ಕರ್ನಾಟಕ

karnataka

By ETV Bharat Karnataka Team

Published : Feb 4, 2024, 2:25 PM IST

Updated : Feb 4, 2024, 2:47 PM IST

ETV Bharat / state

ಹುಬ್ಬಳ್ಳಿ: ಸಚಿವ ಪ್ರಹ್ಲಾದ್ ಜೋಶಿ, ಪ್ರಮೋದ್ ಮಧ್ವರಾಜ್ ಸೇರಿ 15,000 ಜನರಿಂದ ನಗರ ಸ್ವಚ್ಛತೆ

ಸ್ವಚ್ಛ ಹುಬ್ಬಳ್ಳಿ-ಸ್ವಚ್ಛ ಭಾರತ ಅಭಿಯಾನದಡಿ ಕೇಂದ್ರ ಸಚಿವ ಪ್ರಹ್ಲಾದ್​​​​ ಜೋಶಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್ ಸೇರಿದಂತೆ ಅನೇಕರು​ ಪೊರಕೆ ಹಿಡಿದು ಬೀದಿ ಸ್ವಚ್ಛಗೊಳಿಸಿದರು.

ಸ್ವಚ್ಛ ಹುಬ್ಬಳ್ಳಿ-ಸ್ವಚ್ಛ ಭಾರತ ಅಭಿಯಾನ
ಸ್ವಚ್ಛ ಹುಬ್ಬಳ್ಳಿ-ಸ್ವಚ್ಛ ಭಾರತ ಅಭಿಯಾನ

ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಬೆಳಿಗ್ಗೆ ಕೇಂದ್ರ ಸಚಿವ ಪ್ರಹ್ಲಾದ್​​​​ ಜೋಶಿ ಸೇರಿದಂತೆ ಸುಮಾರು 15,000ಕ್ಕೂ ಹೆಚ್ಚು ಜನರು ಕೈಯಲ್ಲಿ ಪೊರಕೆ, ಬುಟ್ಟಿಗಳನ್ನು ಹಿಡಿದು ಬೀದಿ ಸ್ವಚ್ಛಗೊಳಿಸಿದರು. ಸ್ವಚ್ಛ ಹುಬ್ಬಳ್ಳಿ-ಸ್ವಚ್ಛ ಭಾರತ ಅಭಿಯಾನದಡಿ ಡಾ.ನಾನಾಸಾಹೇಬ್​ ಧರ್ಮಾಧಿಕಾರಿ ಪ್ರತಿಷ್ಠಾನದ ಸಾರಥ್ಯದಲ್ಲಿ ನಗರ ಶುದ್ಧೀಕರಣ ಕೆಲಸ ನಡೆಯಿತು. ಜನಜಂಗುಳಿಯಿಂದಾಗಿ ಸದಾ ಕಸದ ರಾಶಿಯಿಂದ ತುಂಬಿರುತ್ತಿದ್ದ ಎಪಿಎಂಸಿ, ಬಸ್​ ನಿಲ್ದಾಣ ಹೀಗೆ ನಗರದ ಪ್ರಮುಖ ಪ್ರದೇಶಗಳಲ್ಲಿ, ಬೀದಿ ಬೀದಿಗಳಲ್ಲಿ ಸ್ವಚ್ಛತಾ ಕೆಲಸ ನೆರವೇರಿತು.

2,500 ಟನ್ ತ್ಯಾಜ್ಯ ಹೊರ ಹಾಕುವ ಗುರಿ:ಸ್ವಚ್ಛತಾ ಅಭಿಯಾನದಲ್ಲಿ ಸರಿಸುಮಾರು 2,500 ಟನ್‌ನಷ್ಟು ತ್ಯಾಜ್ಯವನ್ನು ನಗರದಿಂದ ಹೊರಹಾಕುವ ಗುರಿಯೊಂದಿಗೆ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದಾರೆ. ಇದಕ್ಕೆ ಮಹಾನಗರ ಪಾಲಿಕೆ ಕೈ ಜೋಡಿಸಿದೆ. ತ್ಯಾಜ್ಯ ಸಾಗಿಸಲು ಪಾಲಿಕೆ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೊರ ಊರುಗಳಿಂದ ಬರುವವರಿಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಬಸ್​, ರೈಲಿನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಬಿಜೆಪಿ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಹು-ಧಾ ಮಹಾನಗರ ಪಾಲಿಕೆ ಮಹಾಪೌರ ವೀಣಾ ಬರದ್ವಾಢ ಹಾಗೂ ಪಾಲಿಕೆ ಸದಸ್ಯರು ಮತ್ತು ಸಂಸ್ಥೆ ಪ್ರಮುಖರು ಪಾಲ್ಗೊಂಡಿದ್ದರು.

ಸ್ವಚ್ಛ ಹುಬ್ಬಳ್ಳಿ-ಸ್ವಚ್ಛ ಭಾರತ ಅಭಿಯಾನ

"ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತದ ಈ ಪರಿಕಲ್ಪನೆ ಅದ್ಭುತವಾಗಿದೆ" ಎಂದು ಸಚಿವ ಪ್ರಹ್ಲಾದ್​ ಜೋಶಿ ಬಣ್ಣಿಸಿದರು. "ಮೋದಿಯವರ ಆಶಯದಂತೆ ಸ್ವಚ್ಛ ಭಾರತ ಅಭಿಯಾನಕ್ಕೆ ಎಲ್ಲೆಲ್ಲೂ ಅಭೂತಪೂರ್ವ ಸ್ಪಂದನೆ ಲಭಿಸುತ್ತಿದೆ. ದೇಶಾದ್ಯಂತ ಜನರು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಭಿನಂದನಾರ್ಹ" ಎಂದರು.

ಇಂದು ಹಮ್ಮಿಕೊಂಡಿದ್ದ ವಿಶೇಷ ಅಭಿಯಾನದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಬಿಜೆಪಿಯ 15,000ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ:ವಿಶ್ವ ಕ್ಯಾನ್ಸರ್ ದಿನ: ಬೆಂಗಳೂರಲ್ಲಿ ಬೃಹತ್ ವಾಕಥಾನ್

Last Updated : Feb 4, 2024, 2:47 PM IST

ABOUT THE AUTHOR

...view details