ಕರ್ನಾಟಕ

karnataka

ETV Bharat / technology

ಜಿಯೋ, ಏರ್‌ಟೆಲ್‌ಗೆ ಠಕ್ಕರ್​ ನೀಡಲು ಸಿದ್ಧವಾಗುತ್ತಿದೆ ಬಿಎಸ್​ಎನ್​ಎಲ್; ಸಂಕ್ರಾಂತಿಗೆ 5ಜಿ ಸೇವೆ ಆರಂಭ? - BSNL 5G SERVICES

BSNL 5G Services: ಸಂಕ್ರಾಂತಿ ಹಬ್ಬಕ್ಕೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್ ತನ್ನ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಬಿಎಸ್​ಎನ್​ಎಲ್​ ಮಾಹಿತಿ ನೀಡಿದೆ.

BSNL 5G SERVICES LAUNCH DATE  BSNL TO ROLL OUT 5G SERVICES  MAKAR SANKRANTI
ಜಿಯೋ, ಏರ್‌ಟೆಲ್‌ಗೆ ಠಕ್ಕರ್​ ನೀಡಲು ಸಿದ್ಧವಾಗುತ್ತಿದೆ ಬಿಎಸ್​ಎನ್​ಎಲ್ (X/@DoT_India)

By ETV Bharat Tech Team

Published : Nov 6, 2024, 1:40 PM IST

BSNL 5G Services: ಈಗಾಗಲೇ ನಮ್ಮ ದೇಶದಲ್ಲಿ 5ಜಿ ಸೇವೆ ಆರಂಭಗೊಂಡಿರುವುದು ಗೊತ್ತಿರುವ ಸಂಗತಿ. ಜಿಯೋ, ಏರ್​ಟೆಲ್​ ಮತ್ತು ವೋಡಾಫೋನ್​ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಒದಗಿಸುತ್ತಿರುವುದರ ಬಗ್ಗೆ ಗೊತ್ತಿದೆ. ಈಗ ಈ ಲಿಸ್ಟ್​ಗೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್​ ಸಹ ಸೇರಿಕೊಳ್ಳಲಿದೆ. ಬಿಎಸ್​ಎನ್​ಎಲ್​ 4ಜಿ ಮತ್ತು 5ಜಿ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಅಷ್ಟೇ ಅಲ್ಲ, ಇದರ ಬಗ್ಗೆ ಬಿಎಸ್​ಎನ್​ಎಲ್​ ಅಧಿಕೃತವಾಗಿ ಮಾಹಿತಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬಿಎಸ್​ಎನ್​ಎಲ್​ ಬಹುಶಃ ಮುಂದಿನ ವರ್ಷ ಅಂದ್ರೆ 2025ರಲ್ಲಿ ತನ್ನ 5ಜಿ ಸೇವೆಯನ್ನು ಪ್ರಾರಂಭಿಸುತ್ತದೆ. ಭಾರತೀಯ ಸಂಚಾರ ನಿಗಮ ಲಿಮಿಟೆಡ್​ ತನ್ನ 5ಜಿ ರೇಡಿಯೋ ಆಕ್ಸೆಸ್​ ನೆಟ್​ವರ್ಕ್​ (ಆರ್​ಎಎನ್​) ಮತ್ತು ಕೋರ್​ ನೆಟ್​ವರ್ಕ್​ 3.6 GHz ಮತ್ತು 700 MHz ಫ್ರೀಕ್ವೆನ್ಸಿ ಬ್ಯಾಂಡ್​ ಪರೀಕ್ಷೆ ಪೂರ್ಣಗೊಳಿಸಿದೆ. ಆದಷ್ಟು ಬೇಗ ದೇಶಾದ್ಯಂತ ಬಿಎಸ್​ಎನ್​​ಎಲ್​ನ 5ಜಿ ಸೇವೆಗಳು ಪ್ರಾರಂಭಗೊಳ್ಳಲಿವೆ ಎಂದು ಹೇಳಿದ್ದಾರೆ.

5ಜಿ ಸೇವೆ ಯಾವಾಗ ಶುರು:ಮಾಹಿತಿ ಪ್ರಕಾರ ಬಿಎಸ್​ಎನ್​ಎಲ್​ ತನ್ನ 5ಜಿ ಸೇವೆಯನ್ನು ಮುಂದಿನ ವರ್ಷದ ಮಕರ ಸಂಕ್ರಾಂತಿಯೊಳಗೆ ಪ್ರಾರಂಭಿಸಬಹುದಾಗಿದೆ. ಮಾಧ್ಯಮಗೋಷ್ಟಿಯಲ್ಲಿ ಬಿಎಸ್​ಎನ್​ಎಲ್​ ಪ್ರಧಾನ ವ್ಯವಸ್ಥಾಪಕ (ಕೃಷ್ಣ ಜಿಲ್ಲೆ) ಎಲ್​ ಶ್ರೀನು ಮಾತನಾಡಿ, ಕಂಪನಿಯು ಟವರ್​ಗಳು ಮತ್ತು ಇತರ ಉಪಕರಣಗಳನ್ನು ಅಪ್​ಡೇಟ್​ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಬಿಎಸ್​ಎನ್​ಎಲ್​ 'ಸರ್ವತ್ರ ವೈಫೈ' ಎಂಬ ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಇದರಿಂದ ಬಿಎಸ್​ಎನ್​ಎಲ್​ ಗ್ರಾಹಕರು ಯಾವುದಾದ್ರು ಹೊಸ ಸ್ಥಳಕ್ಕೆ ಹೋದಾಗ ಅಲ್ಲಿರುವ ವೈಫೈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯನ್ನು ಡೆಪ್ಯುಟಿ ಜನರಲ್ ಮ್ಯಾನೇಜರ್‌ಗಳ ತಂಡವು ಮುನ್ನಡೆಸುತ್ತಿದೆ. ವಿವಿಧ ಕಂಪನಿಗಳ ಸುಂಕದ ಬೆಲೆ ಏರಿಕೆ ಕುರಿತು ಉಪ ಪ್ರಧಾನ ವ್ಯವಸ್ಥಾಪಕ ಜಿ. ಶ್ರೀನಿವಾಸ್ ಮಾತನಾಡಿ, ಕಳೆದ ಕೆಲವು ದಿನಗಳಲ್ಲಿ ಸುಮಾರು 12 ಸಾವಿರ ಗ್ರಾಹಕರು ನಂಬರ್ ಪೋರ್ಟಬಿಲಿಟಿ ಮೂಲಕ ಬಿಎಸ್‌ಎನ್‌ಎಲ್‌ಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದರು.

ಬಿಎಸ್​ಎನ್​ಎಲ್​ ಗುರಿ ಏನು: ಮಾಹಿತಿಯ ಪ್ರಕಾರ, ಪ್ರಸ್ತುತ ಬಿಎಸ್​ಎನ್​ಎಲ್​ ಕಂಪನಿ ದೇಶಾದ್ಯಂತ 4ಜಿ ಸೈಟ್‌ಗಳನ್ನು ಸ್ಥಾಪಿಸುತ್ತಿದೆ. ಈ ಸೈಟ್‌ಗಳನ್ನು 2025 ರ ವೇಳೆಗೆ 5ಜಿ ಆಗಿ ಅಪ್‌ಗ್ರೇಡ್ ಮಾಡಲಾಗುತ್ತದೆ. ಬಿಎಸ್​ಎನ್​ಎಲ್​ 2025 ರ ಮಧ್ಯದಲ್ಲಿ ಒಂದು ಲಕ್ಷ್​ ಸೈಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಅದರಲ್ಲಿ ಇದುವರೆಗೆ ಒಟ್ಟು 39 ಸಾವಿರ ಸೈಟ್‌ಗಳನ್ನು ಸ್ಥಾಪಿಸಲಾಗಿದೆ. ಬಿಎಸ್​ಎನ್​ಎಲ್​ ದೇಶೀಯ 4ಜಿ ಮತ್ತು 5ಜಿ ಎರಡನ್ನೂ ಅಳವಡಿಸುವ ದೇಶದ ಮೊದಲ ಆಪರೇಟರ್ ಆಗಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಸದ್ಯ ಬಿಎಸ್​ಎನ್ಎಲ್​ನ ಈ ಸೇವೆ ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ.

ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ ನಿಗಮ ಲಿಮಿಟೆಡ್​ 1876 ಸೈಟ್‌ಗಳನ್ನು ಸ್ಥಾಪಿಸಲು ಟೆಂಡರ್‌ಗಾಗಿ ನವೆಂಬರ್ 22 ರವರೆಗೆ ಬಿಡ್‌ಗಳನ್ನು ಸಲ್ಲಿಸಬಹುದು. ಇದಕ್ಕಾಗಿ ಕಂಪನಿಯು 50 ಲಕ್ಷ ರೂ. ಮೊತ್ತದ ಠೇವಣಿ ಇಡಬೇಕಾಗುತ್ತದೆ. ಬಿಎಸ್​ಎನ್​ಎಲ್​ 5ಜಿ ಸೇವೆಯ ಟೆಂಡರ್ ಅನ್ನು ದೇಶದ ರಾಜಧಾನಿ ದೆಹಲಿಯ ಮಿಂಟೋ ರಸ್ತೆ, ಚಾಣಕ್ಯಪುರಿ ಮತ್ತು ಕನ್ನಾಟ್ ಪ್ಲೇಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಲೈವ್ ಮಾಡಲಾಗುತ್ತದೆ. ಬಿಎಸ್​ಎನ್​ಎಲ್​ 900 MHz ಲೋ-ಬ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. BSNL 3.5 GHz ಮಿಡ್ ಬ್ಯಾಂಡ್ ಸಹಾಯದಿಂದ 5G ಸೇವೆಯನ್ನು ಪ್ರಾರಂಭಿಸಲಾಗುವುದು.

ಓದಿ:ಐಫೋನ್​ ಚಾರ್ಜ್​ ಮಾಡುವಾಗ ಸ್ಫೋಟ: ಮಹಿಳೆಗೆ ಗಂಭೀರ ಗಾಯ

ABOUT THE AUTHOR

...view details