ಕರ್ನಾಟಕ

karnataka

ETV Bharat / state

ರಸ್ತೆಗಳಿಗೆ ವೈಟ್ ಟ್ಯಾಪಿಂಗ್: ಬಿಬಿಎಂಪಿಯಿಂದ ವಿವರಣೆ ಕೋರಿದ ಹೈಕೋರ್ಟ್ - WHITE TAPING OF ROADS

ರಸ್ತೆಗಳಿಗೆ ವೈಟ್​ ಟ್ಯಾಪಿಂಗ್​ ಮಾಡುವುದು ವೈಜ್ಞಾನಿಕವಾಗಿ ತಪ್ಪೋ ಅಥವಾ ಸರಿಯೋ ಎಂಬುದನ್ನು ಬಿಬಿಎಂಪಿ ವಿವರಣೆ ನೀಡಬೇಕೆಂದು ಹೈಕೋರ್ಟ್​ ಆದೇಶಿಸಿದೆ.

HIGH COURT  BBMP  BENGALURU
ಬಿಬಿಎಂಪಿಯಿಂದ ವಿವರಣೆ ಕೋರಿದ ಹೈಕೋರ್ಟ್ (ETV Bharat)

By ETV Bharat Karnataka Team

Published : Jan 17, 2025, 8:03 AM IST

ಬೆಂಗಳೂರು: ವೈಟ್ ಟಾಪಿಂಗ್ ರಸ್ತೆಗಳು ವೈಜ್ಞಾನಿಕವಾಗಿರುತ್ತವೆಯೇ, ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶಿಸಿದೆ.

ಬೆಂಗಳೂರು ಮಹಾನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಹಾಗೂ ಮಳೆ ನೀರು ಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಕೋರಮಂಗಲದ ನಿವಾಸಿ ವಿಜಯ್ ಮೆನನ್ 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ನೀವು ಎಲ್ಲೆಡೆ ವೈಟ್ ಟಾಪಿಂಗ್ ರಸ್ತೆಗಳನ್ನು ಮಾಡುತ್ತಿದ್ದೀರಿ. ಹಾಗಾಗಿ ಆ ರಸ್ತೆಗಳು ವೈಜ್ಞಾನಿಕವಾಗಿ ಎಷ್ಟು ಸೂಕ್ತ ಎಂಬ ಬಗ್ಗೆ ನೀವೇ ವಿವರಣೆ ನೀಡಬೇಕು. ವೈಟ್ ಟಾಪಿಂಗ್ ರಸ್ತೆಗಳು ಸೂಕ್ತವಲ್ಲ ಎಂಬ ಹಲವು ವರದಿಗಳಿವೆ. ಸಾಮಾನ್ಯ ಡಾಂಬಾರು ರಸ್ತೆಯಲ್ಲಿ ಮಳೆ ನೀರು ಬಿದ್ದರೆ ಅದು ಮಣ್ಣಿನಲ್ಲಿ ಇಂಗಿ ಹೋಗುತ್ತದೆ. ಆದರೆ ವೈಟ್ ಟಾಪಿಂಗ್​ನಲ್ಲಿ ಹಾಗೆ ಆಗುವುದಿಲ್ಲ. ಆದ್ದರಿಂದ ವೈಟ್ ಟಾಪಿಂಗ್ ರಸ್ತೆ ವೈಜ್ಞಾನಿಕವಾಗಿ ಸರಿಯೇ ಅಥವಾ ತಪ್ಪೇ ತಿಳಿಸಿ ಎಂಬುದನ್ನು ವಿವರಿಸಬೇಕು ಎಂದು ಸೂಚನೆ ನೀಡಿತು.

ಅದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ಮುಂದಿನ ವಿಚಾರಣೆ ವೇಳೆಗೆ ಉತ್ತರ ನೀಡಲಾಗುವುದು. ಅಲ್ಲಿಯವರೆಗೆ ಸಮಯ ನೀಡಿ ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಬಿಬಿಎಂಪಿ ಸಲ್ಲಿಕೆ ಮಾಡಿದ ಪ್ರಮಾಣಪತ್ರದಲ್ಲಿ ಗುಂಡಿಗಳನ್ನು ಮುಚ್ಚುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದನ್ನು ನ್ಯಾಯಪೀಠ ಗಮನಿಸಿತು. ಅದು ನೀವು ರಸ್ತೆ ಗುಂಡಿಗಳನ್ನು ಮುಚ್ಚುವ ದುರಸ್ತಿ ಕಾರ್ಯವನ್ನು ಆಗಾಗ್ಗೆ ಕೈಗೊಳ್ಳುತ್ತೀರೋ ಅಥವಾ ಮುಂಗಾರು ಮಳೆ ಬಂದಾಗ ಮಾತ್ರ ಮಾಡುತ್ತೀರೋ ಎಂದು ಬಿಬಿಎಂಪಿ ಪರ ವಕೀಲರನ್ನು ಪ್ರಶ್ನಿಸಿತು. ಜತೆಗೆ ವೈಟ್ ಟಾಪಿಂಗ್ ಬಗ್ಗೆ ಸಮಗ್ರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಹೈಕೋರ್ಟ್​ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಓದಿ:ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಆರೋಪ: ಮೇಲ್ಮನೆ ಸದಸ್ಯರಿಬ್ಬರ ಹೇಳಿಕೆ ದಾಖಲಿಸಿದ ಸಿಐಡಿ, ಸದ್ಯದಲ್ಲೇ ಯತೀಂದ್ರಗೂ ನೊಟೀಸ್?

ABOUT THE AUTHOR

...view details