'ಪುರುಷರ ಮೇಲೆ ನಮಗೆ ನಂಬಿಕೆ ಇಲ್ಲ..': ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು:"ಪುರುಷರ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ಹೆಣ್ಣು ಮಕ್ಕಳ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿ ಸಮೀಪದ ಭಾರತ್ ಜೋಡೋ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರೊಂದಿಗಿನ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
"ಹೆಣ್ಣುಮಕ್ಕಳ ಮೇಲೆ ನಮಗೆ ನಂಬಿಕೆ ಇದೆ. ಹೆಣ್ಣು ಕುಟುಂಬದ ಕಣ್ಣು. ಹಾಗಾಗಿ, ಅವರ ಖಾತೆಗೆ ಹಣ ಹಾಕುತ್ತಿದ್ದೇವೆ. ನಿಮ್ಮ ಕೈಗೆ ಹಣ ಕೊಟ್ಟರೆ ವೈನ್‌ಶಾಪ್‌ಗೆ ಹೋಗಿಬಿಡ್ತೀರಿ. ಮಹಿಳೆಯರಿಗೆ ಹಣ ಕೊಟ್ಟರೆ, ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಉಪಯೋಗವಾಗುತ್ತದೆ. ಗ್ಯಾಸ್ ಹಣ ಕಟ್ಟಲು ಬಳಸುತ್ತಾರೆ. ಆಸ್ಪತ್ರೆ ಮತ್ತಿತರ ಖರ್ಚು-ವೆಚ್ಚಗಳಿಗೆ ವ್ಯಯವಾಗುತ್ತದೆ. ಒಟ್ಟಾರೆ ಹೀಗೆ ಕುಟುಂಬ ನಿರ್ವಹಣೆಗೆ ನೆರವಾಗುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲಗಳ ಬಗ್ಗೆ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ" ಎಂದರು.
ಇದನ್ನೂ ಓದಿ:ಲೋಕಸಮರಕ್ಕೆ ರಾಜ್ಯ ಕಾಂಗ್ರೆಸ್ನಿಂದ ಗ್ಯಾರಂಟಿ ಅಸ್ತ್ರ: ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು? - Congress guarantees