ಮಂಗಳೂರು(ದಕ್ಷಿಣ ಕನ್ನಡ):ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ. ಕಾಸರಗೋಡಿನ ಮಂಜೇಶ್ವರ ಬಂದ್ಯೋಡು ನಿವಾಸಿ ಮುಹಮ್ಮದ್ ನೌಫಾಲ್ (24) ಮೃತಪಟ್ಟ ಕೈದಿ.
ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ - Undertrial Prisoner Suicide - UNDERTRIAL PRISONER SUICIDE
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.
Published : May 7, 2024, 10:52 AM IST
|Updated : May 7, 2024, 12:36 PM IST
2022ರ ಡಿಸೆಂಬರ್ನಲ್ಲಿ ಮುಹಮ್ಮದ್ ನೌಫಾಲ್ ಎನ್ಡಿಪಿಎಸ್ ಕಾಯ್ದೆಯಡಿ ಕೊಣಾಜೆ ಪೊಲೀಸರಿಂದ ಅರೆಸ್ಟ್ ಆಗಿದ್ದ. ಆ ನಂತರ ಮಂಗಳೂರು ಜೈಲಿನಲ್ಲಿದ್ದ. ಆತನಿಗೆ ಜಾಮೀನು ಕೊಡಿಸಲು ಯಾರೂ ಬಂದಿರಲಿಲ್ಲ. ಜೈಲಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಈ ಚಿಕಿತ್ಸೆಗೆಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಏಪ್ರಿಲ್ 25ರಂದು ದಾಖಲಿಸಲಾಗಿತ್ತು. ಮೇ 6ರಂದು ನಸುಕಿನ ವೇಳೆ 4 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೇ ಕೊಠಡಿಯಲ್ಲಿ ಇತರೆ ನಾಲ್ವರು ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಹೊರಗಡೆ ಕಾವಲಿಗೆ ಪೊಲೀಸರಿದ್ದರು. ಅದರ ನಡುವೆಯೂ ಈತ ಸಾವಿಗೆ ಶರಣಾಗಿದ್ದಾನೆ.
ಇದನ್ನೂ ಓದಿ:ಕಾರವಾರ, ಶಿವಮೊಗ್ಗದಲ್ಲಿ ಕೈಕೊಟ್ಟ ಮತಯಂತ್ರ, ತಡವಾದ ಮತದಾನ - Voting Machine Problem