ಕರ್ನಾಟಕ

karnataka

ETV Bharat / state

ಮೈಸೂರು: ಬಹಿಷ್ಕಾರ ಹೇರಲಾಗಿದ್ದ ಕುಟುಂಬದಲ್ಲಿ ಸಾವು; ಅಂತ್ಯಕ್ರಿಯೆಗೆ ಗ್ರಾಮಸ್ಥರ ಅಡ್ಡಗಾಲು - Villagers Ostracize Family

ಬಹಿಷ್ಕಾರಕ್ಕೊಳಗಾಗಿದ್ದ ಮನೆಯಲ್ಲಿ ಸಾವನ್ನಪ್ಪಿದ ಬಾಲಕನ ಮೃತದೇಹದ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಕೊನೆಗೆ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದನ್ವಯ, ತಹಸೀಲ್ದಾರ್​ ಹಾಗೂ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು.

Etv Bharat
Etv Bharat

By ETV Bharat Karnataka Team

Published : Apr 21, 2024, 7:10 AM IST

ಮೈಸೂರು:ಬಹಿಷ್ಕಾರಕ್ಕೆ ಒಳಗಾದ ಕುಟುಂಬದಲ್ಲಿ ಸಾವನ್ನಪ್ಪಿದ್ದ ವಿಶೇಷಚೇತನ ಬಾಲಕನ ಅಂತ್ಯಸಂಸ್ಕಾರಕ್ಕೆ ಪೋಷಕರು ಪರದಾಟ ನಡೆಸಿದ ಘಟನೆ ನಂಜನಗೂಡು ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಲ್ಲಹಳ್ಳಿ ಸಮೀಪವಿರುವ ತರಗನಹಳ್ಳಿಯ ನಿವಾಸಿ ಕುಳ್ಳನಾಯಕ ಎಂಬವರ ಕುಟುಂಬದ ಮೇಲೆ ಕೆಲವು ವರ್ಷಗಳ ಹಿಂದೆ ಊರಿನ ಮುಖಂಡರು ಬಹಿಷ್ಕಾರ ಹಾಕಿದ್ದರು. ಈ ಬಹಿಷ್ಕಾರ ತೆರವುಗೊಳಿಸುವಂತೆ ಒತ್ತಾಯಿಸಿ ಕುಳ್ಳನಾಯಕ ಅವರು ಹುಲ್ಲಹಳ್ಳಿಯ ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಚೇರಿಗೆ ಸಾಕಷ್ಟು ಅಲೆದಾಡಿದ್ದರು. ಆದರೆ ಈ ಮನವಿಗೆ ತಾಲೂಕು ಆಡಳಿತ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಶುಕ್ರವಾರ ಕುಳ್ಳನಾಯಕ ಅವರ ಮಗ 15 ವರ್ಷದ ಮಾದೇಶ ಮೃತಪಟ್ಟಿದ್ದಾನೆ. ಮೃತದೇಹದ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಅವಕಾಶ ನೀಡಿಲಿಲ್ಲ. ಇದರಿಂದ ನೊಂದ ಕುಳ್ಳನಾಯಕ ಮಗನ ಮೃತದೇಹವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕೊಂಡೊಯ್ಯಲು ಮುಂದಾದರು.

ಈ ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕೂಡಲೇ ತಹಶೀಲ್ದಾರ್​ಗೆ ಸೂಚನೆ ನೀಡಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮತ್ತು ಆರ್.ಐ.ಪ್ರಕಾಶ್​ ಸ್ಥಳಕ್ಕೆ ತೆರಳಿ ಗ್ರಾಮದ ಮುಖಂಡರ ಮನವೊಲಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದರು.

ಇದನ್ನೂ ಓದಿ:ಬೆಂಗಳೂರು: ಮಹಿಳೆಯ ಕೊಂದು ಚಿನ್ನ, ಫೋನ್​, ಕಾರು ದೋಚಿ ಹಂತಕರು ಪರಾರಿ - WOMAN MURDER

ABOUT THE AUTHOR

...view details