Ampere Magnus Neo Launched:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಆಂಪಿಯರ್ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ 'ಆಂಪಿಯರ್ ಮ್ಯಾಗ್ನಸ್ ನಿಯೋ' ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.79,999 (ಎಕ್ಸ್ ಶೋ ರೂಂ) ಬೆಲೆಗೆ ತಂದಿದೆ. ಕಂಪನಿಯು ಆಂಪಿಯರ್ ಲೈನ್ ಅಪ್ನಲ್ಲಿ EX ವೇರಿಯಂಟ್ ಸ್ಥಾನದಲ್ಲಿ ಈ ಹೊಸ ಮ್ಯಾಗ್ನಸ್ ನಿಯೋ ಪರಿಚಯಿಸಿರುವುದು ತೋರುತ್ತದೆ.
ಆಂಪಿಯರ್ ಮ್ಯಾಗ್ನಸ್ ನಿಯೋ ಡಿಸೈನ್ ಆ್ಯಂಡ್ ಸ್ಪೆಸಿಫಿಕೇಶನ್:ಈ ಸ್ಕೂಟರ್ ಡಿಸೈನ್ಗೆ ಬಂದ್ರೆ ಈ ಹೊಸ ಮ್ಯಾಗ್ನಸ್ ನಿಯೋ ಅದರ ಇತರ ವೇರಿಯಂಟ್ಗಳಂತೆಯೇ ಕಾಣುತ್ತದೆ. ಆದರೆ, ಕಲರ್ ವಿಷಯಕ್ಕೆ ಬಂದರೆ ಮಾತ್ರ ವಿಭಿನ್ನವಾಗಿದೆ. ಇದು ಡ್ಯುಯಲ್ - ಟೋನ್ ಪೇಂಟ್ ಸ್ಕೀಮ್‌ನೊಂದಿಗೆ ಲಭ್ಯವಿದೆ. ಈ ಸ್ಕೂಟರ್ 2.3kWh LFP ಬ್ಯಾಟರಿ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 70-80 ಕಿ.ಮೀ ವರೆಗೆ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
ಈ ಹೊಸ ಮ್ಯಾಗ್ನಸ್ ನಿಯೋ LFP ಬ್ಯಾಟರಿಗಳನ್ನು ಹೊಂದಿದೆ (ಇವು ಒಂದೇ ಕೆಪಾಸಿಟಿಯ NMC ಬ್ಯಾಟರಿಗಳ ಮಾಡೆಲ್ಗಳಂತೆ ಎನರ್ಜಿ-ಡೆನ್ಸಿಟಿ ಇರುವುದಿಲ್ಲ). ಅದರ ವ್ಯಾಪ್ತಿಯು ಮ್ಯಾಗ್ನಸ್ EX ಗಿಂತ ಸ್ವಲ್ಪ ಕಡಿಮೆಯಾಗಿದೆ. ಮ್ಯಾಗ್ನಸ್ ಇಎಕ್ಸ್ ರೇಂಜ್ 80 -100 ಕಿಲೋಮೀಟರ್ ಎಂದು ಕಂಪನಿಯು ಹೇಳಿದೆ.