ಕರ್ನಾಟಕ

karnataka

ETV Bharat / state

ಜನಗಣತಿಯಲ್ಲಿ ಲಿಂಗಾಯತ ಎಂದೋ, ಪಂಚಮಸಾಲಿ ಎಂದು ಬರೆಸಲು ತೀರ್ಮಾನಿಸಬೇಕಿದೆ: ವಚನಾನಂದ ಶ್ರೀ - Vachanananda Shri

ಪಂಚಮಸಾಲಿಗಳ ಮೀಸಲಾತಿ ವಿಚಾರವಾಗಿ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು. ದಾಖಲೆಗಳನ್ನು ಏನೆಂದು ನಮೂದಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು ಹೇಳಿದರು.

ವಚನಾನಂದ ಶ್ರೀ
ವಚನಾನಂದ ಶ್ರೀ (ETV Bharat)

By ETV Bharat Karnataka Team

Published : Aug 3, 2024, 9:38 PM IST

Updated : Aug 3, 2024, 11:02 PM IST

ಪಂಚಮಸಾಲಿ ಹೋರಾಟದ ಬಗ್ಗೆ ವಚನಾನಂದ ಶ್ರೀಗಳ ಮಾತು (ETV Bharat)

ದಾವಣಗೆರೆ:ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ದಾವಣಗೆರೆ ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು ಮತ್ತೆ ಮೀಸಲಾತಿ ವಿಚಾರವಾಗಿ ಮಾತನಾಡಿದ್ದಾರೆ. ಮುಂಬರುವ ಜನಗಣತಿಯ ವೇಳೆ ನಮ್ಮ ಜಾತಿಯನ್ನು ಪಂಚಮಸಾಲಿ ಎಂದೋ ಅಥವಾ ಲಿಂಗಾಯತ ಎಂದು ಬರೆಸಬೇಕೋ ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ಹೇಳಿದರು.

ಇಲ್ಲಿ ಶನಿವಾರ ನಡೆದ ವೀರಶೈವ- ಲಿಂಗಾಯತರು ಹಿಂದುಗಳು ಎಂಬ ಚರ್ಚೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತರ ಸಮುದಾಯದ ಉಪ ಪಂಗಡ. ಗಣತಿಯಲ್ಲಿ ನಮ್ಮನ್ನು ಲಿಂಗಾಯತ ಎಂದು ಬರೆಸಬೇಕೋ ಅಥವಾದ ಪಂಚಮಸಾಲಿ ಎಂದು ಬರೆಸಬೇಕೋ ಎಂದು ತೀರ್ಮಾನ ಮಾಡುತ್ತೇವೆ. ಸರ್ಕಾರ ಕೂಡ ಮೀಸಲಾತಿ ವಿಚಾರವಾಗಿ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.

ಹಿಂದೂ ಎಂದರೆ ಸತ್ಯ:ಹಿಂದೂ ಎಂಬ ವಿಚಾರವಾಗಿ ವಾದ ಸರಣಿ ಮಂಡಿಸಿ ವಚನಾನಂದ ಶ್ರೀಗಳು, ಹಿಂದೂ ಎನ್ನುವುದು ಅತ್ಯಂತ ಶ್ರೇಷ್ಠವಾದ ಸತ್ಯ. ನಾವು ಎಲ್ಲಿದ್ದೇವೆ, ಯಾವ ರಾಷ್ಟ್ರದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮೊದಲು ಮಾಡಿಕೊಳ್ಳಬೇಕು. ನಾವು ಈ ರಾಷ್ಟ್ರವನ್ನು ಯಾವ ರೀತಿ ಬೆಳೆಸಬೇಕು‌ ಎಂದು ಯೋಚಿಸಬೇಕು. ಹಿಂದೂ ಎನ್ನುವುದು ಅತ್ಯಂತ ಶ್ರೇಷ್ಠವಾಗಿದೆ. ಸನಾತನ ಮತ್ತು ಅದೊಂದು ಶುದ್ಧ ಜೀವನ ಪದ್ಧತಿ. ಹಿಂದುತ್ವದ ವಟವೃಕ್ಷದಲ್ಲಿ ಸಾಕಷ್ಟು ರೆಂಬೆ, ಕೊಂಬೆಗಳು ಇವೆ ಎಂದು ಹೇಳಿದರು.

ಅಲ್ಲಮಪ್ರಭು, ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾವೀರ ಸೇರಿದಂತೆ ಮಹಾಯೋಗಿ ಶರಣರು ಧರ್ಮಗಳ ಪ್ರತೀಕವಾಗಿದ್ದಾರೆ. ಎಲ್ಲ ಮಹನೀಯರು ಹೇಳಿದ್ದು ಹಿಂದೂ ತತ್ವವೇ. ಆದರೆ, ಅಚರಣೆಯಲ್ಲಿ ಬದಲಾವಣೆ ಇವೆ. ನಾವೆಲ್ಲರೂ ಹಿಂದೂಗಳೆ. ಹಿಂದೂ ಎನ್ನುವುದು ಮಹಾಸಾಗರ. ನಾವುಗಳು ಅದರಲ್ಲಿ ಸೇರುವ ನದಿಗಳಿದ್ದಂತೆ. ಸಾಮಾಜಿಕವಾಗಿ ನಾವೆಲ್ಲ ಒಂದೇ. ತಾತ್ವಿಕವಾಗಿ ಬೇರೆ ಬೇರೆ ಆಗಿದ್ದೇವೆ ಎಂದು ಹೇಳಿದರು.

ಸಾಮಾಜಿಕ, ಬೌದ್ಧಿಕವಾಗಿ ಇಡೀ ವೀರಶೈವ ಲಿಂಗಾಯತ ಒಂದೇ ಎಂಬುದು ನಮ್ಮ ಭಾವನೆ. ಅದು ಹಿಂದೂ ಧರ್ಮಕ್ಕೆ ಪೂರಕ ಆಗಬೇಕು. ಬಸವ ಪಥ, ಜೈನ ಪಥ, ಬೌದ್ಧ ಪಥ ಬೇರೆ ಬೇರೆಯಾಗಿದ್ದರೂ, ಅವುಗಳ ಮೂಲ ಸನಾತನ ಹಿಂದೂ. ನಮ್ಮೆಲ್ಲರ ಸರ್ಟಿಫಿಕೆಟ್​​ನಲ್ಲಿ ಜಾತಿ ಬೇರೆ ಬೇರೆ ಇದೆ. ಆಚರಣೆ ಬೇರೆ ಇದೆ ಅಷ್ಟೆ. ಆದರೆ, ನಾವೆಲ್ಲರೂ ಒಂದೇ ಎಂದು ಶ್ರೀಗಳು ಪ್ರತಿಪಾದಿಸಿದರು.

ಏನಿದು ಪಂಚಮಸಾಲಿ ಹೋರಾಟ?:ಲಿಂಗಾಯತ ಸಮುದಾಯದ ಉಪ ಪಂಗಡವಾದ ಪಂಚಮಸಾಲಿಗಳು ಸಾಮಾಜಿಕವಾಗಿ ಹಿಂದುಳಿದಿದ್ದು, ಮೀಸಲಾತಿಯಲ್ಲಿ 3ಬಿ ವರ್ಗದಲ್ಲಿದ್ದಾರೆ. ಬಡ ಪಂಗಡವಾದ ಕಾರಣ, ಅಭಿವೃದ್ಧಿ ಹಿನ್ನೆಲೆಯಲ್ಲಿ 2ಎ ವರ್ಗ ಸೇರಿಸಲು ಪಂಗಡದ ಜನರು ಹೋರಾಟ ನಡೆಸುತ್ತಿದ್ದಾರೆ. ಉದ್ಯೋಗ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಪಂಚಮಸಾಲಿ ಯುವಕ, ಯುವತಿಯರಿಗೆ ಅನ್ಯಾಯವಾಗುತ್ತಿದೆ. ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ 24 ಒಳಪಂಗಡಗಳು ಈಗಾಗಲೇ 2ಎ ಮೀಸಲಾತಿ ಹಕ್ಕನ್ನು ಅನುಭವಿಸುತ್ತಿವೆ. ಈ ಮೀಸಲಾತಿ 3ಬಿ ವರ್ಗದಲ್ಲಿರುವ ನಮ್ಮ ಸಮುದಾಯಕ್ಕೆ ಇಲ್ಲ. ಹೀಗಾಗಿ ಮೀಸಲಾತಿ ಬದಲಿಸಬೇಕು ಎಂದು ಹೋರಾಟ ನಡೆಯುತ್ತಿದೆ ಹೇಳಿದರು.

ಇದನ್ನೂ ಓದಿ:ಪಂಚಮಸಾಲಿ ಮೀಸಲಾತಿಗಾಗಿ ರಾಜೀನಾಮೆಗೆ ತಯಾರಿದ್ದೇನೆ: ಶಾಸಕ ರಾಜು ಕಾಗೆ - READY TO RESIGN MLA RAJU KAGE

Last Updated : Aug 3, 2024, 11:02 PM IST

ABOUT THE AUTHOR

...view details