ಬೆಂಗಳೂರು : ಜಿಂಕೆ ಕೊಂಬು ಹಾಗೂ ತಲೆಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತಾರಾಜ್ಯ ಕಳ್ಳಸಾಗಣೆದಾರರನ್ನ ಕಾಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಫಣಿಂದರ್ ಹಾಗೂ ರೆಹಮತುಲ್ಲಾ ಎಂಬುವವರು ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಮಾತನಾಡಿದ್ದು, ಜಿಂಕೆಗಳನ್ನು ಭೇಟೆಯಾಡಿ ಆ ಜಿಂಕೆ ಕೊಂಬುಗಳನ್ನ ಮಾರಾಟ ಮಾಡಲು ಪ್ರಯತ್ನ ಮಾಡಿರುವಂತಹ ಅಂತಾರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಕಾಡುಗೋಡಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಮಂಗಳವಾರ ನಡೆದಿರುವ ಕಾರ್ಯಾಚರಣೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಒಟ್ಟು 33 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.