ಮಂಡ್ಯ :ಸಿಎಂ ಪ್ರಾಸಿಕ್ಯೂಷನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ನನ್ನಿಂದ ಯಾವುದೇ ತೀರ್ಮಾನ ಆಗದೇ ಇದ್ರು, ನನ್ನ ಆರೋಪಿ ಮಾಡ್ತಾ ಇದ್ದಾರೆ. ನನ್ನ ಮೇಲಿನ ಆರೋಪ ಎಲ್ಲ ಮುಗಿಲಿ. ಅದೆಲ್ಲ ಮುಗಿದ ಮೇಲೆ ಮಾತನಾಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾಗಮಂಗಲದ ಆದಿಚುಂಚನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಪಾದಯಾತ್ರೆಗೆ ನಾನು ಹೋಗಿದ್ದೆ. ಪಾದಯಾತ್ರೆಯಲ್ಲಿ ನಾನು ಜನರನ್ನು ಜಾಗರೂಕರನ್ನಾಗಿ ಮಾಡುವ ಕೆಲಸ ಮಾಡಿದ್ದೇನೆ. ಇವರ ಬಗ್ಗೆ ನಾನೇನು ಮಾತಾಡಿಲ್ಲ. ನಾನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ. ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ ಎಂದಿದ್ದಾರೆ.
ದೇಶದ ಕಾನೂನಿನಲ್ಲಿ ರಕ್ಷಣೆ ಕೊಡಲು ಸಂವಿಧಾನದಲ್ಲಿ ಅವಕಾಶ ಇದೆ. ಕಾನೂನು ಬಾಹಿರ ಚಟುವಟಿಕೆ ಮಾಡಿದರೆ, ಏನು ತೀರ್ಪು ಬೇಕು ಅದು ಕೊಡ್ತಾರೆ. ಕಾನೂನಿನ ಒಳಗೆ ಇದ್ದರೆ ಏನು ಬೇಕಾದರೂ ಆಗಬಹುದು. ನಾನು ಸಿದ್ದರಾಮಯ್ಯ ಅವರಿಗೆ ಏನು ಹೇಳಲ್ಲ. ನನ್ನ ಅಭಿಪ್ರಾಯ ನಾನು ಹೇಳಲ್ಲ. ಕುಮಾರಸ್ವಾಮಿ ಏನೋ ಮಾಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ನೈತಿಕತೆ ಏನು ಎನ್ನುವುದು ಕ್ಲಿಯರ್ ಆಗಬೇಕು ಎಂದು ಹೇಳಿದ್ದಾರೆ.