ಕರ್ನಾಟಕ

karnataka

ETV Bharat / state

ಪ್ರಚಾರದ ಹುಚ್ಚು: ಮೂಕಸನ್ನೆಯನ್ನ ಅವಹೇಳನ ರೀತಿ ವಿಡಿಯೊ ಮಾಡಿದ್ದ ರೆಡಿಯೋ ಜಾಕಿ ಸೇರಿ ಇಬ್ಬರ ಬಂಧನ - radio jockey arrested - RADIO JOCKEY ARRESTED

ಮೂಕಸನ್ನೆಯನ್ನು ಅವಹೇಳನ ರೀತಿ ವಿಡಿಯೋ ಮಾಡಿದ್ದ ರೆಡಿಯೋ ಜಾಕಿ ಸೇರಿ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

two-arrested
ರೆಡಿಯೋ ಜಾಕಿ ಸೇರಿ ಇಬ್ಬರ ಬಂಧನ (ETV Bharat)

By ETV Bharat Karnataka Team

Published : Jul 26, 2024, 4:43 PM IST

ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಶಾಲಿ ಮಾಧ್ಯಮವಾಗಿದೆ. ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿದರೆ ರಾತ್ರೋ ರಾತ್ರಿ ಟ್ರೆಂಡ್ ಆಗಿ ಸ್ಟಾರ್ ಆಗುತ್ತೇವೆ ಎಂಬ ಭ್ರಮೆ ಯುವ ಜನಾಂಗದಲ್ಲಿದೆ. ಇದೀಗ ಪಬ್ಲಿಸಿಟಿ ಪಡೆಯುವ ಉಮೇದಿನಲ್ಲಿ ಇಬ್ಬರು ಯುವಕರು ಸಮುದಾಯವೊಂದರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜಕಾರಣಿಗಳನ್ನ ಅಣಕಿಸುವ ಬರದಲ್ಲಿ ಮಾತು ಬಾರದ ಮೂಗರು ಬಳಸುವ ಸನ್ನೆಯನ್ನ ಅಶ್ಲೀಲವಾಗಿ ತೋರಿಸಿದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಶಂಕರ್ ಎಂಬುವರು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಎಫ್​ಎಂ ರೆಡಿಯೋದಲ್ಲಿ ಕೆಲಸ‌ ಮಾಡುವ ರೋಹನ್ ಕಾರಿಯಪ್ಪ‌ ಮತ್ತು ಶರವಣ ಭಟ್ಟಾಚಾರ್ಯ ಎಂಬುವರನ್ನ ಬಂಧಿಸಿದ್ದಾರೆ.

ಮೂಕ ಭಾಷೆ ಸನ್ನೆಯನ್ನ ತುಂಬಾ ಕೀಳು ಮಟ್ಟದಲ್ಲಿ ಅವಹೇಳನ ಮಾಡಿ ರೀಲ್ಸ್ ಮಾಡಿದ್ದರು. ರೋಹನ್ ಹಿಂದಿಯಲ್ಲಿ ರಾಜಕೀಯ ಬಗ್ಗೆ ಮಾತನಾಡಿದ್ದರೆ, ಶರವಣ ಅದನ್ನ ಮೂಕ ಸನ್ನೆಯಲ್ಲಿ ಅವಹೇಳನ ಮಾಡಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ‌ಹಲವು ಸಂಘಟನೆಗಳು ದೆಹಲಿಯಲ್ಲಿ ದೂರು ನೀಡಿದ್ದವು. ವಿಡಿಯೊ ಮಾಡಿರುವುದು ಬೆಂಗಳೂರಿನವರು ಎಂದು ಗೊತ್ತಾಗಿ ಪೊಲೀಸ್ ಕಮಿಷನರ್​ಗೆ ದೂರು ಸಲ್ಲಿಸಲಾಗಿತ್ತು.

ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳ ಮೇಲೆ ವಿಕಲಚೇತನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ವಿಡಿಯೋ ಡಿಲಿಟ್ ಮಾಡಿ ಕ್ಷಮೆ ಕೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ರೌಡಿಶೀಟರ್ಸ್ ಹೆಸರಿನ ಫ್ಯಾನ್ ಪೇಜ್​ಗಳಿಗೆ ಸಿಸಿಬಿ ಪೊಲೀಸರ ಕೊಕ್ಕೆ - Fan Pages Of Rowdy Sheeters

ABOUT THE AUTHOR

...view details