BMW F900 GS And GS Adventure Launched: ಪ್ರಮುಖ ಜಾಗತಿಕ ಬೈಕ್ ತಯಾರಕ ಕಂಪೆನಿ ಬಿಎಂಡಬ್ಲ್ಯು ಮೊಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ 'ಎಫ್900 ಜಿಎಸ್' ಮತ್ತು 'ಎಫ್900 ಜಿಎಸ್ ಅಡ್ವೆಂಚರ್' ಬೈಕ್ಗಳನ್ನು ಬಿಡುಗಡೆ ಮಾಡಿದೆ. F850 GS ಮಾದರಿಯಲ್ಲಿ ಬದಲಾವಣೆ ಮಾಡುವ ಮೂಲಕ ಈ ಎರಡು ಬೈಕ್ಗಳನ್ನು ಅಪ್ಡೇಟ್ ಬಾಡಿವರ್ಕ್ ಮತ್ತು ಎಂಜಿನ್ಗಳೊಂದಿಗೆ ವಿನ್ಯಾಸಗೊಳಿಸಿಲಾಗಿದೆ. ಬೃಹತ್ 895cc ಲಿಕ್ವಿಡ್-ಕೂಲ್ಡ್ ಟ್ವಿನ್-ಸಿಲಿಂಡರ್ ಎಂಜಿನ್ ಹೊಂದಿದೆ. ಕಂಪೆನಿಯು ಕಳೆದ ತಿಂಗಳಿಂದ ಈ ಬೈಕ್ಗಳಿಗೆ ಬುಕ್ಕಿಂಗ್ ಆರಂಭಿಸಿತ್ತು.
BMW F900 GS, GS ಅಡ್ವೆಂಚರ್ ವೈಶಿಷ್ಟ್ಯಗಳು:
- ಎಂಜಿನ್: 895cc ಲಿಕ್ವಿಡ್-ಕೂಲ್ಡ್ ಟ್ವಿನ್-ಸಿಲಿಂಡರ್
- ಎಲ್ಇಡಿ ಲೈಟಿಂಗ್
- ಮಲ್ಟಿ ರೈಡಿಂಗ್ ಮೋಡ್
- ಪವರ್ ಮೋಡ್
- ಹೀಟೆಡ್ ಹ್ಯಾಂಡಲ್ ಬಾರ್ ಗ್ರಿಪ್ಸ್
- ಟ್ರಾಕ್ಷನ್ ಕಂಟ್ರೋಲ್
- ಎಬಿಎಸ್
- ಬೈ-ಡೈರೆಕ್ಷನ್ ಕ್ವಿಕ್ ಶಿಫ್ಟರ್
- USB ಚಾರ್ಜಿಂಗ್ ಪೋರ್ಟ್
- ಇನ್ಸ್ಟುಮೆಂಟ್ ಪ್ಯಾನಲ್ ಬ್ಲೂಟೂತ್ ಕನೆಕ್ಟಿವಿಟಿ
- 6-ಸ್ಪೀಡ್ ಗೇರ್ ಬಾಕ್ಸ್
ಬಣ್ಣದ ಆಯ್ಕೆಗಳು: ಈ ಬೈಕ್ಗಳು ಮಾರುಕಟ್ಟೆಯಲ್ಲಿ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.