ಬೆಂಗಳೂರು:ಬನ್ನೇರುಘಟ್ಟ ಉದ್ಯಾನವನದಲ್ಲಿ ವೇದ ಎಂಬ ಆನೆ ಮರಿಗೆ ಜನ್ಮ ನೀಡಿದೆ. ಕಳೆದ ಡಿಸೆಂಬರ್ 11 ರಂದು ರೂಪ ಎಂಬ ಆನೆ ಮರಿಯೊಂದಕ್ಕೆ ಜನ್ಮ ನೀಡಿದ್ದು ಈಗ ಮತ್ತೊಂದು ಮರಿ ಆನೆ ಉದ್ಯಾನವನಕ್ಕೆ ಆಗಮಿಸಿರುವುದು ಸಂಭ್ರಮ ಹೆಚ್ಚಿಸಿದೆ. ಇದೀಗ ಒಟ್ಟು ಆನೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಮರಿಯಾನೆಗೆ ಜನ್ಮ ನೀಡಿದ ವೇದ; ಬನ್ನೇರುಘಟ್ಟ ಉದ್ಯಾನವನದಲ್ಲಿ ಹೆಚ್ಚಿದ ಸಂಭ್ರಮ - ಮರಿ ಆನೆ
ಬನ್ನೇರುಘಟ್ಟ ಉದ್ಯಾನವನದಲ್ಲಿ ವೇದ ಹೆಸರಿನ ಆನೆ ಮರಿಗೆ ಜನ್ಮ ನೀಡಿದ್ದು, ಆನೆಗಳ ಸಂಖ್ಯೆ 26ಕ್ಕೆ ಏರಿದೆ.
Published : Jan 31, 2024, 1:05 PM IST
ಪ್ರಾಣಿ ಪಕ್ಷಿಗಳ ಸಂತಾನಾಭಿವೃದ್ಧಿಗೆ ಹೇಳಿ ಮಾಡಿಸಿರುವ ವಾತಾವರಣ ಹೊಂದಿರುವ ಬನ್ನೇರುಘಟ್ಟ ಉದ್ಯಾನವನದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳೂ ಇಲ್ಲಿ ಜೀವ ಉಳಿಸಿಕೊಂಡಿವೆ. ಹೀಗಾಗಿ ದೈತ್ಯ ಸಾಕಾನೆಗಳು ರಾತ್ರಿ ವೇಳೆ ಕಾಡಾನೆಗಳೊಂದಿಗೆ ಸಖ್ಯ ಬೆಳೆಸಿ ಬೆಳಗ್ಗೆ ಉದ್ಯಾನವನದ ಸೀಗೆ ಕಟ್ಟೆಯ ಆನೆ ಪುನರ್ವಸತಿ ಕೇಂದ್ರಕ್ಕೆ ಆಗಮಿಸುತ್ತವೆ. ಹೀಗೆ ಕಾಡಾನೆ ಮತ್ತು ಸಾಕಾನೆಯ ಮಿಲನಕ್ಕೆ ಮರಿಗಳು ದಷ್ಟ ಪುಷ್ಟವಾಗಿ ಜನಿಸುತ್ತಿವೆ. ಸದ್ಯ ತಾಯಿ ಮತ್ತು ಮರಿ ಆನೆ ಆರೋಗ್ಯವಾಗಿವೆ ಎಂದು ಉದ್ಯಾನವನದ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ವೇದಳಿಗೆ ಇದು ಐದನೇ ಮರಿಯಾಗಿದ್ದು, ಚಂಪಾ, ಐರಾವತ, ಶೃತಿ, ಐಹಿಲ್ಯ ಎಂಬ ಆನೆಗಳಿಗೆ ತಾಯಿ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
ಇದನ್ನೂ ಓದಿ:ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿಗರ ಗಮನ ಸೆಳೆಯುತ್ತಿದೆ ಮುದ್ದಾದ ಆನೆ ಮರಿ