ಕರ್ನಾಟಕ

karnataka

ETV Bharat / state

ಧಾರವಾಡ : ಈಜಲು ಹೋದ ಇಬ್ಬರು ಬಾಲಕರು ಸಾವು - Two boys died - TWO BOYS DIED

ಧಾರವಾಡದ ಕಲ್ಲಿನ ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

two-boys-died-while-swimming-in-dharwad
ಈಜಲು ಹೋದ ಇಬ್ಬರು ಬಾಲಕರು ಸಾವು (ETV Bharat)

By ETV Bharat Karnataka Team

Published : Jun 17, 2024, 5:42 PM IST

ಈಜಲು ಹೋದ ಇಬ್ಬರು ಬಾಲಕರು ಸಾವು (ETV Bharat)

ಧಾರವಾಡ :ಈಜಲು ಹೋಗಿದ್ದ ಇಬ್ಬರು ಬಾಲಕರು ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಮನಸೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಧಾರವಾಡದ ಮಾಳಮಡ್ಡಿಯ ಶ್ರೇಯಸ್ ಹಾಗೂ ದೃವಾ ಎಂಬುವರು ಮೃತಪಟ್ಟ ಬಾಲಕರಾಗಿದ್ದಾರೆ. ಒಟ್ಟು ಆರು ಬಾಲಕರು ಸೇರಿಕೊಂಡು ಹೊರವಲಯಕ್ಕೆ ಆಗಮಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕ್ವಾರಿಯಲ್ಲಿ ನೀರು ನೋಡಿ ಈಜಲು ಹೋದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಆರು ಬಾಲಕರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಶ್ರೇಯಸ್ ಎಂಬಾತನ ಶವವನ್ನು ಹೊರತೆಗೆದಿದ್ದು, ಇನ್ನೋರ್ವನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಧಾರವಾಡ ವಿದ್ಯಾಗಿರಿ ಠಾಣೆ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ :ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಬಾಲಕರು ನೀರಲ್ಲಿ ಮುಳುಗಿ ಸಾವು - Four children drown

ABOUT THE AUTHOR

...view details