ಬೆಂಗಳೂರು:ಲೈಂಗಿಕ ದೌರ್ಜನ್ಯ ಪ್ರಕರಣದಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಬಂಧಿತರಾಗಿರುವ ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಕಳೆದ ರಾತ್ರಿಯನ್ನು ಸಿಐಡಿ ಕಚೇರಿಯಲ್ಲೇ ಕಳೆದಿದ್ದಾರೆ. ಇಂದು ಭಾನುವಾರವಾಗಿರುವ ಕಾರಣ ಕೋರ್ಟ್‌ಗೆ ರಜೆ ಇದ್ದು, ಮಧ್ಯಾಹ್ನದ ನಂತರ ಆರೋಪಿಯನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಏಪ್ರಿಲ್ 29ರಿಂದ ನಾಪತ್ತೆಯಾಗಿದ್ದ ಸಂತ್ರಸ್ತೆ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿರುವ ರೇವಣ್ಣ ಅವರ ಆಪ್ತ ಸಹಾಯಕ ರಾಜಶೇಖರ್ ಅವರ ತೋಟದ ಮನೆಯಲ್ಲಿ ಶನಿವಾರ (ನಿನ್ನೆ) ಪತ್ತೆಯಾಗಿದ್ದರು. ಇಂದು ಮಹಿಳೆಯನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಿದ್ದಾರೆ.
ಸದ್ಯ ಮಹಿಳೆಯನ್ನು ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಎಸ್ಐಟಿ ವಿಚಾರಣೆ ಆರಂಭಿಸಲಿದೆ. ಸಂತ್ರಸ್ತೆ ತಾನು ಅಪಹರಣಕ್ಕೊಳಗಾಗಿದ್ದೆ ಎಂದು ಒಪ್ಪಿಕೊಂಡರೆ ಅಥವಾ ಇನ್ಯಾವುದಾದರೂ ಪೂರಕ ವಿಚಾರಗಳನ್ನು ಬಹಿರಂಗಪಡಿಸಿದರೆ ತನಿಖೆಗೆ ಮಹತ್ವ ಸಿಗಲಿದೆ. ಅದೇ ಅಂಶಗಳ ಆಧಾರದಲ್ಲಿ ಹೆಚ್.ಡಿ.ರೇವಣ್ಣ ಅವರ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ವಾದ ಮಂಡಿಸುವ ಮೂಲಕ ಕಸ್ಟಡಿಗೆ ಪಡೆದುಕೊಳ್ಳಲು ಎಸ್ಐಟಿ ಸಿದ್ಧವಾಗಿದೆ. ಆದರೆ ಒಂದು ವೇಳೆ ಸಂತ್ರಸ್ತೆ 'ತಾನು ಅಪಹರಣವಾಗಿರಲಿಲ್ಲ, ಕೆಲಸಕ್ಕೆಂದು ತೆರಳಿದ್ದೆ' ಎಂದು ಹೇಳಿಕೆ ನೀಡಿದರೆ ಅಪಹರಣ ಪ್ರಕರಣದಲ್ಲಿ ರೇವಣ್ಣಗೆ ಕೊಂಚ ರಿಲೀಫ್ ಸಿಗುತ್ತದೆ.
ಅಶ್ಲೀಲ ವಿಡಿಯೋ ಚಿತ್ರೀಕರಣದ ಕುರಿತು ಸಂತ್ರಸ್ತೆಯ ಹೇಳಿಕೆಯು ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಮುಖ್ಯವಾಗಲಿದೆ.
ಇದನ್ನೂ ಓದಿ:ಹೆಚ್.ಡಿ.ರೇವಣ್ಣ ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹೇಳಿದ್ದೇನು? - KIDNAP CASE