ಕರ್ನಾಟಕ

karnataka

ETV Bharat / state

ಕಟ್ಟಡ ನಿರ್ಮಾಣ ಅಕ್ರಮವೆಂದು ಬಿಂಬಿಸಿ ಬಿಲ್ಡರ್ಸ್​ಗೆ ಬೆದರಿಕೆ; ನಕಲಿ ಆರ್​ಟಿಐ ಕಾರ್ಯಕರ್ತ ಸೇರಿ ಇಬ್ಬರ ಬಂಧನ - Illegal building construction

ಅಕ್ರಮವಾಗಿ ಕಟ್ಟಡ ನಿರ್ಮಿಸಿ ಕಾನೂನು ಉಲ್ಲಂಘಿಸುತ್ತಿದ್ದೀರಾ ಎಂದು ಲಕ್ಷಾಂತರ ರೂಪಾಯಿ ಹಣ ಪಡೆಯಲು ಮುಂದಾದ ನಕಲಿ ಆರ್​ಟಿಐ ಕಾರ್ಯಕರ್ತ ಮತ್ತು ರೌಡಿಶೀಟರ್ ಜೈಲು ಪಾಲಾಗಿದ್ದಾರೆ.​

ನಕಲಿ ಆರ್​ಟಿಐ ಕಾರ್ಯಕರ್ತ ಮತ್ತು ರೌಡಿಶೀಟರ್ ಬಂಧನ
ನಕಲಿ ಆರ್​ಟಿಐ ಕಾರ್ಯಕರ್ತ ಮತ್ತು ರೌಡಿಶೀಟರ್ ಬಂಧನ

By ETV Bharat Karnataka Team

Published : Feb 1, 2024, 12:23 PM IST

ಬೆಂಗಳೂರು : ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ಆರೋಪಿಸಿ ಬಿಲ್ಡರ್​ಗಳನ್ನು ಬೆದರಿಸಿ ಲಕ್ಷ‌-ಲಕ್ಷ ಹಣ ನೀಡುವಂತೆ ಬೆದರಿಸುತ್ತಿದ್ದ ರೌಡಿಶೀಟರ್ ಹಾಗೂ ನಕಲಿ ಆರ್​ಟಿಐ ಕಾರ್ಯಕರ್ತನನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ತಾವರಕೆರೆ ಠಾಣೆ ವ್ಯಾಪ್ತಿಯ ರೌಡಿಶೀಟರ್ ರಕ್ಷಿತ್ (26) ಹಾಗೂ ಜೈಹಿಂದ್​ ಸಂಘಟನೆಯ ಅಧ್ಯಕ್ಷ ರಾಘವ ಗೌಡ ಬಂಧಿತ ಆರೋಪಿಗಳಾಗಿದ್ದಾರೆ. ರಕ್ಷಿತ್ ಹಾಗೂ ರಾಘವಗೌಡ ಇಬ್ಬರು ತಾವರಕೆರೆ ಮೂಲದವರಾಗಿದ್ದಾರೆ. ಅಕ್ರಮವಾಗಿ ಹಣ ಸಂಪಾದನೆ‌ ಮಾಡಲು ರಾಘವಗೌಡ, ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ದೊಡ್ಡ ದೊಡ್ಡ ಭೂ ವೆಂಚರ್ಸ್​ಗಳಿಗೆ ತೆರಳಿ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಕಾನೂನು ಉಲ್ಲಂಘಿಸುತ್ತಿದ್ದೀರಾ ಎಂದು ಹೆದರಿಸಿ ಅವರಿಂದ ಹಣ ವಸೂಲಿಗೆ ಇಳಿದಿದ್ದರು.‌

ಇದೇ ರೀತಿ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರೋಡ್​ನಲ್ಲಿರುವ ಬಿಂದು ವೆಂಚರ್ಸ್ ಮಾಲೀಕರ ಬಳಿ ರೌಡಿಶೀಟರ್​ನನ್ನು ಕರೆದೊಯ್ದು ತಾನು‌ ಆರ್​ಟಿಐ ಕಾರ್ಯಕರ್ತನಾಗಿದ್ದು, ನಿಮ್ಮ ಸಂಸ್ಥೆಯು ಬಿಬಿಎಂಪಿಯಿಂದ ಮಂಜೂರಾದ ಯೋಜನೆಯಂತೆ ಕಟ್ಟಡ ನಿರ್ಮಿಸದೆ ಅಕ್ರಮವೆಸಗಿದ್ದೀರಾ ಎಂದು ಬೆದರಿಸಿದ್ದರು. 80 ಲಕ್ಷ ರೂ. ಹಣ ನೀಡದಿದ್ದರೆ ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಲಾಗುವುದು ಎಂದು ಧಮ್ಕಿ ಹಾಕಿದ್ದರು.

ಜೊತೆಗೆ ವಿಜಯನಗರ, ರಾಜಾಜಿನಗರ ಸೇರಿದಂತೆ ಹಲವೆಡೆ ರಿಯಲ್ ಎಸ್ಟೇಟ್ ಹಾಗೂ ಭೂ ಡೆವಲಪರ್ಸ್ ಮಾಲೀಕರನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತನಾಗಿರುವ ರಕ್ಷಿತ್, 2021 ರಲ್ಲಿ ತಾವರಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆರ್​ಟಿಐ ಕಾರ್ಯಕರ್ತ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರು: ಹಣ ವರ್ಗಾವಣೆ ಸೋಗಿನಲ್ಲಿ ಯಾಮಾರಿಸುತ್ತಿದ್ದ ವಂಚಕನ ಬಂಧನ

ABOUT THE AUTHOR

...view details