ನವದೆಹಲಿ: 2024 ರ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ಜಾಗತಿಕವಾಗಿ ಮಾರಾಟವಾದ ಒಟ್ಟು ಸ್ಮಾರ್ಟ್ಪೋನ್ಗಳ ಪೈಕಿ ಶೇ 6ರಷ್ಟು ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಜೆನ್ ಎಐ) ಫೋನ್ಗಳಾಗಿವೆ. ಇದು ಹಿಂದಿನ ತ್ರೈಮಾಸಿಕದಲ್ಲಿ ಇದ್ದ ಕೇವಲ 1.3 ಶೇಕಡಾದಿಂದ ಗಮನಾರ್ಹ ಏರಿಕೆಯಾಗಿದೆ ಎಂದು ಹೊಸ ವರದಿ ಗುರುವಾರ ತೋರಿಸಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ ಮಾರಾಟವಾದ ಒಟ್ಟಾರೆ ಪ್ರೀಮಿಯಂ ಸ್ಮಾರ್ಟ್ ಫೋನ್ಗಳ (600 ಡಾಲರ್ ಗಿಂತ ಹೆಚ್ಚಿನ ಬೆಲೆಯ ಫೋನ್ಗಳು) ಪೈಕಿ ಶೇಕಡಾ 70ರಷ್ಟು ಜೆನ್ ಎಐ ಫೋನ್ಗಳಾಗಿವೆ. ಸ್ಯಾಮ್ಸಂಗ್ನ ಗ್ಯಾಲಕ್ಸಿ ಎಸ್ 24 ಸರಣಿಯು ಮೊದಲ ತ್ರೈಮಾಸಿಕದಲ್ಲಿ ಜೆಎಐ ಆಧಾರಿತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಅತ್ಯಧಿಕ ಮಾರಾಟವಾದ ಜೆನ್ ಎಐ ಸಾಮರ್ಥ್ಯದ ಸ್ಮಾರ್ಟ್ ಫೋನ್ಗಳ ಟಾಪ್ -10 ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಇದರಲ್ಲಿ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದ್ದು, ಶೇಕಡಾ 30 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿದೆ.
"ಗ್ಯಾಲಕ್ಸಿ ಎಸ್ 24 ನ ಜೆಎನ್ ಎಐ ಸಾಮರ್ಥ್ಯಗಳನ್ನು ಎತ್ತಿ ತೋರಿಸುವ ಸ್ಯಾಮ್ ಸಂಗ್ನ ಮಾರ್ಕೆಟಿಂಗ್ ಅಭಿಯಾನ ಹಾಗೂ ತನ್ನ ಸ್ಥಾಪಿತ ಜಾಗತಿಕ ಮಾರುಕಟ್ಟೆಯೊಂದಿಗೆ ಬ್ರ್ಯಾಂಡ್ ಜೆಎನ್ಎಐ ವಿಭಾಗದಲ್ಲಿ ಸ್ಯಾಮ್ಸಂಗ್ ಶೇಕಡಾ 58 ರಷ್ಟು ಪಾಲು ಪಡೆಯಲು ಸಾಧ್ಯವಾಗಿದೆ" ಎಂದು ವಿಶ್ಲೇಷಕರು ಹೇಳಿದ್ದಾರೆ.