ಕರ್ನಾಟಕ

karnataka

ETV Bharat / technology

ಗೂಗಲ್‌ ಮ್ಯಾಪ್ಸ್‌ನಲ್ಲಿ ನಗರಗಳ ವಾಯು ಗುಣಮಟ್ಟ ತಿಳಿಯುವುದು ಹೇಗೆ? ಬಂದಿದೆ ನೋಡಿ ಹೊಸ ಫೀಚರ್‌

Google Air View+: ವಾಯು ಗುಣಮಟ್ಟ ತಿಳಿಯಲು ಗೂಗಲ್​ ಹೊಸ ಫೀಚರ್ ಪರಿಚಯಿಸಿದೆ. ಇದರ​ ಸಹಾಯದಿಂದ ನೀವು ನಿಮ್ಮ ನಗರಗಳ ನಿಖರ ವಾಯು ಗುಣಮಟ್ಟದ ಮಾಹಿತಿ ಪಡೆಯಬಹುದು.

GOOGLE INTRODUCES AIR VIEW PLUS  HYPERLOCAL AIR QUALITY  GOOGLE MAPS  INDIAN CITIES AIR QUALITY
ಗೂಗಲ್​ ಮ್ಯಾಪ್ಸ್ (Google/IANS)

By ETV Bharat Tech Team

Published : 8 hours ago

Google Air View+:ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಹೈಪರ್‌ಲೋಕಲ್ ವಾಯು ಗುಣಮಟ್ಟದ ಮಾಹಿತಿ ನೀಡಲು ಏರ್ ವ್ಯೂ+ ಫೀಚರ್ ಅನ್ನು ಗೂಗಲ್​ ಪರಿಚಯಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ವೇಳೆಯಲ್ಲಿ ಹೊಸ ಫೀಚರ್​ ಹೊರ ಬಂದಿದೆ.

ವಾಯು ಮಾಲಿನ್ಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಾಯು ಗುಣಮಟ್ಟದ ಮೇಲಿನ ಅಪೂರ್ಣ ಮಾಹಿತಿಯಿಂದಾಗಿ ಹೈಪರ್​ಲೋಕಲ್​ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸೀಮಿತಗೊಳಿಸಲಾಗಿದೆ. ಸ್ಥಳೀಯ ಹವಾಮಾನ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸ್ಥಳೀಯ ಸ್ಟಾರ್ಟಪ್‌ಗಳು, ಸಂಶೋಧಕರು/ಕ್ಲೈಮೆಟ್​ ಆ್ಯಕ್ಷನ್​ ಗುಂಪುಗಳು, ನಿಗಮಗಳು, ನಗರ ನಿರ್ವಾಹಕರು ಮತ್ತು ನಾಗರಿಕರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಸವಾಲನ್ನು ಎದುರಿಸಲು ಗೂಗಲ್​ ನೆರವಾಗಿದೆ. ಇದಕ್ಕಾಗಿ ಏರ್​ ವ್ಯೂ+ ಪರಿಚಯಿಸಿದೆ.

ಈ ಹಿಂದೆ ವಾಯು ಗುಣಮಟ್ಟದ ಮೇಲ್ವಿಚಾರಣೆಗೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿರುವ ನಗರಗಳಲ್ಲಿ ಏರ್​ ಕ್ವಾಲಿಟಿ ಸೆನ್ಸಾರ್​ ನೆಟ್‌ವರ್ಕ್ ಸ್ಥಾಪಿಸುವಲ್ಲಿ ಕ್ಲೈಮೇಟ್ ಟೆಕ್ ಸಂಸ್ಥೆಗಳಾದ Aurasure ಮತ್ತು Respirer Living Sciences ಪ್ರಮುಖ ಪಾತ್ರ ವಹಿಸಿದ್ದವು ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ಹೇಳಿದೆ. ಈ ಸೆನ್ಸಾರ್​ಗಳು ತಾಪಮಾನ ಮತ್ತು ತೇವಾಂಶದ ಜೊತೆಗೆ PM2.5, PM10, CO2, NO2, ಓಝೋನ್ ಮತ್ತು VOCಗಳಂತಹ ಗಾಳಿಯ ಗುಣಮಟ್ಟದ ನಿಯತಾಂಕಗಳನ್ನು ಪ್ರತೀ ನಿಮಿಷಕ್ಕೆ ಅಳತೆ ಮಾಡುತ್ತವೆ. ಈ ಸೆನ್ಸಾರ್​ಗಳನ್ನು ಆಡಳಿತ ಸಂಸ್ಥೆಗಳು, ಯುಟಿಲಿಟಿ ಪೊಲೆಸ್​, ವಾಣಿಜ್ಯ ಕಟ್ಟಡಗಳು ಇತ್ಯಾದಿಗಳಂತಹ 150ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ, ಅವುಗಳು ನಿರಂತರವಾಗಿ ಏರ್​ ಕ್ವಾಲಿಟಿಯನ್ನು ಮೇಲ್ವಿಚಾರಣೆ ಮಾಡುತ್ತಲೇ ಇರುತ್ತವೆ.

ಐಐಟಿ ದೆಹಲಿ, ಐಐಟಿ ಹೈದರಾಬಾದ್, ರಾಜ್ಯ ಮಾಲಿನ್ಯ ಮಂಡಳಿಗಳು ಮತ್ತು CSTEPನಂತಹ ಕ್ಲೈಮೆಟ್​ ಆ್ಯಕ್ಷನ್​ ಗುಂಪುಗಳ ಸ್ಥಳೀಯ ಸಂಶೋಧಕರ ಬೆಂಬಲದೊಂದಿಗೆ ಈ ಸೆನ್ಸಾರ್​ಗಳನ್ನು ಕಟ್ಟುನಿಟ್ಟಾಗಿ ಮೌಲ್ಯೀಕರಿಸಲಾಗಿದೆ. ಒಳನೋಟಗಳನ್ನು ತ್ವರಿತವಾಗಿ ಮತ್ತು ಪ್ರಮಾಣದಲ್ಲಿ ಲೆಕ್ಕಾಚಾರ ಮಾಡಲು ಸಂಶೋಧಕರು ಮತ್ತು ಸಮರ್ಥನೀಯ ಸ್ಟಾರ್ಟಪ್‌ಗಳಿಂದ ಗೂಗಲ್​ ಎಐ ಅನ್ನು ಬಳಸಿಕೊಂಡು ಡೇಟಾವನ್ನು ವಿಶ್ಲೇಷಿಸಲಾಗಿದೆ ಎಂದು ಗೂಗಲ್ ಹೇಳಿದೆ.

ಗೂಗಲ್​ ಎಐನಿಂದ ನಡೆಸಲ್ಪಡುವ ಏರ್​ ವ್ಯೂ+, ಭಾರತದಾದ್ಯಂತ ಬಳಕೆದಾರರಿಗೆ ಗೂಗಲ್​ ಮ್ಯಾಪ್ಸ್‌ನಲ್ಲಿ ರಿಯಲ್​-ಟೈಂನ ಹೈಪರ್‌ಲೋಕಲ್ ವಾಯು ಗುಣಮಟ್ಟದ ಮಾಹಿತಿ ನೀಡುತ್ತದೆ. ಅಷ್ಟೇ ಅಲ್ಲ, ಪರಿಸರ ಮೇಲ್ವಿಚಾರಣೆ ಮತ್ತು ನಗರ ಯೋಜನೆಗೆ ಜವಾಬ್ದಾರರಾಗಿರುವ ಸರ್ಕಾರಿ ಏಜೆನ್ಸಿಗಳಿಗೆ ಮೌಲ್ಯಯುತವಾದ ವಾಯು ಗುಣಮಟ್ಟದ ಒಳನೋಟಗಳು ಲಭ್ಯವಾಗುವಂತೆ ಮಾಡುತ್ತದೆ.

ಬಳಕೆದಾರರು ಇದೀಗ ಗೂಗಲ್ ಮ್ಯಾಪ್ಸ್​ ಬಳಸಿಕೊಂಡು ಭಾರತದಾದ್ಯಂತ ಹೈಪರ್‌ಲೋಕಲ್ ವಾಯು ಗುಣಮಟ್ಟದ ಮಾಹಿತಿ ಪಡೆಯಬಹುದಾಗಿದೆ. ಸೆನ್ಸಾರ್​ ನೆಟ್‌ವರ್ಕ್‌ಗಳು, ಸರ್ಕಾರಿ ಡೇಟಾ, ಉಪಗ್ರಹ ಚಿತ್ರಣ, ಹವಾಮಾನ ಮತ್ತು ವಾಯು ಮಾದರಿಗಳು, ಟ್ರಾಫಿಕ್ ಪರಿಸ್ಥಿತಿಗಳು, ಲ್ಯಾಂಡ್​ ಕವರ್ ಸೇರಿದಂತೆ ಹೆಚ್ಚಿನವುಗಳಂತಹ ವಿವಿಧ ಇನ್‌ಪುಟ್ ಮೂಲಗಳಿಂದ ಡೇಟಾವನ್ನು ಒಟ್ಟುಗೂಡಿಸುವ ಮಲ್ಟಿ-ಲೆಯರ್ಡ್​ ಎಐ ವಿಧಾನವನ್ನು ಬಳಸಿಕೊಂಡು ಗೂಗಲ್​ ಇದನ್ನು ಸಾಧಿಸಿದೆ.

ಗೂಗಲ್​ ಮ್ಯಾಪ್ಸ್​ನಲ್ಲಿ AQI ಒಳನೋಟಗಳಿಗಾಗಿ, ಹೋಮ್ ಸ್ಕ್ರೀನ್‌ನಲ್ಲಿರುವ ಲೇಯರ್ ಬಟನ್‌ನಿಂದ ಏರ್ ಕ್ವಾಲಿಟಿ ಲೇಯರ್ ಆಯ್ಕೆ ಮಾಡಬೇಕು. ಬಳಿಕ ನೀವು ಮ್ಯಾಪ್​ನಲ್ಲಿ ಯಾವುದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಆಗ ಅದು ಆ ಸ್ಥಳದ AQI ಮಾಹಿತಿ ನೀಡುತ್ತದೆ.

ಇದನ್ನೂ ಓದಿ:ಕ್ರೋಮ್​ಒಎಸ್​ ಅನ್ನು ಆಂಡ್ರಾಯ್ಡ್​ ಆಗಿ ಬದಲಾಯಿಸುತ್ತಿರುವ ಗೂಗಲ್​

ABOUT THE AUTHOR

...view details