ಕರ್ನಾಟಕ

karnataka

ETV Bharat / state

ಬೆಂಗಳೂರು: ಮರದ ಕೊಂಬೆ ಬಿದ್ದು ದ್ವಿಚಕ್ರ ವಾಹನ ಸವಾರನ ಬೆನ್ನುಮೂಳೆ ಮುರಿತ, ಪ್ರಕರಣ ದಾಖಲು - Broken tree branch - BROKEN TREE BRANCH

ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಮಾರ್ಚ್ 7ರಂದು ಬೈಕ್​ ಸವಾರ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಬೆನ್ನುಮೂಳೆ ಮುರಿದ್ದು, ಬಿಬಿಎಂಪಿ ಹಾಗೂ ಖಾಸಗಿ ಶಾಲಾಡಳಿತಗಳ ವಿರುದ್ಧ ಕೇಸ್​ ಆಗಿದೆ.

BROKEN TREE BRANCH
ಮುರಿದು ಬಿದ್ದ ಮರದ ಕೊಂಬೆ

By ETV Bharat Karnataka Team

Published : Mar 22, 2024, 4:21 PM IST

ಬೆಂಗಳೂರು : ಬಿಬಿಎಂಪಿ ಹಾಗೂ ಖಾಸಗಿ ಶಾಲಾಡಳಿತದ ನಿರ್ಲಕ್ಷ್ಯದಿಂದ ಮರದ ಕೊಂಬೆ ಮುರಿದು ಬಿದ್ದು ದ್ವಿಚಕ್ರ ವಾಹನ ಸವಾರನ ಬೆನ್ನು ಮೂಳೆ ಮುರಿದಿರುವ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ನಾಗರಬಾವಿ ನಿವಾಸಿ ಚಂದನ್ ಅವರು ನೀಡಿದ ದೂರಿನ ಅನ್ವಯ ಖಾಸಗಿ ಶಾಲೆ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಮಾರ್ಚ್ 7ರಂದು ರೆಸಿಡೆನ್ಸಿ ರಸ್ತೆಯಲ್ಲಿ ನಡೆದಿದೆ.

ಚಂದನ್, ರಿಚ್ಮಂಡ್ ರಸ್ತೆಯ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 7 ರಂದು ಬೆಳಿಗ್ಗೆ ಕೆಲಸಕ್ಕೆ ಎಂದು ತೆರಳುವಾಗ ಖಾಸಗಿ ಶಾಲೆಯ ಕಾಂಪೌಂಡ್ ಒಳಗಿದ್ದ ರಸ್ತೆಗೆ ಚಾಚಿಕೊಂಡಿದ್ದ ಮರದ ಕೊಂಬೆ ಚಂದನ್ ಮೇಲೆ ಮುರಿದು ಬಿದ್ದಿದೆ. ಇದರಿಂದ ರಸ್ತೆ ಮೇಲೆ ಬಿದ್ದ ಚಂದನ್​ರ ಕುತ್ತಿಗೆಗೆ ಗಾಯವಾಗಿದೆ. ತಕ್ಷಣ ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ನಡೆಸಿದ ವೈದ್ಯರು, ಬೆನ್ನು ಮೂಳೆ ಮುರಿದಿರುವುದಾಗಿ ತಿಳಿಸಿದ್ದರು. ಕಳೆದ 14 ದಿನಗಳಿಂದ ಚಂದನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ :ಬೆಂಗಳೂರು: ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ - A MAN COMMITTED SUICIDE

ABOUT THE AUTHOR

...view details