ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಒಂದೇ ದಿನ ಎರಡು ಕಡೆ ಕರಡಿ ದಾಳಿ: ವೃದ್ಧ ಸಾವು - bear attack - BEAR ATTACK

ಕೊಪ್ಪಳದಲ್ಲಿ ಒಂದೇ ದಿನ ಎರಡು ಕಡೆ ಕರಡಿ ದಾಳಿ ನಡೆಸಿದ್ದು, ಘಟನೆಯಿಂದ ವೃದ್ಧನೊಬ್ಬ ಮೃತಪಟ್ಟಿದ್ದಾನೆ.

ಕೊಪ್ಪಳದಲ್ಲಿ ಒಂದೇ ದಿನ ಎರಡು ಕಡೆ ಕರಡಿ ದಾಳಿ
ಕೊಪ್ಪಳದಲ್ಲಿ ಒಂದೇ ದಿನ ಎರಡು ಕಡೆ ಕರಡಿ ದಾಳಿ

By ETV Bharat Karnataka Team

Published : Apr 19, 2024, 10:31 AM IST

ಕೊಪ್ಪಳ:ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಹತ್ತಿರ ಗುರುವಾರ ವೃದ್ಧನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಜರುಗಿದೆ. ಕರಡಿ ದಾಳಿಯಿಂದ ವೃದ್ಧನಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಚನ್ನಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮಸ್ಥರು ಕರಡಿಯನ್ನು ದೇವಸ್ಥಾನದಲ್ಲಿ ಸೆರೆ ಹಿಡಿದು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ಆದರೆ, ಕರಡಿ ಅಲ್ಲಿಂದ ತಪ್ಪಿಸಿಕೊಂಡು ವೃದ್ಧನ ಮೇಲೆ ದಾಳಿ‌ ಮಾಡಿದೆ. ಕರಡಿ ಸೆರೆ ಹಿಡಿಯಲು ಬೋನ್ ಹಾಗೂ ಇತರ ವಸ್ತುಗಳನ್ನು ತರದೇ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ಜರುಗಿತು.

ಮತ್ತೊಂದು ಕರಡಿ ದಾಳಿ:ಕೊಪ್ಪಳ ತಾಲೂಕಿನ ನಾಗೇಶನಹಳ್ಳಿಯಲ್ಲಿ ಮತ್ತೊಂದು ಕರಡಿ ದಾಳಿ ಸಂಭವಿಸಿದ್ದು, ಕರಡಿ ದಾಳಿಗೆ ನಾಗೇಶನಹಳ್ಳಿಯ ಈರಪ್ಪ, ಹೇಮವ್ವ ಹಾಗೂ ಗೌತಮಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಗೇಶನಹಳ್ಳಿಯಿಂದ ಬೈಕ್​ನಲ್ಲಿ ತೋಟಕ್ಕೆ ಹೊರಟಿದ್ದವರ ಮೇಲೆ ನಡುರಸ್ತೆಯಲ್ಲಿ ಕರಡಿ ದಾಳಿ ಮಾಡಿದೆ. ಗಂಭೀರ ಗಾಯಗೊಂಡವರನ್ನು ಹುಬ್ಬಳ್ಳಿ ಎಸ್​ಡಿಎಂ ಆಸ್ಪತ್ರೆ ದಾಖಲು ಮಾಡಲಾಗಿದೆ.

ಕೊಪ್ಪಳದಲ್ಲಿ ಒಂದೇ ದಿನ ಎರಡು ಕಡೆ ಕರಡಿ ದಾಳಿ ನಡೆದಿದ್ದು, ಓರ್ವ ಸಾವಿಗೀಡಾಗಿದ್ದು, ಮೂವರಿಗೆ ಗಾಯಗೊಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮೃತರಿಗೆ ಮತ್ತು ಚಿಕಿತ್ಸೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ವ್ಯಕ್ತಿ ಮೇಲೆ ದಾಳಿ ಮಾಡಿದ್ದ ಕರಡಿ ಸೆರೆ

ABOUT THE AUTHOR

...view details