PM Ujjwala Yojana: ದೀಪಾವಳಿಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ. 'ಪ್ರಧಾನ ಮಂತ್ರಿ ಉಜ್ವಲ ಯೋಜನೆ'ಯ ಎಲ್ಲಾ ಫಲಾನುಭವಿಗಳಿಗೆ ಈ ದೀಪಾವಳಿಯಲ್ಲಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಎಕ್ಸ್' ಪೋಸ್ಟ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ದೀಪಾವಳಿಗೂ ಮುನ್ನ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಯೋಗಿ ಆದೇಶಿಸಿದ್ದಾರೆ. ಇದರಿಂದ ಎಲ್ಲಾ ಫಲಾನುಭವಿಗಳು ಸಕಾಲದಲ್ಲಿ ಸವಲತ್ತುಗಳನ್ನು ಪಡೆಯಬಹುದಾಗಿದೆ. ನಿಮ್ಮ ರಾಜ್ಯದಲ್ಲಿಯೂ ನೀವು ಈ ಯೋಜನೆಯನ್ನು ಪಡೆಯಬಹುದು. ಈ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ತಿಳಿದುಕೊಳ್ಳಿ.
9 ಕೋಟಿ 60 ಲಕ್ಷ ಕುಟುಂಬಗಳಿಗೆ ಲಾಭ: ಉಜ್ವಲ ಯೋಜನೆಯಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೇ 2016ರಲ್ಲಿ ಉಜ್ವಲ ಯೋಜನೆಗೆ ಚಾಲನೆ ನೀಡಿದರು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒದಗಿಸಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಇದುವರೆಗೆ ಸುಮಾರು 90.6 ಮಿಲಿಯನ್ ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉದ್ದೇಶ:
ಪರಿಸರ ಮಾಲಿನ್ಯ ಕಡಿಮೆ :ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಅಡುಗೆಮನೆಯ ಹೊಗೆಯನ್ನು ಕಡಿಮೆ ಮಾಡುವುದು, ಇದರಿಂದ ಪರಿಸರ ಮಾಲಿನ್ಯ ಸಹ ಕಡಿಮೆ ಆಗುತ್ತದೆ.
ಉಚಿತ ಗ್ಯಾಸ್ ಸಂಪರ್ಕ:ಈ ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ಮೊದಲ ಬಾರಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್‌ಗಳನ್ನು ನೀಡಲಾಗುತ್ತದೆ.
ಅಗ್ಗದ ಗ್ಯಾಸ್ ಸಿಲಿಂಡರ್‌ಗಳು:ಬಡ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಕಡಿಮೆ ದರದ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಉಜ್ವಲ ಯೋಜನೆ 2.0 ಮತ್ತು 3.0 :ಮೊದಲ ಹಂತದ ಯಶಸ್ಸಿನ ನಂತರ, ಸರ್ಕಾರವು ಉಜ್ವಲ ಯೋಜನೆ 2.0 ಅನ್ನು ಪ್ರಾರಂಭಿಸಿತು. ನಂತರ, ನರೇಂದ್ರ ಮೋದಿ ಸರ್ಕಾರದ ಮೂರನೇ ಅಧಿಕಾರಾವಧಿಯಲ್ಲಿ, ಈ ಯೋಜನೆಯನ್ನು ಉಜ್ವಲ ಯೋಜನೆ 3.0 ಎಂದು ಹೆಸರಿಸಲಾಯಿತು. ಇದರಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ನೀಡುವ ಭರವಸೆ ನೀಡಲಾಗಿದೆ.
ಪ್ರಧಾನ ಮಂತ್ರಿ ಉಜ್ವಲ 3.0 ಗ್ಯಾಸ್ ಸಂಪರ್ಕ ಫಲಾನುಭವಿ :ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಈ ಯೋಜನೆಗೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಉಜ್ವಲಾ ಯೋಜನೆ 3.0 ಅಡಿಯಲ್ಲಿ, ಮಹಿಳೆಯರಿಗೆ ಮೊದಲ ಬಾರಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್‌ಗಳನ್ನು ನೀಡಲಾಗುತ್ತಿದೆ. ನೀವು ಸಹ ಈ ಯೋಜನೆಯನ್ನು ಪಡೆಯಲು ಬಯಸಿದರೆ, ನೀವು ಈಗಲೇ ಅರ್ಜಿ ಸಲ್ಲಿಸಬಹುದು.
ಅರ್ಹತೆಯ ಮಾನದಂಡ:
- ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
- ಮಹಿಳಾ ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಮಹಿಳಾ ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು.
- ಮಹಿಳಾ ಅರ್ಜಿದಾರರು ಪಡಿತರ ಚೀಟಿ ಹೊಂದಿರಬೇಕು.
- ಅರ್ಜಿ ಸಲ್ಲಿಸುವ ಮೊದಲು, ಮಹಿಳೆಯು ತನ್ನ ಮನೆಯಲ್ಲಿ ಯಾವುದೇ LPG ಸಂಪರ್ಕವನ್ನು ಹೊಂದಿರಬಾರದು.
- ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ರೂ. 1 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ ರೂ. 2 ಲಕ್ಷ ಮೀರಬಾರದು.
ಅಗತ್ಯವಿರುವ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್
- ನಿವಾಸ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಪಡಿತರ ಚೀಟಿ
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆಯ ಪಾಸ್‌ಬುಕ್
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ