Insta Teen Accounts:ಸಾಮಾಜಿಕ ಜಾಲತಾಣಗಳು ಪ್ರಸ್ತುತ ಟ್ರೆಂಡಿಂಗ್‌ನಲ್ಲಿವೆ. ಚಿಕ್ಕವರಿರಲಿ, ದೊಡ್ಡವರಿರಲಿ ಹೆಚ್ಚಿನವರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಆದರೆ ಇದು ಮಕ್ಕಳ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರಪಂಚದಾದ್ಯಂತ ಆತಂಕ ವ್ಯಕ್ತವಾಗುತ್ತಿರುವ ಕಾರಣ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ನಿರ್ಣಾಯಕ ಕ್ರಮ ಕೈಗೊಂಡಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೊಸ Insta ಟೀನ್ ಖಾತೆಯನ್ನು ಕಂಪೆನಿ ಪರಿಚಯಿಸಿದೆ.
ಇನ್‌ಸ್ಟಾ ಟೀನ್ ಖಾತೆಗಳ ಪ್ರಯೋಜನಗಳೇನು?:
- ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಗಳು ಈಗ ಪೋಷಕರ ನಿಯಂತ್ರಣದಲ್ಲಿರುತ್ತವೆ.
- ಇದು Instagramನಲ್ಲಿ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕ.
- 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಪೋಷಕರ ಅನುಮತಿ ಅಗತ್ಯ. ಮಕ್ಕಳು ಬಳಸುವ ಇನ್‌ಸ್ಟಾಗ್ರಾಮ್ ಖಾತೆಯನ್ನು ಪೋಷಕರು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.
- ಪೋಷಕರು ಬಯಸಿದ್ದಲ್ಲಿ ಮಕ್ಕಳ Insta ಸಂದೇಶಗಳನ್ನು ಪ್ರವೇಶಿಸಬಹುದು. ದೈನಂದಿನ ಬಳಕೆಯನ್ನೂ ಪರಿಶೀಲಿಸಬಹುದು. ಒಂದು ನಿರ್ದಿಷ್ಟ ಅವಧಿಗೆ Insta ನಿರ್ಬಂಧಿಸಬಹುದು.
- ಇನ್‌ಸ್ಟಾಗ್ರಾಮ್ ಅನ್ನು ಮಕ್ಕಳಿಗೂ ಸುರಕ್ಷಿತ ವೇದಿಕೆಯನ್ನಾಗಿ ಮಾಡಲು ಮೆಟಾ ಈ ಕ್ರಮ ತೆಗೆದುಕೊಂಡಿದೆ.
ಇನ್ನು ಮುಂದೆ ಪೋಷಕರ ಕೈಯಲ್ಲಿ ಇನ್‌ಸ್ಟಾ ಟೀನ್ ಅಕೌಂಟ್ ಕಂಟ್ರೋಲ್ (Meta)
Insta ಟೀನ್ ಅಕೌಂಟ್ ಎಂದರೇನು?:
- ಎಲ್ಲಾ Instagram ಅಕೌಂಟ್ಗಳು ಡಿಫಾಲ್ಟ್ ಆಗಿ ಖಾಸಗಿ ಖಾತೆಗಳಾಗಿವೆ. ಆದ್ದರಿಂದ ಯಾರಾದರೂ ಅಪ್ರಾಪ್ತರ ಖಾತೆಗಳನ್ನು ಫಾಲೋ ಆಗಲು ಬಯಸಿದರೆ, ಅವರು ಆ ರಿಕ್ವೆಸ್ಟ್ಗಳನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ಅವರ ಕಂಟೆಂಟ್ ವೀಕ್ಷಿಸಲಾಗದು.
- ಈ ಖಾತೆಗಳನ್ನು ಹೊಂದಿರುವ ಜನರು ಅವರು ಈಗಾಗಲೇ ಫಾಲೋ ಮತ್ತು ಸಂಪರ್ಕದಲ್ಲಿರುವ ಜನರಿಂದ ಮಾತ್ರ ಸಂದೇಶಗಳನ್ನು ಸ್ವೀಕರಿಸಬಹುದು. ಅವರು ಮಾತ್ರ ಟ್ಯಾಗ್ ಮಾಡಬಹುದು.
- ಮಕ್ಕಳ ಖಾತೆಗಳು ಸೂಕ್ಷ್ಮ ವಿಷಯ ನಿಯಂತ್ರಣಗಳನ್ನು ಹೊಂದಿವೆ. ಆದ್ದರಿಂದ ತೋರಿಸಿರುವ ಫೀಡ್ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತದೆ.
- Instagram ನೇರ ಸಂದೇಶಗಳು ಮತ್ತು ಕಾಮೆಂಟ್‌ಗಳಲ್ಲಿ ಅಶ್ಲೀಲತೆಯನ್ನು ಸ್ವಯಂಚಾಲಿತವಾಗಿ ಫಿಲ್ಟರ್ ಮಾಡುತ್ತದೆ.
- ಒಂದು ದಿನದಲ್ಲಿ 60 ನಿಮಿಷಗಳಿಗಿಂತ ಹೆಚ್ಚು ಕಾಲ ಅಪ್ಲಿಕೇಶನ್ ಬಳಸಿದ ನಂತರ ಪೋಷಕರಿಗೆ ನೋಟಿಫಿಕೇಷನ್ ಕಳುಹಿಸಲಾಗುತ್ತದೆ.
- ಇದಲ್ಲದೇ ರಾತ್ರಿ 10ರಿಂದ ಬೆಳಗ್ಗೆ 7ರವರೆಗೆ ಸ್ಲೀಪ್ ಮೋಡ್ ಆನ್ ಆಗಿರುತ್ತದೆ. ಆ ಸಮಯದಲ್ಲಿ ಯಾವುದೇ ನೋಟಿಫಿಕೇಷನ್ ಬರುವುದಿಲ್ಲ. ಅಷ್ಟೇ ಅಲ್ಲ, ಡೈರೆಕ್ಟ್ ಮೆಸೇಜ್ಗಳಿಗೆ ಆಟೋ ರಿಪ್ಲೈಗಳು ಹೋಗುತ್ತವೆ.
ಇನ್‌ಸ್ಟಾ ಟೀನ್ ಖಾತೆಗಳು ಜಾರಿ ಯಾವಾಗ?:
- ಯುಎಸ್, ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಗಳವಾರದಿಂದ ಹೊಸ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಮೆಟಾ ತಿಳಿಸಿದೆ.
- ಅಂದರೆ, ಇನ್‌ಸ್ಟಾಗ್ರಾಮ್‌ಗೆ ಸೇರುವ 18 ವರ್ಷದೊಳಗಿನವರಿಗೆ ಖಾತೆಗಳನ್ನು ನೀಡಲಾಗುತ್ತದೆ.
- ಅಸ್ತಿತ್ವದಲ್ಲಿರುವ ಖಾತೆಗಳನ್ನು 60 ದಿನಗಳಲ್ಲಿ ಮಕ್ಕಳ ಖಾತೆಗಳಾಗಿ ಪರಿವರ್ತಿಸಲಾಗುತ್ತದೆ.
- ಈ Instagram ಖಾತೆಗಳು ಈ ವರ್ಷದ ಅಂತ್ಯದ ವೇಳೆಗೆ ಯುರೋಪಿಯನ್ ಒಕ್ಕೂಟದಲ್ಲಿ ಲಭ್ಯವಾಗಲಿವೆ.
- ಇನ್‌ಸ್ಟಾಗ್ರಾಮ್ ಟೀನ್ ಖಾತೆಗಳು ಜನವರಿ ವೇಳೆಗೆ ವಿಶ್ವಾದ್ಯಂತ ಸಂಪೂರ್ಣವಾಗಿ ಲಭ್ಯವಿರುತ್ತವೆ ಎಂದು ಮೆಟಾ ತಿಳಿಸಿದೆ.
ಇದನ್ನೂ ಓದಿ:ಈಗ ಪೋಷಕರ ಕೈಯಲ್ಲಿ ಮಕ್ಕಳ ಯೂಟ್ಯೂಬ್ ಕಂಟ್ರೋಲ್: ಹೊಸ ವೈಶಿಷ್ಟ್ಯದ ಪರಿಚಯ - YouTube Feature For Teenage Safety