BSNL Launches Free Intranet TV: ಬಿಎಸ್‌ಎನ್‌ಎಲ್ ತನ್ನ ಮೊಬೈಲ್ ಚಂದಾದಾರರಿಗಾಗಿ ಹೊಸ ಇಂಟರ್ನೆಟ್ ಟಿವಿ ಸೇವೆಯನ್ನು ಪ್ರಾರಂಭಿಸಿದೆ. ಇದರ ಹೆಸರು BiTV ಅಂತಾ. ಈ ಹೊಸ ಇಂಟರ್ನೆಟ್ ಟಿವಿಯಲ್ಲಿ ನೀವು ಸುಮಾರು 300 ಟಿವಿ ಚಾನೆಲ್‌ಗಳು, ಚಲನಚಿತ್ರಗಳು, ವೆಬ್ ಸೀರಿಸ್ ಮತ್ತು ಸಾಕ್ಷ್ಯಚಿತ್ರಗಳು ಉಚಿತವಾಗಿ ನೋಡಬಹುದಾಗಿದೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ..
ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಮೊಬೈಲ್‌ನಲ್ಲಿ ಇಂಟರ್ನೆಟ್ ಟಿವಿಯನ್ನು ಪ್ರಾರಂಭಿಸಿದೆ. ಈ ಸೇವೆಗೆ ಬಿಎಸ್ಎನ್ಎಲ್ನ ಇಂಟ್ರಾನೆಟ್ ಟಿವಿ (BiTV) ಎಂದು ಹೆಸರಿಸಲಾಗಿದೆ. ಈ ಯೋಜನೆಯಲ್ಲಿ ಕಂಪನಿಯು ಮೊಬೈಲ್‌ನಲ್ಲಿ 300 ಟಿವಿ ಚಾನೆಲ್‌ಗಳನ್ನು ನೀಡುತ್ತಿದೆ. ಸದ್ಯ ಈ ಯೋಜನೆಯನ್ನು ಪುದುಚೇರಿಯಲ್ಲಿ ಪ್ರಾರಂಭಿಸಲಾಗಿದೆ. ನಂತರ ಇದನ್ನು ದೇಶದ ಇತರ ಭಾಗಗಳಲ್ಲಿಯೂ ಅಳವಡಿಸಲಾಗುತ್ತದೆ. ಇದರಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರು ಯಾವುದೇ ವೆಚ್ಚವಿಲ್ಲದೇ ಉತ್ತಮ ಗುಣಮಟ್ಟದ ಮನರಂಜನೆ ಪಡೆಯಲಿದ್ದಾರೆ.
BiTV ಯ ಪ್ರಯೋಜನಗಳೇನು?: ಈ ಸೇವೆಯಲ್ಲಿ ಗ್ರಾಹಕರು ಯಾವುದೇ ಶುಲ್ಕವನ್ನು ಪಾವತಿಸದೇ ಅನಿಯಮಿತವಾಗಿ ವೀಕ್ಷಿಸಬಹುದು. ಗ್ರಾಹಕರು ಲೈವ್ ಟಿವಿ ಜೊತೆಗೆ ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳು, ವೆಬ್ ಸೀರಿಸ್ ಮತ್ತು ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಸೇವೆಗೆ ಬಿಎಸ್ಎನ್ಎಲ್ನ ಸುರಕ್ಷಿತ ಇಂಟ್ರಾನೆಟ್ ತಂತ್ರಜ್ಞಾನವನ್ನು ಬಳಸಲಾಗುವುದು. ಇದು ಅತ್ಯುತ್ತಮ ವಿಡಿಯೋ ಗುಣಮಟ್ಟವನ್ನು ಒದಗಿಸುತ್ತದೆ. ಈ ಸೇವೆಗಾಗಿ BSNL OTTplay Premium ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದು OTT ಅಗ್ರಿಗೇಟರ್ ಆಗಿದ್ದು, ಇದು 37 ಪ್ರೀಮಿಯಂ OTT ಪ್ಲಾಟ್‌ಫಾರ್ಮ್‌ಗಳು ಮತ್ತು 500+ ಲೈವ್ ಟಿವಿ ಚಾನೆಲ್‌ಗಳಿಂದ ವಿಷಯವನ್ನು ಒದಗಿಸುತ್ತದೆ.