ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಗಣಪತಿ ತರಲು ಹೊರಟಿದ್ದ ವಾಹನ ಅಪಘಾತ: ಇಬ್ಬರು ಯುವಕರ ಸಾವು - Tata Ace Accident - TATA ACE ACCIDENT

ಗಣೇಶನ ಹಬ್ಬದ ದಿನವೇ ದುರಂತ ಘಟನೆ ಸಂಭವಿಸಿದೆ. ಗಜಮುಖನ ಮೂರ್ತಿ ತರಲು ಹೊರಟಿದ್ದ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಯುವಕರು ಕೊನೆಯುಸಿರೆಳೆದಿದ್ದು, ಇತರ ಐವರಿಗೆ ಗಂಭೀರ ಗಾಯಗಳಾಗಿವೆ.

accident
ಮೃತ ಯುವಕರು (ETV Bharat)

By ETV Bharat Karnataka Team

Published : Sep 7, 2024, 5:37 PM IST

ಚಿಕ್ಕಮಗಳೂರು:ದೇಶದೆಲ್ಲೆಡೆ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಎಲ್ಲೆಡೆ ವಕ್ರತುಂಡನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಆರಾಧನೆ, ಪೂಜೆ ನಡೆಸಲಾಗುತ್ತಿದೆ. ಈ ನಡುವೆ ಗಣೇಶನ ತರಲು ತೆರಳಿದ್ದ ಯುವಕರಿಬ್ಬರು ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

ಟಾಟಾ ಏಸ್ ವಾಹನದಲ್ಲಿ ಗಣಪತಿ ತರಲು ತೆರಳುತ್ತಿದ್ದ ವೇಳೆ ಪಲ್ಟಿ ಆಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ದುರ್ಘಟನೆ ನಡೆದಿದೆ. 9 ಜನ ಯುವಕರಿದ್ದ ವಾಹನ ಅಪಘಾತಕ್ಕೀಡಾಗಿದೆ.

ಶ್ರೀಧರ್ (20) ಹಾಗೂ ಧನುಷ್ (20) ಮೃತ ಯುವಕರಾಗಿದ್ದಾರೆ. ಅಪಘಾತದಲ್ಲಿ ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ರವಾನಿಸಲಾಗಿದೆ. ಅಲ್ಲದೇ ವಾಹನದಲ್ಲಿದ್ದ ಇತರ ಮೂವರು ಯುವಕರಿಗೂ ಹೆಚ್ಚಿನ ಗಾಯಗಳಾಗಿದೆ. ಅವರನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಹಾಗೂ ಗಾಯಾಳುಗಳೆಲ್ಲ ಲಿಂಗದಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಯುವಕರು ಗಣಪತಿ ಮೂರ್ತಿ ತರಲು ತರೀಕೆರೆಗೆ ಹೊರಟಾಗ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಟಾಟಾ ಏಸ್ ಪಲ್ಟಿ ಆಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣೇಶನ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಊರಿನಲ್ಲೀಗ ಸೂತಕದ ಛಾಯೆ ಆವರಿಸಿದೆ.

ಇದನ್ನೂ ಓದಿ:ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ ಸಾವು! - Woman Suicide Case

ABOUT THE AUTHOR

...view details