ ಪ್ಲೇಟ್ ಪ್ರೋಟೋಕಾಲ್ ಪ್ರಕಾರ, ಜಾಕೆಟ್‌ಗೆ ಅಗತ್ಯವಿರುವ ಎಲ್ಲ ಪರೀಕ್ಷೆಗಳನ್ನು ನಡೆಸಲಾಗಿದೆ. ಇವು ಅತ್ಯಧಿಕ ಬೆದರಿಕೆ ಮಟ್ಟವನ್ನು ಪೂರೈಸುತ್ತವೆ ಮತ್ತು ಭಾರತೀಯ ಸೇನೆ ನಿಗದಿಪಡಿಸಿದ ಮಾನದಂಡಗಳಂತೆ ಗರಿಷ್ಠ ತೂಕದ ಮಿತಿಗಿಂತ ಹಗುರವಿದೆ. ವಿಭಿನ್ನ ಬಿಐಎಸ್ ಮಟ್ಟಗಳಿಗೆ ಕನಿಷ್ಠ 8.2 ಕೆ.ಜಿ ಮತ್ತು 9.5 ಕೆ.ಜಿ ತೂಕದೊಂದಿಗೆ, ಮಾಡ್ಯುಲರ್ ಜಾಕೆಟ್‌ಗಳು ಮುಂಭಾಗ ಮತ್ತು ಹಿಂಭಾಗದ ರಕ್ಷಾಕವಚದೊಂದಿಗೆ 360 ಡಿಗ್ರಿ ರಕ್ಷಣೆ ಒದಗಿಸಬಲ್ಲವು.