ಕರ್ನಾಟಕ

karnataka

ETV Bharat / state

ಅನಂತ್ ಕುಮಾರ್ ಹೆಗಡೆ ಕೆಲಸ ಮಾಡಿಲ್ಲ ಅಂತಾ ನನಗೆ ಟಿಕೆಟ್ ಕೊಟ್ಟಿದ್ದಲ್ಲ: ಕಾಗೇರಿ - Vishweshwar Hegde Kageri - VISHWESHWAR HEGDE KAGERI

ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ತಪ್ಪಿದ್ದರ ಬಗ್ಗೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

By ETV Bharat Karnataka Team

Published : Apr 7, 2024, 10:41 PM IST

ಬೆಂಗಳೂರು:ಹಾಲಿ ಸಂಸದಅನಂತ್ ಕುಮಾರ್ ಹೆಗಡೆ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎಂದು ನನಗೆ ಟಿಕೆಟ್ ಕೊಟ್ಟಿಲ್ಲ. ಟಿಕೆಟ್ ಹಂಚಿಕೆಗೆ ಅದರದ್ದೇ ಆದ ಮಾನದಂಡ ಇರುತ್ತದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಅಭಿವೃದ್ಧಿ ಕೆಲಸ ಮಾಡಿಲ್ಲ ಎನ್ನುವ ಕಾರಣಕ್ಕೆ ಈ ಬಾರಿ ನನಗೆ ಟಿಕೆಟ್ ಕೊಟ್ಟಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಅವರು ಕೆಲಸ ಮಾಡಲಿಲ್ಲ ಎಂದು ನನಗೆ ಕೊಟ್ಟಿಲ್ಲ. ಅಭಿವೃದ್ದಿ ಎನ್ನುವುದು ನಿರಂತರ. ಅದಕ್ಕೆ ಫುಲ್ ಸ್ಟಾಪ್ ಇಡಲಾಗುವುದಿಲ್ಲ. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಅಗತ್ಯತೆ ಬರುತ್ತದೆ. ಅದರಂತೆ ಅಭಿವೃದ್ಧಿ ಕೆಲಸ ಆಗಬೇಕಾಗುತ್ತದೆ ಎಂದು ಕಾಗೇರಿ ಸ್ಪಷ್ಟಪಡಿಸಿದರು.

ಅನಂತ್ ಕುಮಾರ್ ಹೆಗಡೆ ಅವರ ಭೇಟಿಗೆ ಸಮಯ ಕೇಳಿದ್ದೇನೆ. ಅವರು ಸಮಯ ಕೊಟ್ಟಾಗ ಹೋಗಿ ಭೇಟಿ ಮಾಡುತ್ತೇನೆ. ಅವರು ನನಗೆ ಖಂಡಿತಾ ಸಮಯ ಕೊಡುತ್ತಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಲೋಕಸಭಾ ಅಭ್ಯರ್ಥಿ ಎಂದು ಕರೆಸಿಕೊಳ್ಳುವಲ್ಲಿ ಹೊಸಬ ಇರಬಹುದು. ಆದರೆ 1991ರಲ್ಲಿಯೇ ನಾನು ಉಸ್ತುವಾರಿಯಾಗಿ ಕೆಲಸ ಮಾಡಿದ್ದೆ, ಶಿಕ್ಷಣ ಸಚಿವಾಗಿಯೂ ಸಾಕಷ್ಟು ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಯನ್ನು ಭೌಗೋಳಿಕವಾಗಿ ಅರ್ಥ ಮಾಡಿಕೊಂಡಿದ್ದೇನೆ. ಅಭ್ಯರ್ಥಿ ಘೋಷಣೆಗೂ ಮೊದಲು ಸಣ್ಣಪುಟ್ಟ ಗೊಂದಲ ಸಹಜ. ಆದರೆ ಅಭ್ಯರ್ಥಿ ಘೋಷಿಸಿದ ನಂತರ ಎಲ್ಲಾ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದೇವೆ.

ಅನಂತ್ ಕುಮಾರ್ ಹೆಗಡೆ ನಮ್ಮ ಕ್ಷೇತ್ರದಲ್ಲಿ ಆರು ಬಾರಿ ಗೆದ್ದು ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಇದು ಬಿಜೆಪಿ ಕ್ಷೇತ್ರ. ಬಿಜೆಪಿ ಕಾರ್ಯಕರ್ತರು, ಬಿಜೆಪಿ ವಿಚಾರಧಾರೆಗೆ ಸ್ಪಂದಿಸುವ ಬಹಳ ದೊಡ್ಡ ಮತದಾರರಿರುವ ಕ್ಷೇತ್ರ. ಈ ಬಾರಿ ಗೆಲುವಿಗೆ ಜನಾಭಿಪ್ರಾಯ ಒಳ್ಳೆಯದಿದೆ. ಹಾಗಾಗಿ ಗೆಲ್ಲುತ್ತೇವೆ. ಖಾನಾಪುರ, ಕಿತ್ತೂರು, ಕರಾವಳಿಗೆ ಯಾವ ಯಾವ ನಾಯಕರು ಬರಬೇಕು ಎನ್ನುವ ಚರ್ಚೆ ಆಗಿದೆ. ರಾಷ್ಟ್ರಮಟ್ಟದ ನಾಯಕರು ಬರಬೇಕಾದ ಸನ್ನಿವೇಶ ಇದೆ. ಆದರೆ ದೇಶದಲ್ಲೇ ಚುನಾವಣೆ ನಡೆಯಲಿದೆ. ಹಾಗಾಗಿ ಯಾರು ಬರಲಿದ್ದಾರೆ ಎಂದು ಇನ್ನೂ ನಿರ್ಧಾರ ಅಗಿಲ್ಲ ಎಂದು ಕಾಗೇರಿ ತಿಳಿಸಿದರು.

ಇದನ್ನೂ ಓದಿ:ಡಾ.ಕೆ.ಸುಧಾಕರ್ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಎಸ್.ಆರ್.ವಿಶ್ವನಾಥ್ - S R Vishwanath

ABOUT THE AUTHOR

...view details