ಕಾರವಾರ (ಉತ್ತರ ಕನ್ನಡ): ಬೆನ್ನ ಮೇಲೆ ಜಿಪಿಎಸ್ ಟ್ರ್ಯಾಕರ್ ಮತ್ತು ಕಾಲುಗಳಲ್ಲಿ ಟ್ಯಾಗ್ ಹೊಂದಿದ್ದ ರಣಹದ್ದು ನಗರದ ಕೋಡಿಬಾಗ ನದಿವಾಡಾದಲ್ಲಿ ಕಾಣಿಸಿಕೊಂಡಿದೆ.
ರಣಹದ್ದಿನ ಎರಡೂ ಕಾಲುಗಳಿಗೆ ಪ್ರತ್ಯೇಕ ಬಣ್ಣದಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆ ಬರೆದಿರುವ ಟ್ಯಾಗ್ ಕಟ್ಟಲಾಗಿದೆ. ಜೊತೆಗೆ ಬೆನ್ನ ಮೇಲೆ ಜಿಪಿಎಸ್ ಟ್ರ್ಯಾಕರ್ ಇದೆ. ಹೀಗಾಗಿ ಸ್ಥಳೀಯರು ರಣಹದ್ದು ಬೇಹುಗಾರಿಕೆಗಾಗಿ ಶತ್ರು ದೇಶದಿಂದ ಬಂದಿರಬಹುದು ಎಂದು ಆತಂಕಗೊಂಡಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇದ್ದು, ಈ ರಣಹದ್ದು ಕಾಣಿಸಿಕೊಂಡಿದ್ದರಿಂದ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.
ರಣಹದ್ದಿನ ಬೆನ್ನ ಮೇಲಿರುವ ಜಿಪಿಎಸ್ ಟ್ರ್ಯಾಕರ್ನಲ್ಲಿ ಮಹಾರಾಷ್ಟ್ರ ಅರಣ್ಯ ಇಲಾಖೆಯ ಹೆಸರು ಇದೆ. ಈ ರಣಹದ್ದು ಸಂಶೋಧನೆಗೆ ಒಳಪಟ್ಟಿದೆ. ಚಳಿಗಾಲ ಹಿನ್ನೆಲೆ ವಲಸೆ ಬಂದಿದೆ ಎಂಬುದು ಅರಣ್ಯಾಧಿಕಾರಿಗಳ ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ.
ಜಿಪಿಎಸ್ ಟ್ರ್ಯಾಕರ್ ಹೊಂದಿದ್ದ ರಣಹದ್ದು (ETV bharat) ಈ ಕುರಿತು ಡಿಎಫ್ಒ ರವಿಶಂಕರ್ ಮಾತನಾಡಿ, "ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಂಬೆ ನ್ಯಾಚ್ಯುರಲ್ ಹಿಸ್ಟರಿ ಆಫ್ ಸೊಸೈಟಿಯಿಂದ ಸಂಶೋಧನೆ ನಡೆಯುತ್ತಿದ್ದು, 5 ರಣಹದ್ದಿಗೆ ಟ್ಯಾಗಿಂಗ್ ಮಾಡಿ ಸಂತಾನೋತ್ಪತ್ತಿ ಬಳಿಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಒಂದು ಇಲ್ಲಿಗೆ ಬಂದಿದೆ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್ನ ಆನೆ ಸಾವು