ವಿಜಯಪುರ: ಯಾರೋ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಜಾಮೀಯಾ ಮಸೀದಿ ಬಳಿ ನಡೆದಿದೆ. ರಜೀನ್ ಜಮಾದಾರ್ (27) ಹತ್ಯೆಗೀಡಾದ ಯುವಕ. ಹಬ್ಬದ ದಿನದಂದೇ ಈ ಹತ್ಯೆ ನಡೆದಿದೆ. ಮೃತ ರಜೀನ್ ಪೇಟಿ ಬಾವಡಿ ಪ್ರದೇಶದ ನಿವಾಸಿಯಾಗಿದ್ದು, ಈ ಕೊಲೆಗೆ ಹಳೆಯ ವೈಷಮ್ಯವೇ ಕಾರಣ ಇರಬಹುದು ಎಂದು ಹತ್ಯೆಗೀಡಾದ ಯುವಕನ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಯುವಕನ ಬರ್ಬರ ಹತ್ಯೆ - young man murder - YOUNG MAN MURDER
ವಿಜಯಪುರದಲ್ಲಿ ಹಬ್ಬದ ದಿನದಂದೇ ಯುವಕನ ಹತ್ಯೆ ನಡೆದಿದೆ.
Published : Apr 12, 2024, 6:02 AM IST
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾಣೆ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯ ಕುರಿತು ಪ್ರಾಥಮಿಕ ಅಗತ್ಯ ತನಿಖೆಗಳನ್ನ ಕೈಗೊಂಡಿದ್ದು, ತಂದೆ ಮತ್ತು ಕುಟುಂಬ ಸದಸ್ಯರ ದೂರಿನ ನಂತರ ತನಿಖೆಯನ್ನ ಇನ್ನಷ್ಟು ತೀವ್ರಗೊಳಿಸಲಾಗುವುದು. ಘಟನೆಗೆ ಕಾರಣ ಪತ್ತೆ ಹಚ್ಚಿ ಆದಷ್ಟು ಶೀಘ್ರ ಆರೋಪಿಗಳನ್ನ ಬಂಧಿಸುವುದಾಗಿ ಋಷಿಕೇಶ್ ಸೋನವಾಣೆ ತಿಳಿಸಿದರು.
ಇದನ್ನೂ ಓದಿ:ಕೊಪ್ಪಳ: ಪತ್ನಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ - Koppala Crime Case