ಕರ್ನಾಟಕ

karnataka

ETV Bharat / state

ಮಂಡ್ಯ: ಅನುಮಾನಾಸ್ಪದವಾಗಿ ಪತ್ನಿ ಸಾವಿನ ಬಳಿಕ ಪತಿಯೂ ಆತ್ಮಹತ್ಯೆ... ಎಸ್​ಪಿ ಹೇಳುವುದಿಷ್ಟು - Mandya Tragedy - MANDYA TRAGEDY

ಅನುಮಾನಸ್ಪದವಾಗಿ ಗೃಹಿಣಿ ಶವ ಗಂಡನ ಮನೆಯಲ್ಲಿ ಪತ್ತೆಯಾಗಿದ್ದು, ಪತಿಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ದಂಪತಿ ಸಾವಿನಿಂದ ಮಗು ಅನಾಥವಾಗಿದೆ. ಈ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

WOMAN DIED  COUPLE SUICIDE  MANDYA CRIME NEWS  MANDYA
ಮನೆಗೆ ಬೆಂಕಿ (ETV Bharat)

By ETV Bharat Karnataka Team

Published : Aug 21, 2024, 11:59 AM IST

ಮಂಡ್ಯ: ಗಂಡನ ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾದ ಕೆಲ ಗಂಟೆಗಳ ಬಳಿಕ ಪತಿಯ ಶವ ಕೆರೆಯಲ್ಲಿ ಕಂಡು ಬಂದಿದೆ. ಈ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ನಡೆದಿದೆ.

ಪತ್ನಿ ಸ್ವಾತಿ (21) ಅನುಮಾನಾಸ್ಪದವಾಗಿ ಮೃತಪಟ್ಟರೆ, ಪತಿ ಮೋಹನ್ (26) ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ವಾತಿಯ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಖಚಿತವಾಗಿಲ್ಲ. ಇದು ಪತಿಯ ಮನೆಯವರೇ ಮಾಡಿದ ಕೊಲೆ ಎಂದು ಸ್ವಾತಿ ಪೋಷಕರು ಆರೋಪಿಸಿದ್ದಾರೆ.

ಪತ್ನಿ ಸ್ವಾತಿ ನಿನ್ನೆ ರಾತ್ರಿ ಮೋಹನ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ನಂತರ ಪತಿ ಮೋಹನ್ ಮತ್ತು ಆತನ ಪೋಷಕರು ಮನೆಯಿಂದ ಪರಾರಿಯಾಗಿದ್ದಾರೆ. ಪತಿ ಮತ್ತು ಆತನ ಕುಟುಂಬದವರು ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತ ಗೃಹಿಣಿಯ ಪೋಷಕರು ಆರೋಪಿಸಿದ್ದು, ರಾತ್ರಿ ವೇಳೆ ಗೃಹಿಣಿ ಸಂಬಂಧಿಕರು ಗಂಡನ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.

ಇಂದು ಬೆಳಗ್ಗೆ ಕೆರೆಯಲ್ಲಿ ಗಂಡ ಮೋಹನ್ ಶವ ಪತ್ತೆಯಾಗಿದೆ. ಕಿಕ್ಕೇರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ದಂಪತಿಗೆ ಒಂದೂವರೆ ವರ್ಷದ ಮಗಳಿದ್ದು, ಪತಿಯ ಸಾವಿನಿಂದ ಅನಾಥಳಾಗಿದ್ದಾಳೆ.

ಎಸ್​ಪಿ ಮಾಹಿತಿ: ಸುದ್ದಿ ತಿಳಿದು ಸ್ಥಳಕ್ಕೆ ಬಂದಾಗ ಮೃತ ಮಹಿಳೆಯ ಸಂಬಂಧಿಕರು ಸೇರಿದಂತೆ ಸುಮಾರು 500 ಜನರು ಗಂಡನಿಗೆ ಸೇರಿದ್ದ ಮನೆಯ ಗಾಜು ಒಡೆದು, ಪಕ್ಕದಲ್ಲಿದ್ದ ಶೆಡ್​ಗೆ ನುಗ್ಗಿ ಬೆಂಕಿ ಹಚ್ಚಿರುವುದು ಕಂಡು ಬಂದಿತು. ಪೊಲೀಸರು ತಕ್ಷಣ ಉದ್ರಿಕ್ತ ಜನರನ್ನು ತಡೆದು ಸಂದರ್ಭವನ್ನು ತಿಳಿಗೊಳಿಸಿದರು. ಸ್ಥಳ ಪರಿಶೀಲಿಸಿದಾಗ ಮನೆಯ ಮೊದಲ ಮಹಡಿಯ ಕೊಠಡಿಯಲ್ಲಿನ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಯಿತು. ಡಾಗ್ ಸ್ಕ್ವಾಡ್ ಹಾಗೂ ಫಿಂಗರ್ ಪ್ರಿಂಟ್ ತಂಡದವರು ಪರಿಶೀಲಿಸಿದರು.

ಪಟ್ಟು ಸಡಿಲಿಸದ ಮೃತ ಮಹಿಳೆಯ ಪೋಷಕರು, ಗಂಡನ ಮನೆಯವರನ್ನು ನಮಗೆ ಒಪ್ಪಿಸಿ, ನಾವು ಅವರಿಗೆ ಶಿಕ್ಷೆ ಕೊಡುತ್ತೇವೆ. ಅಲ್ಲಿಯವರೆಗೂ ಮೃತದೇಹವನ್ನು ನಾವು ಯಾರಿಗೂ ಒಪ್ಪಿಸುವುದಿಲ್ಲವೆಂದು ಸಾಕಷ್ಟು ಪ್ರತಿರೋಧ ತೋರಿದರು. ಆದರೆ, ಅವರನ್ನು ನಾವು ಮನವರಿಕೆ ಮಾಡಿ, ಅವರಿಂದ ದೂರು ಪಡೆದು ಮೃತದೇಹವನ್ನು ರಾತ್ರಿಯೇ ಸಾಗಿಸಿದೆವು. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದೇವೆ.

ಇದರ ನಡುವೆ ಇಂದು ಬೆಳಗ್ಗೆ ಕೆರೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಇದರ ಜಾಡು ಹಿಡಿದು ಪರಿಶೀಲಿಸಿದಾಗ ಅದು ಮೃತ ಮಹಿಳೆಯ ಗಂಡ ಮೋಹನ್ ಶವವೆಂದು ಪತ್ತೆಯಾಗಿದೆ. ಈತನ ಮೃತದೇವನ್ನು ಪರಣೋತ್ತರ ಪರೀಕ್ಷೆಗಾಗಿ ಕೆಆರ್​ ಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಿದೆವು. ಈ ಪ್ರಕರಣವನ್ನೂ ಸಹ ಪರಿಶೀಲಿಸಲಾಗುತ್ತಿದೆ.

ಮೃತ ದಂಪತಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ಮಗು ಇದೆ. ಮೇಲ್ನೋಟಕ್ಕೆ ಮೃತ ದಂಪತಿಯ ನಡುವೆ ಕೌಟುಂಬಿಕ ಮನಸ್ತಾಪ ಇತ್ತೆಂದು ಪ್ರಾಥಮಿಕ ತನಿಖೆಯಿಂದ ನಮಗೆ ತಿಳಿದು ಬಂದಿದೆ. ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ. ಆ ಬಳಿಕ ಪ್ರಕರಣದ ಸಂಪೂರ್ಣ ಮಾಹಿತಿ ಹೊರಬರಲಿದೆ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

ಓದಿ:ಬೆಂಗಳೂರು: ವಿವಾಹಿತ ಮಹಿಳೆಯೊಂದಿಗೆ ಸ್ನೇಹ, ಆಟೋ ಚಾಲಕನಿಗೆ ಚಾಕುವಿನಿಂದ ಇರಿದ ಗೃಹಿಣಿಯ ಪತಿ - AUTO DRIVER STABBED

ABOUT THE AUTHOR

...view details