ತುಮಕೂರು:ಬಿಜೆಪಿ ವರಿಷ್ಠ ಎಲ್.ಕೆ ಅಡ್ವಾಣಿ ನಿಧನರಾಗಿದ್ದಾರೆ ಎಂಬ ವದಂತಿ ಹಿನ್ನೆಲೆ ಕೇಂದ್ರ ಸಚಿವ ವಿ.ಸೋಮಣ್ಣ ತುಮಕೂರಿನ ಗುಬ್ಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ತುಮಕೂರು: ಅಡ್ವಾಣಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಚಿವ ಸೋಮಣ್ಣ ಎಡವಟ್ಟು - l k advani death rumors - L K ADVANI DEATH RUMORS
ಬಿಜೆಪಿ ವರಿಷ್ಠ ಎಲ್.ಕೆ ಅಡ್ವಾಣಿ ನಿಧನರಾಗಿದ್ದಾರೆ ಎಂಬ ವದಂತಿ ಹಿನ್ನೆಲೆ ಕೇಂದ್ರ ಸಚಿವ ವಿ.ಸೋಮಣ್ಣ ಶ್ರದ್ಧಾಂಜಲಿ ಸಲ್ಲಿಸಿ ಪೇಚಿಗೆ ಸಿಲುಕಿದ್ದಾರೆ.
Published : Jul 6, 2024, 9:45 PM IST
ಗುಬ್ಬಿಯಲ್ಲಿ ಶನಿವಾರ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ದೆಹಲಿಗೆ ಹೊರಡುವ ಕಾರಣ ನೀಡಿ ಸಭೆ ಮೊಟಕುಗೊಳಿಸಿದ ಸೋಮಣ್ಣ ಇದೀಗ ತಾನೆ ಮಾಹಿತಿ ಬಂದಿದೆ, ಅಡ್ವಾಣಿಯವರು ಹೋಗಿಬಿಟ್ಟಿದ್ದಾರೆ ಎಂದರು. ನಾನು ದೆಹಲಿಗೆ ಹೋಗಬೇಕಿದೆ ಎಂದ ಸೋಮಣ್ಣ ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡುವಂತೆ ಸಭೆಯಲ್ಲಿ ಮನವಿ ಮಾಡಿಯೇ ಬಿಟ್ಟರು. ಸೋಮಣ್ಣಗೆ ಗುಬ್ಬಿಯ ಬಿಜೆಪಿ - ಜೆಡಿಎಸ್ ಮುಖಂಡರು ಸಾಥ್ ನೀಡಿದರು.
ಇದನ್ನೂ ಓದಿ:ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ವಿರುದ್ಧ ಶ್ಯಾಮಪ್ರಸಾದ್ ಮುಖರ್ಜಿ ಹೋರಾಡಿದ್ದರು: ಬಿ.ವೈ.ವಿಜಯೇಂದ್ರ - Shyamprasad Mukharjee Jayanthi