ETV Bharat / bharat

ಮಗಳೇ ದಮ್ಮಯ್ಯ ಅಂತೇವಿ ದಯವಿಟ್ಟು ನಾವು ಕೊಟ್ಟ 30 ತೊಲ ಬಂಗಾರ ವಾಪಸ್​​ ಕೊಡು: ಮಗಳ ಮನೆ ಮುಂದೆ ಅಪ್ಪ-ಅಮ್ಮನ ಧರಣಿ! - GOLD ISSUE

ಕಳ್ಳರಿಂದ ರಕ್ಷಿಸಲು ತಮ್ಮಲ್ಲಿದ್ದ ಬಂಗಾರವನ್ನು ಹೆತ್ತವರು ಮಗಳಿಗೆ ನೀಡಿದ್ದಾರೆ. ಇದೀಗ ಆಕೆ ಚಿನ್ನವನ್ನು ವಾಪಸ್​ ನೀಡಲ್ಲ ಎಂದು ಹಠ ಹಿಡಿದಿದ್ದಾಳೆ. ಇದರ ವಿರುದ್ಧ ವೃದ್ಧ ದಂಪತಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಗಳ ಮನೆ ಮುಂದೆ ಹೆತ್ತವರಿಂದ ಧರಣಿ
ಮಗಳ ಮನೆ ಮುಂದೆ ಹೆತ್ತವರಿಂದ ಧರಣಿ (ETV Bharat)
author img

By ETV Bharat Karnataka Team

Published : Nov 21, 2024, 6:18 PM IST

Updated : Nov 22, 2024, 2:57 PM IST

ಹೈದರಾಬಾದ್​ (ತೆಲಂಗಾಣ): ವೃದ್ಧಾಪ್ಯದಲ್ಲಿ ತಂದೆ- ತಾಯಿಗೆ ಮಕ್ಕಳು ನೆರಳಾಗಬೇಕು. ಇದು ಸಮಾಜದ ಅಲಿಖಿತ ನಿಯಮ. ಆದರೆ, ಈಗಿನ ಕಾಲದಲ್ಲಿ ಎಲ್ಲವೂ ಬದಲಾಗಿದೆ. ಹಣ, ಆಸ್ತಿಗಾಗಿ ಹೆತ್ತವರನ್ನೇ ಅಬ್ಬೆಪಾರಿ ಮಾಡಿ ಬೀದಿಗೆ ಬಿಸಾಡುತ್ತಿರುವ ಹಲವಾರು ಪ್ರಕರಣಗಳು ನಮ್ಮ ಮುಂದಿವೆ. ಹೈದರಾಬಾದ್​ನಲ್ಲಿ ಇದೀಗ, ಅಂಥಹದ್ದೇ ಪ್ರಕರಣವೊಂದು ಬಯಲಿಗೆ ಬಂದಿದೆ.

ಹೆತ್ತವರಿಗೆ ಸೇರಿದ ಚಿನ್ನವನ್ನು ಪಡೆದುಕೊಂಡ ಪುತ್ರಿ, ಅವರಿಗೆ ವಾಪಸ್​ ನೀಡದೆ ಗೋಳಾಡಿಸುತ್ತಿದ್ದಾಳಂತೆ. ಈ ಬಗ್ಗೆ ಪೊಲೀಸರು, ಬಂಧು- ಬಾಂಧವರು, ನೆರೆಹೊರೆಯವರು ಹೇಳಿದರೂ ಆಕೆ ಮಾತ್ರ ಸುತಾರಾಂ ಒಪ್ಪುತ್ತಿಲ್ಲ. ಇದರಿಂದ ಬೀದಿಗೆ ಬಂದಿರುವ ಪೋಷಕರು ಮಗಳ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾರೆ.

ಈ ಘಟನೆ ನಡೆದಿದ್ದು, ಹೈದರಾಬಾದ್​​ನ ಮಲ್ಕಜ್​ಗಿರಿಯ ವಾಣಿನಗರದಲ್ಲಿ. ಮಗಳೇ ತಮಗೆ ಮೋಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ತಂದೆ- ತಾಯಿ ತಮ್ಮವರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಆರೋಪವೇನು? ಮಲ್ಕಜ್​ ಗಿರಿಯ ಶಿವಮ್ಮ ಹಾಗೂ ಮಲ್ಲಯ್ಯ ದಂಪತಿಯು ಪುತ್ರಿ ಬಾಲಾಮಣಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು. ಎರಡು ವರ್ಷಗಳ ಹಿಂದೆ ದಂಪತಿಯು ತಮ್ಮ ಬಳಿ ಇದ್ದ 30 ತೊಲ ಚಿನ್ನವನ್ನು ಕಳ್ಳರ ಕಾಟದಿಂದ ರಕ್ಷಿಸಲು ಪುತ್ರಿಗೆ ನೀಡಿದ್ದರು. ಕೆಲ ದಿನಗಳ ಬಳಿಕ ತಮ್ಮ ಬಂಗಾರವನ್ನು ವಾಪಸ್​ ನೀಡುವಂತೆ ವೃದ್ಧ ದಂಪತಿ ಕೇಳಿದ್ದಾರೆ. ಆದರೆ, ಮಗಳು ಅದನ್ನು ಹಿಂದಿರುಗಿಸಲು ನಿರಾಕರಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಹಲವು ಬಾರಿ ಮಗಳ ಜೊತೆಗೆ ವಾದ ನಡೆಸಿದ್ದಾರೆ. ಆದರೂ, ಚಿನ್ನಾಭರಣ ನೀಡುತ್ತಿಲ್ಲ ಎಂದು ನವೆಂಬರ್​​ 21 ರಂದು ಗ್ರಾಹಕರು ಹಾಗೂ ಮಾನವ ಹಕ್ಕು ರಕ್ಷಣಾ ಸಮಿತಿ ಸದಸ್ಯರ ನೆರವಿನಿಂದ ವೃದ್ಧ ದಂಪತಿ ಮಗಳ ಮನೆ ಎದುರೇ ಧರಣಿ ಆರಂಭಿಸಿದ್ದಾರೆ. ಕೊಟ್ಟ ಚಿನ್ನ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರಲಾಗಿದ್ದರೂ, ನಿರ್ಲಕ್ಷಿಸಲಾಗಿದೆ. ಕಿರಿಯ ಮಗಳು ವೃದ್ಧಾಪ್ಯದಲ್ಲಿ ತಮ್ಮನ್ನು ನರಳುವಂತೆ ಮಾಡಿದ್ದಾಳೆ. ತಮ್ಮ ಚಿನ್ನವನ್ನು ಕೊಟ್ಟರೆ ಸಾಕು ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ. ಇನ್ನು, ಪ್ರಕರಣ ಕುರಿತಂತೆ ಸ್ಥಳೀಯ ಠಾಣೆಯ ಇನ್ಸ್​ಪೆಕ್ಟರ್ ವೃದ್ಧ ದಂಪತಿ ಹಾಗೂ ಆಕೆಯ ಮಗಳನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಹಣ, ಆಸ್ತಿಗಾಗಿ ತಂದೆ-ತಾಯಿಯ ಜೀವ ಹಿಂಡಿದ ಪುತ್ರರ ಬಗ್ಗೆ ಕೇಳಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಪುತ್ರಿಯೇ ಹೆತ್ತವರಿಗೆ ವಿಲನ್​ ಆಗಿರುವುದು ವಿಪರ್ಯಾಸ.

ಇದನ್ನೂ ಓದಿ: 11 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ ಆಪ್​: ಕಾಂಗ್ರೆಸ್​​ ಜೊತೆ ಮೈತ್ರಿ ಇಲ್ಲ?

Last Updated : Nov 22, 2024, 2:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.